ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯನ್ನು ಅಪರಾಧ ಮುಕ್ತ ಠಾಣೆಯನ್ನಾಗಿ ಮಾಡಲು ಶಾಸಕ ಎಸ್.ಎ.ರಾಮದಾಸ್ ಪಣ
1 min readಮೈಸೂರು,ಸೆ.28-ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯನ್ನು ಅಪರಾಧ ಮುಕ್ತ ಠಾಣೆಯನ್ನಾಗಿ ಮಾಡಲು ಶಾಸಕ ಎಸ್.ಎ.ರಾಮದಾಸ್ ಪಣ ತೊಟ್ಟಿದ್ದಾರೆ.
ಜನಸ್ನೇಹಿ ಪೋಲಿಸ್ ಠಾಣೆಯನ್ನಾಗಿ ಪರಿವರ್ತಿಸಲು ಗೃಹ ಸಚಿವ ಅರಗ ಜ್ಞಾನೇಂದ್ರ ಚಾಲನೆ ನೀಡಿದರು. ನಗರದ ಕೆ.ಆರ್. ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರಂ ಪೋಲಿಸ್ ಠಾಣೆ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.
ಶೂನ್ಯ ಅಪರಾಧ ಪೊಲೀಸ್ ಠಾಣೆಯನ್ನಾಗಿಸಲು ಪಣ ತೊಟ್ಟಿರುವ ಶಾಸಕ ಎಸ್.ಎ.ರಾಮದಾಸ್, ಒಂದು ವರ್ಷದ ಅವಧಿಯಲ್ಲಿ ಜೀರೋ ಕ್ರೈಂ ಸ್ಟೇಷನ್ ಮಾಡಲು ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಡಿಸಿಪಿಗಳಾದ ಗೀತಾಪ್ರಸನ್ನ, ಪ್ರದೀಪ್ ಗುಂಟಿ, ಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು ಸೇರಿ ಹಲವಾರು ಉಪಸ್ಥಿತರಿದ್ದರು.