ಸೂರ್ಯಾಸ್ತದವರೆಗಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಸ್.ಎ.ರಾಮದಾಸ್‌

1 min read

ಮೈಸೂರು,ಅ.10-ದಸರಾ ಪ್ರಯುಕ್ತ ಇಂದು ಇಡೀ ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್‌ ಚಾಲನೆ ನೀಡಿದರು.

ಇಂದು ಬೆಳಿಗ್ಗೆ 6.10 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿದ್ದು, ಸೂರ್ಯಾಸ್ತದವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆಯವರೆಗೆ ಸುಮಾರು 10 ಕಾರ್ಯಕ್ರಮಗಳು ನಡೆಯಲಿದ್ದು, 351 ಜನ ಕಲಾವಿದರು ಭಾಗಿಯಾಗಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಮದಾಸ್‌ ಅವರು, ಸಂಸ್ಕೃತಿಯ ಕಲೆಯ ದೇವಾಲಯ ಆಗಿರುವಂತಹ ಅರಮನೆಯ ಆವರಣದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಗೀತದ ಮೂಲಕ ಆ ತಾಯಿಯನ್ನು ಸಂತೋಷಪಡಿಸಿ ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಡುವ ಕಾರ್ಯಕ್ರಮವಿದು. 2010 ರಲ್ಲಿ ಸ್ಥಳೀಯ ಕಲಾವಿದರಿಗೆ, ವಿದ್ವಾಂಸರಿಗೆ ಒಂದು ಗೌರವ ನೀಡಲು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಗೀತ, ಕಲಾ ಸೇವೆ ಮಾಡಬೇಕೆಂದು ಈ ರೀತಿಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಕಲೆಯನ್ನು ನಾಲ್ಕು ಜನಕ್ಕೆ ಹಂಚುವುದು ಇನ್ನೂ ದೊಡ್ಡ ಕಾರ್ಯ ಎಂದರು.

ಪ್ರಸ್ತುತ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ  ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಗೀತದ ಮನೆಗೆ ಸರ್ಕಾರಿ ಶಾಲೆಯ ಮಕ್ಕಳು ಎಂಬ ಕಾರ್ಯಕ್ರಮವನ್ನ ಪ್ರಾರಂಭಿಸಿದ್ದೇವೆ. ಜೊತೆಗೆ ನಿಮ್ಹಾನ್ಸ್ ನಲ್ಲಿ ಸಂಗೀತ ಚಿಕಿತ್ಸೆಗೆ ನಾನು ಮಂತ್ರಿಯಾಗಿದ್ದಾಗ ಪ್ರಾರಂಭ ಮಾಡಿದ್ದೆ. ಅದೇ ರೀತಿ ಇದೀಗ ಮೈಸೂರಿನ ಎರಡು ಆಸ್ಪತ್ರೆಯಲ್ಲಿಯೂ ಕೂಡಾ ಪ್ರಾರಂಭ ಮಾಡಿದ್ದೇವೆ ಅದಕ್ಕೆ ನಿಮ್ಮ ಸಹಕಾರ ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೆನ್ನಪ್ಪ ಹಾಗೂ ವಿವಿಧ ವಿದ್ವಾಂಸರುಗಳು, ಕಲಾವಿದರು ಇದ್ದರು.

About Author

Leave a Reply

Your email address will not be published. Required fields are marked *