ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಸಂಭ್ರಮ! ರತ್ನಖಚಿತ ಕೀರಿಟ ಧಾರಣೆಗೆ ದಿನಗಣನೆ!
1 min readಮಂಡ್ಯ – ಮೇಲುಕೋಟೆ : ಆಷಾಡಮಾಸದ ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ 29ರಂದು ರಾತ್ರಿ ಚೆಲುವನಾರಾಯಣಸ್ವಾಮಿಗೆ ವಜ್ರ ಖಚಿತ ಶ್ರೀಕೃಷ್ಣರಾಜಮುಡಿ ಉತ್ಸವ ನೆರವೇರಲಿದೆ .
ಜುಲೈ 24ರ ಅಂಕುರಾರ್ಪಣೆಯೊಂದಿಗೆ ಆರಂಭವಾಗಲಿರುವ ಹತ್ತು ದಿನಗಳ ಆಷಾಢ ಜಾತ್ರಾ ಮಹೋತ್ಸವ ಆಗಸ್ಟ್ 4ರ ಪುಷ್ಪಯಾಗದವರೆಗೆ ಹತ್ತು ದಿನಗಳಕಾಲ ನೆರವೇರಲಿದೆ. ಕೊರೋನ ನಿರ್ಬಂಧದ ಕಾರಣ ಎಲ್ಲಾ ಉತ್ಸವಗಳೂ ಸಹ ದೇವಾಲಯದ ಒಳಭಾಗಕ್ಕೆ ಸೀಮಿತವಾಗಿ ನಡೆಯಲಿದೆ.
ಹೆಚ್ಚು ಭಕ್ತರು ಮೇಲುಕೋಟೆಗೆ ಬರುವ ಜುಲೈ 25ರ ಭಾನುವಾರ ನಡೆಯುವ ಮಹಾರಾಜರ ಜನ್ಮವರ್ಧಂತಿ ಹಾಗೂ ಮಹಾಭಿಷೇಕ, ಕಲ್ಯಾಣೋತ್ಸವ ದಿನ ಜಿಲ್ಲಾಧಿಕಾರಿಗಳ ಆದೇಶದಂತೆ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಭಂದಿಸಲಾಗಿದೆ.
ಆಷಾಡ ಜಾತ್ರಾ ಮಹೋತ್ಸವದಲ್ಲಿ ಪ್ರಮುಖ ದಿನವಾದ ಜುಲೈ 29 ರಂದು ರಾತ್ರಿ ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣರಾಜಮುಡಿ ಕಿರೀಟ ಧಾರಣೆ ಮಹೋತ್ಸವ ವೈಭವದಿಂದ ನೆರವೇರಲಿದೆ. ಇದಕ್ಕೂ ಪೂರ್ವಭಾವಿಯಾಗಿ ಜುಲೈ 25 ಭಾನುವಾರ ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ಅಂಗವಾಗಿ ಮಹಾಭಿಷೇಕ ಕಲ್ಯಾಣೋತ್ಸವ ನೆರವೇರಲಿದೆ.
ಕೋವಿಡ್ 19ರ ಎಲ್ಲಾ ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಉತ್ಸವವನ್ನು ಸಾಂಕೇತಿಕವಾಗಿ ದೇವಾಲಯದ ಒಳಪ್ರಾಕಾರದಲ್ಲಿ ನಡೆಸಲಾಗುತ್ತಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ತಿಳಿಸಿದ್ದಾರೆ.
ಬ್ರಹ್ಮೋತ್ಸವದಲ್ಲಿ ಜುಲೈ 24 ರಂದು ಅಂಕುರಾರ್ಪಣೆ.
ಜುಲೈ 25ರಂದು ಮಹಾಭಿಷೇಕ ಕಲ್ಯಾಣೋತ್ಸವ.
26 ರಂದು ಒಂದನೇ ತಿರುನಾಳ್ ಅಂಗವಾಗಿ ಬೆಳಿಗ್ಗೆ ಗರುಡ ಧ್ವಜಾರೋಹಣ ನೆರವೇರಿಸಿ ದೇವಾನು ದೇವತೆಗಳನ್ನು ಗರುಡದೇವನ ಮೂಲಕ ಬ್ರಹ್ಮೋತ್ಸವಕ್ಕೆ ಆಹ್ವಾನಿಸುವ ದ್ವಜಾರೋಹಣ ಸಂಜೆ ಭೇರಿತಾಡನ ತಿರುಪ್ಪೊರೈ, ಯಾಗಶಾಲಾ ಪ್ರವೇಶ.
ಜುಲೈ 27 ಶೇಷವಾಹನೋತ್ಸವ.
ಜುಲೈ 28 ನಾಗವಲ್ಲೀಮಹೋತ್ಸವ ನರಂದಾಳಿಕಾರೋಹಣ.
29 ರಂದು ಕೃಷ್ಣರಾಜಮುಡಿ ಕಿರೀಟಧಾರಣೆ.
30 ರಂದು ಪ್ರಹ್ಲಾದಪರಿಪಾಲನ.
31 ರಂದು ಗಜೇಂದ್ರಮೋಕ್ಷ.
ಆಗಸ್ಟ್ 1 ರಂದು ರಥೋತ್ಸವ.
ಆ.2 ರಂದು ತೆಪ್ಪೋತ್ಸವ.
ಆ.3 ತೀರ್ಥಸ್ನಾನ ಪಟ್ಟಾಭಿಷೇಕ
ಆ.4 ರಂದು ಪುಷ್ಪಯಾಗ ಕಾರ್ಯಕ್ರಮಗಳು ನಡೆಯಲಿವೆ.