ವಿಶ್ವ ಹುಲಿ ದಿನಾಚರಣೆ ಹಿನ್ನಲೆ ಹುಲಿ ದತ್ತು ಪಡೆದ ಸಚಿವ ಮುರುಗೇಶ್ ನಿರಾಣಿ

1 min read

ಮೈಸೂರು: ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಅವರು ತಮ್ಮ ಮೊಮ್ಮಗ ಸಮರ್ಥ್ ಎಂ ವಿಜಯ ನಿರಾಣಿ ಹೆಸರಿನಲ್ಲಿ 1 ವರ್ಷ ದ ಅವಧಿಗೆ ಕರ್ನಾಟಕ ಮೃಗಾಲಯ ದ ಮಾನ್ಯ ಎಂಬ ಹೆಣ್ಣು ಹುಲಿಯನ್ನು 2 ಲಕ್ಷದ ರೂ ದೇಣಿಗೆ ನೀಡಿ ದತ್ತು ಪಡೆದಿದ್ದಾರೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್ ರವರಿದ ದೇಣಿಗೆ ಪತ್ರವನ್ನು ನಿರಾಣಿ ಗ್ರೂಪ್ ನ ಆಪ್ತರಾದ ಕೇಬಲ್ ಮಹೇಶ್ ರವರು ಪಡೆದರು.

ಇದೇ ಸಂದರ್ಭ ಮಾತನಾಡಿದ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಶಿವಕುಮಾರ ಇಂದು ವಿಶ್ವ ಹುಲಿ ದಿನಾಚರಣೆ ಯಂದು ನಿರಾಣಿ ಕುಟುಂಬದವರು ಹುಲಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ ಸಹಕಾರವಾಗುತ್ತಿದೆ ಮೊದಲಿಗೆ ಅವರಿಗೆ ನಾನು ಅಭಿನಂದಿಸುತ್ತೇನೆ ಅಧಿಕಾರ ಪಡೆದ ನಂತರ ಸಾರ್ವಜನಿಕರಿಂದ ಮೃಗಾಲಯ ಪ್ರಾಣಿ ಪಕ್ಷಿಗಳ ಸಂಕುಲ ಉಳಿಯಲು ದೇಣಿಗೆ ರೂಪದಲ್ಲಿ ಇಂದು ಸಚಿವರಾದ ಮುರುಗೇಶ್ ನಿರಾಣಿ ರವರು ಮಾನ್ಯ ಎಂಬ ಹೆಣ್ಣು ಹುಲಿ ಹಾಗೂ ಶ್ರೀರಂಗಪಟ್ಟಣ ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ ರವರು ನಂದು ಮತ್ತು ನಿಧಿ ಎಂಬ ಮರಿ ಹುಲಿಯನ್ನು 1ಲಕ್ಷ ಕೊಟ್ಟು 1ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯದ ಪ್ರಾಧಿಕಾರವು ಅಭಿನಂದಿಸುತ್ತದೆ.

ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ,ನಗರ ಪಾಲಿಕಾ ಸದಸ್ಯರಾದ ಕೆ. ಜೆ. ರಮೇಶ್ ,ವಿಕ್ರಂ ಅಯ್ಯಂಗಾರ್, ಕರ್ನಾಟಕ ಮೃಗಾಲಯದ ಉಪ ನಿರ್ದೇಶಕರು ಮೋಹನ್ ಬಿದರಿ,ರಘು,ರಮೇಶ್ ,ಶ್ರೀರಂಗಪಟ್ಟಣದ ಬಿಜೆಪಿ ಮುಖಂಡರಾದ ಶ್ರೀಧರ್ ,ಪರಮೇಶ್ ಗೌಡ ,ಶ್ರೀನಿವಾಸ ಹಾಗೂ ಇನ್ನಿತರರು ಹಾಜರಿದ್ದರು ಹಾಗೂ ಮೃಗಾಲಯದ ಅಧಿಕಾರಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *