ಮಾಸ್ಕ್-ಸಾಮಾಜಿಕ ಅಂತರ ಮರೆತ ಜನರು- 1ಲಕ್ಷಕ್ಕು ಹೆಚ್ಚು ದಂಡ ವಸೂಲಿ ಮಾಡಿದ ಪೊಲೀಸರು!
1 min read
ಮೈಸೂರಿನಲ್ಲಿ ಕೊಂಚ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಜನರು ಮಾತ್ರ ಕರೋನಾದ ನಿಯಮ ಮರೆತಂತೆ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಮೈಸೂರು ನಗರ ಪೊಲೀಸರು ಹಾಕಿರುವ ದಂಡದ ಮೊತ್ತ. ಹೌದು ಮೈಸೂರು ನಗರ ಪೊಲೀಸರು ವಿಶೇಷ ತಪಾಸಣೆ ಕಾರ್ಯಚರಣೆ ನಡೆಸಿ ಕೇವಲ ಒಂದೇ ದಿನಕ್ಕೆ 1ಲಕ್ಷದ 33ಸಾವಿರದ 150 ರೂ ಹಣ ಸಂಗ್ರಹಿಸಲಾಗಿದೆ.

ಈ ಮೂಲಕ ಬರೋಬ್ಬರಿ 709 ಕೇಸ್ ದಾಖಲಿಸಿಕೊಂಡಿದ್ದು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತವರಿಗೆ ದಂಡ ವಿಧಿಸಿದ್ದಾರೆ. ಅಲ್ಲದೆ ಇದು ಮತ್ತೇ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
