ಸಾ.ರಾ.ಮಹೇಶ್-ರೋಹಿಣಿ ಸಿಂಧೂರಿ ಸಂಘರ್ಷಕ್ಕೆ ತೆರೆ: ಯಾರೊಂದಿಗೂ ಅಗೌರವದಿಂದ ನಡೆದುಕೊಳ್ಳುವುದಿಲ್ಲ; ಸಿಂಧೂರಿ
1 min readಮೈಸೂರು,ಅ.8-ಶಾಸಕ ಸಾ.ರಾ.ಮಹೇಶ್ ಹಾಗೂ ಮೈಸೂರು ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರಸ್ಪರರ ಆರೋಪ-ಪ್ರತ್ಯಾರೋಪಕ್ಕೆ ಕೊನೆಗೂ ಪೂರ್ಣವಿರಾಮ ಸಿಕ್ಕಿದೆ ಎನ್ನಬಹುದು.
ಯಾರೊಂದಿಗೂ ಅಗೌರವದಿಂದ ನಡೆದುಕೊಳ್ಳುವುದಿಲ್ಲ ಎಂದು ರೋಹಿಣಿ ಸಿಂಧೂರಿ ಅವರು ಹಕ್ಕುಭಾದ್ಯತೆ ಸಮಿತಿಯಲ್ಲಿ ಹೇಳಿದ್ದಾರೆ.
ರೋಹಿಣಿ ಅವರು ಮೈಸೂರು ಡಿಸಿಯಾಗಿದ್ದಾಗ ಸಾ.ರಾ.ಮಹೇಶ್ ಅವರೊಂದಿಗೆ ಆರೋಪ ಪ್ರತ್ಯಾರೋಪಗಲ್ಲಿ ತೊಡಗಿದ್ದರು. ಹೀಗಾಗಿ ಸಾ.ರಾ. ಮಹೇಶ್ ಹಕ್ಕುಚ್ಯುತಿ ಮಂಡಿಸಿದ್ದರು. ಇದೀಗ ರೋಹಿಣಿ ಸಿಂಧೂರಿ ಅವರು ಹಕ್ಕುಬಾಧ್ಯತೆಗಳ ಸಮಿತಿ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಹಕ್ಕುಭಾಧ್ಯತಾ ಸಮಿತಿಗೆ ಗೌರವ ಸಲ್ಲಿಸಿದ ರೋಹಿಣಿ ಸಿಂಧೂರಿ ಅವರು, ʻಇನ್ನು ಮುಂದೆ ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಶಿಷ್ಟಾಚಾರವನ್ನು ಪರಿಪಾಲನೆ ಮಾಡುತ್ತೇನೆʼ ಎಂದು ತಿಳಿಸಿದ್ದಾರೆ.
ಜನವರಿ 12ರಂದು ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ಸಮಿತಿ ಸಭೆಯಲ್ಲಿ ನಡೆದಿದ್ದ ಸಮಿತಿ ಸಭೆಯಲ್ಲಿ ರೋಹಿಣಿ ವರ್ತನೆಗೆ ಸಾ.ರಾ.ಮಹೇಶ್ ಹಕ್ಕುಚ್ಯುತಿ ಮಂಡಿಸಿದ್ದರು.
ರೋಹಿಣಿ ಸಿಂಧೂರಿ ಅವರು ಮೈಸೂರು ಡಿಸಿಯಾಗಿದ್ದಾಗ ಕಾಗದ ಪತ್ರ ಸಮಿತಿ ನಡೆಸಿದ್ದ ಮುಡಾ ಸಭೆ, ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಭೆಗೂ ಗೈರಾಗಿದ್ದರು.