ಮೈಸೂರಿನಲ್ಲಿ ನರೇಂದ್ರ ಮೋದಿ ಜೊತೆ ಮುಖ್ಯ ವೇದಿಕೆಯಲ್ಲಿ ಐವರಿಗಷ್ಟೇ ಅವಕಾಶ

1 min read

ಮೈಸೂರು: ಯೋಗಪಟುಗಳು ಬೆಳಗ್ಗೆ 5.30ರ ಒಳಗೆ ಅರಮನೆ ಆವರಣಕ್ಕೆ ಆಗಮಿಸಬೇಕು. 6.30ರಿಂದ 7ರ ವರೆಗೆ ವೇದಿಕೆ ಕಾರ್ಯಕ್ರಮ. ಬೆ.7ರಿಂದ 7.45ರ ವರೆಗೆ ಪ್ರಧಾನಿ ಮೋದಿಯವರೊಂದಿಗೆ ಯೋಗ ಪ್ರದರ್ಶನ. ಜೂ.20ರಂದೇ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಬರಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಜೂ.21ರಂದು ಮೈಸೂರಿನ ಅರಮನೆ ಮುಂಭಾಗ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮುಖ್ಯ ವೇದಿಕೆಯಲ್ಲಿ ನಾಲ್ಕರಿಂದ ಐದು ಜನರಿಗೆ ಮಾತ್ರ ಅವಕಾಶ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಕಾರ್ಯಾಲಯದಿಂದ ಒಂದಷ್ಟು ಮಾಹಿತಿ ಬಂದಿದೆ. ಒಂದೇ ಜಾಗದಲ್ಲಿ ಅಧಿಕೃತ ಕಾರ‍್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಜೂ.21ರಂದು ಬೆ.6.30ಕ್ಕೆ ಅಂಬಾ ವಿಲಾಸ ಅರಮನೆಗೆ ಪ್ರಧಾನಿ ಆಗಮಿಸುತ್ತಾರೆ. ಸಿಎಂ, ರಾಜ್ಯಪಾಲರು, ಕೇಂದ್ರ ಆಯುಷ್‌ ಇಲಾಖೆ ಸಚಿವರು ಹಾಗೂ ಉಸ್ತುವಾರಿ ಸಚಿವರಿಗೆ ಮಾತ್ರ ವೇದಿಕೆಯಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ ಎಂದರು

ಯೋಗಪಟುಗಳು ಬೆಳಗ್ಗೆ 5.30ರ ಒಳಗೆ ಅರಮನೆ ಆವರಣಕ್ಕೆ ಆಗಮಿಸಬೇಕು. 6.30ರಿಂದ 7ರ ವರೆಗೆ ವೇದಿಕೆ ಕಾರ್ಯಕ್ರಮ. ಬೆ.7ರಿಂದ 7.45ರ ವರೆಗೆ ಪ್ರಧಾನಿ ಮೋದಿಯವರೊಂದಿಗೆ ಯೋಗ ಪ್ರದರ್ಶನ.

ಜೂ.20ರಂದೇ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಬರಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 1 ಲಕ್ಷ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಇದೇ ವೇಳೆ ಅವರನ್ನು ಚಾಮುಂಡಿ ಬೆಟ್ಟ ಹಾಗೂ ಸುತ್ತೂರು ಮಠಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಜೂ.20ರ ಕಾರ್ಯಕ್ರಮ ಇನ್ನೂ ಅಧಿಕೃತವಾಗಿಲ್ಲ. ಯೋಗಪಟುಗಳ ನೋಂದಣಿ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

About Author

Leave a Reply

Your email address will not be published. Required fields are marked *