ನಗರಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ಶಿವಕುಮಾರ್ ಆಯ್ಕೆ
1 min readಮೈಸೂರು,ಸೆ.೩೦-ಮೈಸೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರಾಗಿ ಬಿಜೆಪಿಯ ಹಿರಿಯ ಸದಸ್ಯ ಶಿವಕುಮಾರ್ ಆಯ್ಕೆಯಾದ್ದಾರೆ.
ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಶಿವಕುಮಾರ್ ಅವರನ್ನು ಆಡಳಿತ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಅಧಿಕಾರ ವಹಿಸಿಕೊಂಡರು.
ಪಾಲಿಕೆಯ ಪ್ರತಿಪಕ್ಷದ ನಾಯಕರಾಗಿದ್ದ ಶಿವಕುಮಾರ್, ಬಿಜೆಪಿ ಆಡಳಿತಕ್ಕೆ ಬಂದಿದ್ದರಿಂದ ಈಗ ಆಡಳಿತ ಪಕ್ಷದ ನಾಯಕರಾಗಿ ನಿಯೋಜನೆಗೊಂಡರು.
ನಗರಪಾಲಿಕೆಯ ಸುಣ್ಣದಕೇರಿ ವಾರ್ಡಿನಿಂದ ಎರಡು ಬಾರಿ ಜಯಗಳಿಸಿದ್ದ ಅವರು ವಾರ್ಡ್ ಬದಲಾವಣೆಯಾಗಿದ್ದರಿಂದ ಕುವೆಂಪುನಗರ ವಾರ್ಡಿನಲ್ಲಿ ಕಣಕ್ಕಿಳಿದು ಹ್ಯಾಟ್ರಿಕ್ ಗೆಲುವು ಸಾಧಿಸಿದರು.
ಜಾ.ದಳ- ಬಿಜೆಪಿ ಮೈತ್ರಿ ಆಡಳಿತದಲ್ಲಿ ಹಣಕಾಸು ಸ್ಥಾಯಿ ಸಮಿತಿ, ವರ್ಕ್ಸ್ ಕಮಿಟಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್-ಜಾ.ದಳ ಮೈತ್ರಿಕೂಟ ಅಧಿಕಾರ ಹಿಡಿದಿದ್ದರಿಂದ ಫೆಬ್ರವರಿ ತಿಂಗಳಿಂದ ಪ್ರತಿಪಕ್ಷದ ನಾಯಕರಾಗಿದ್ದರು.
ರುಕ್ಮಿಣಿ ಮಾದೇಗೌಡರ ಸದಸ್ಯತ್ವ ವಜಾಗೊಂಡು ತೆರವಾಗಿದ್ದ ಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುನಂದ ಪಾಲನೇತ್ರ ಮಹಾಪೌರರಾಗಿ ಆಯ್ಕೆಯಾಗಿದ್ದರು. ಹಾಗಾಗಿ, ಸ್ವಾಭಾವಿಕವಾಗಿ ಬಿಜೆಪಿ ಆಡಳಿತದ ಪಕ್ಷವಾಗಿದ್ದರಿಂದ ನಿಯಮಾನುಸಾರ ಈಗ ಆಡಳಿತಪಕ್ಷದ ನಾಯಕರಾಗಿ ನಿಯೋಜನೆಗೊಂಡು ಅಧಿಕಾರ ಸ್ವೀಕರಿಸಿದರು.