ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ!
1 min readಮೇಕೆದಾಟು ಯೋಜನೆ ಆರಂಭಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಮೇಕೆದಾಟುಗೆ ಬೃಹತ್ ಪಾದಯಾತ್ರೆಗೆ ಚಾಲನೆ ಸಿಕ್ಕಿದ್ದು, ಗಣ್ಯರ ಸಮ್ಮುಖದಲ್ಲಿ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ನಗಾರಿ ಬಾರಿಸಿ, ರೈತಗೀತೆ ಹಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಡಿಕೆ ಸುರೇಶ್, ಹಿರಿಯ ಕೈ ಮುಖಂಡ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದ್ದು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ರು.
ಇನ್ನು ವೀಕೆಂಡ್ ಕರ್ಫ್ಯೂ ಮಧ್ಯೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಾರಥ್ಯದಲ್ಲಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಾಗಿದ್ದು ರೈತ ಗೀತೆ ಮೂಲಕ ಕಾರ್ಯಕರ್ತರು ಹೆಜ್ಜೆ ಹಾಕಿದರು. ಈ ವೇಳೆ ಕಾರ್ಯಕರ್ತರು ಘೋಷಣೆ ಕೂಗೂತ್ತ ಮುಂದೆ ಸಾಗಿದ್ರು.
165 ಕಿಮೀ ಪಾದಯಾತ್ರೆ :-
ಮೇಕೆದಾಟು ಜಲಾಶಯ ನಿರ್ಮಾಣದಿಂದ ಸಮುದ್ರಕ್ಕೆ ಹರಿದು ವ್ಯರ್ಥವಾಗಿ ಹೋಗುವ ಕಾವೇರಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ಇಂದು ನಾಯಕರು ಸುಮಾರು 15ರಿಂದ 20ಕಿಲೋ ಮೀಟರ್ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಕನಕಪುರದಿಂದ ಬೆಂಗಳೂರಿಗೆ 11 ದಿನಗಳ ಕಾಲ ಜನವರಿ 19ರವರೆಗೆ ಕೈಗೊಂಡಿರುವ ಪಾದಯಾತ್ರೆ ಇದಾಗಿದೆ. ರಾಮನಗರದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 2 ಸಾವಿರ ಪೋಲಿಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
- ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ಹೇಗಿದೆ.!?
ಹಲವು ಅಡ್ಡಿ ಆತಂಕಗಳ ನಡುವೆ ಮೇಕೆದಾಟು ಪಾದಯಾತ್ರೆಗೆ ಇಂದು ಕೈ ಪಡೆ ಕಹಳೆ ಮೊಳಗಿಸೋಕೆ ಸಜ್ಜಾಗಿದೆ. ಬರೋಬ್ಬರಿ 11 ದಿನ 165ಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ಸಾಗಲಿದೆ.
ಸಂಗಮದಿಂದ ಬೆಂಗಳೂರು ವರೆಗಿನ ರೂಟ್ ಮ್ಯಾಪ್ ಈ ರೀತಿ ಇದೆ.
ಮೊದಲ ದಿನ – 15 ಕಿ.ಮೀ. ಪಾದಯಾತ್ರೆ ಮೇಕೆದಾಟು ಸಂಗಮದಿಂದ ದೊಡ್ಡ ಆಲದಹಳ್ಳಿ ವರೆಗು ಪಾದಯಾತ್ರೆ.
ಎರಡನೇ ದಿನ- 16 ಕಿಲೋ ಮೀಟರ್ ಪಾದಯಾತ್ರೆ ದೊಡ್ಡ ಆಲದಹಳ್ಳಿಯಿಂದ ಕನಕಪುರದ ವರೆಗು.
ಮೂರನೇ ದಿನ : 14.5 ಕಿಲೋ ಮೀಟರ್ ಪಾದಯಾತ್ರೆ ಕನಕಪುರದಿಂದ ಚಿಕ್ಕೇಹಳ್ಳಿ ಗ್ರಾಮದವರೆಗೆ.
ನಾಲ್ಕನೇ ದಿನ : 15 ಕಿಲೋ ಮೀಟರ್ ಪಾದಯಾತ್ರೆ, ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್ ವರೆಗೆ.
ಐದನೇ ದಿನ : 13 ಕಿಲೋ ಮೀಟರ್ ಪಾದಯಾತ್ರೆ ರಾಮನಗರ ಟೌನ್ನಿಂದ ಬಿಡದಿ ಟೌನ್ ವರೆಗೆ.
ಆರನೇ ದಿನ : 16 ಕಿಲೋ ಮೀಟರ್ ಪಾದಯಾತ್ರೆ ಬಿಡದಿ ಟೌನ್ನಿಂದ ಕೆಂಗೇರಿ ಪೊಲೀಸ್ ಸ್ಟೇಷನ್ ವರೆಗು.
ಏಳನೇ ದಿನ : 15.5 ಕಿಲೋ ಮೀಟರ್ ಪಾದಯಾತ್ರೆ ಕೆಂಗೇರಿ ಪೊಲೀಸ್ ಸ್ಟೇಷನ್ನಿಂದ ಸಾರಕ್ಕಿ ಸಿಗ್ನಲ್ ವರೆಗೆ.
ಎಂಟನೇ ದಿನ : 16 ಕಿಲೋ ಮೀಟರ್ ಪಾದಯಾತ್ರೆ ಸಾರಕ್ಕಿ ಸಿಗ್ನಲ್ನಿಂದ ಮಾರತ್ತಹಳ್ಳಿ ಜಂಕ್ಷನ್ ವರೆಗೆ.
ಒಂಬತ್ತನೇ ದಿನ : 13.5 ಕಿಲೋ ಮೀಟರ್ ಪಾದಯಾತ್ರೆ, ಮಾರತ್ತಹಳ್ಳಿ ಜಂಕ್ಷನ್ನಿಂದ ಲಿಂಗರಾಜಿಪುರ ಜಂಕ್ಷನ್ ವರೆಗೆ.
ಹತ್ತನೇ ದಿನ : 14 ಕಿಲೋ ಮೀಟರ್ ಪಾದಯಾತ್ರೆ ಲಿಂಗರಾಜಿಪುರ ಜಂಕ್ಷನ್ನಿಂದ ಡಿಸಿಸಿ ಕಾಂಗ್ರೆಸ್ ಭವನದ ವರೆಗೆ.
ಹನ್ನೊಂದನೇ ದಿನ : 8 ಕಿಲೋ ಮೀಟರ್ ಪಾದಯಾತ್ರೆ ಕಾಂಗ್ರೆಸ್ ಭವನದಿಂದ ನ್ಯಾಷನಲ್ ಕಾಲೇಜು, ಬಸವನಗುಡಿ ವರೆಗೆ.
ಇನ್ನು ಜನವರಿ 19ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದು ಇದೇವೇಳೆ ತಿಳಿಸಲಾಗಿದೆ. ಅಲ್ಲದೆ ಇಲ್ಲಿಯವರೆಗು ಕೂಡ ಬಿಜೆಪಿ ಇದಕ್ಕೆ ಅವಕಾಶ ನೀಡುತ್ತ ? ಅಥವಾ ಕಟ್ಟಿ ಹಾಕುತ್ತ ಎಂಬುದೇ ಸದ್ಯದ ಪ್ರಶ್ನೆ.