ಮೈಸೂರಿನಲ್ಲಿ ಮತ್ತೆ ಕೊವಿಡ್ ಲಸಿಕೆ ಕೊರತೆ: ಜಿಲ್ಲೆಯಾದ್ಯಂತ ಲಸಿಕಾ ಅಭಿಯಾನ ತಾತ್ಕಾಲಿಕ ಬಂದ್
1 min readಮೈಸೂರು: ಮೈಸೂರಿನಲ್ಲಿ ಮತ್ತೆ ಕೊವಿಡ್ ಲಸಿಕೆ ಕೊರತೆಯುಂಟಾಗಿದ್ದು ಜಿಲ್ಲೆಯಾದ್ಯಂತ ಲಸಿಕಾ ಅಭಿಯಾನ ತಾತ್ಕಾಲಿಕ ಬಂದ್ ಆಗಿದೆ.
ಸರ್ಕಾರಿ ಲಸಿಕಾ ಕೇಂದ್ರದ ಬಳಿ ಯಾರೂ ಬರಬೇಡಿ ಅಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹೊರತು ಪಡಿಸಿ ವ್ಯಾಕ್ಸಿನ್ ಉಳಿದವರಿಗಿಲ್ಲ. ರಾಜ್ಯ ಮಟ್ಟದಲ್ಲೇ ಲಸಿಕೆ ಕೊರತೆ ಇರೋದ್ರಿಂದ ಲಸಿಕಾ ಅಭಿಯಾನ ಬಂದ್ ಆಗುತ್ತಿದೆ. ಸರ್ಕಾರದ ಮುಂದಿನ ನಿರ್ದೇಶನದ ವರೆಗೂ ಲಸಿಕಾ ಅಭಿಯಾನ ಸ್ಥಗಿತಗೊಳಿಸಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.