ಮೈಸೂರಿನಲ್ಲಿ ಚಿನ್ನದಂಗಡಿಯಲ್ಲಿ ದರೋಡೆ ಪ್ರಕರಣ- ಅಲರ್ಟ್ ಆಯ್ತು ಮಂಡ್ಯ ಜಿಲ್ಲೆ!
1 min readಮಂಡ್ಯ : ಮೈಸೂರಿನ ಚಿನ್ನದಂಗಡಿಯಲ್ಲಿ ದರೋಡೆ ಶೂಟ್‌ಔಟ್ ನಿಂದ ಎಚ್ಚೆತ್ತ ರಾಜ್ಯದ ಹಲವು ಜಿಲ್ಲೆಗಳು ಫುಲ್ ಅಲರ್ಟ್ ಆಗ್ತಿವೆ. ಅದರಲ್ಲು ಪೊಲೀಸ್ ಇಲಾಖೆ ಮಾತ್ರ ಸೂಕ್ತ ಭದ್ರತೆ ಹಾಗೂ ಸೂಕ್ತಕ್ರಮಗಳನ್ನ ಕೈಗೊಳ್ಳುತ್ತಿದೆ. ಅದರಂತಡ ಮೈಸೂರಿನ ಸಹೋದರ ಜಿಲ್ಲೆ ಮಂಡ್ಯದಲ್ಲು ಕೂಡ ಇದೀಗಾ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಚಿನ್ನ ಬೆಳ್ಳಿ ವ್ಯಾಪಾರ ಮಾಡುವವರಿಗೆ ಕಿವಿ ಮಾತು ಹೇಳಿದೆ.
ಹೌದು ನಗರದ ಅಂಬೇಡ್ಕರ್ ಭವನದಲ್ಲಿ ಚಿನ್ನಬೆಳ್ಳಿ ಅಂಗಡಿ ಮಾಲೀಕರು ಮತ್ತು ವರ್ತಕರ ಸಂಘದ ಸಭೆಯನ್ನು ಏರ್ಪಡಿಸಿ ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿಯಲ್ಲಿ ಪ್ರತಿ ವ್ಯಾಪಾರಿಗಳು ತಮ್ಮ ಮಳಿಗೆಗಳಲ್ಲಿ ಸಿಸಿ ಕ್ಯಾಮಾರಾ ಆಳವಡಿಸುವುದು, ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸುವಂತೆ ಸೂಚನೆ ನೀಡಲಾಯಿತು. ಈ ವೇಳೆ ಮಂಡ್ಯ ನಗರದ ಹಲವು ಚಿನ್ನ ಬೆಳ್ಳಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.