ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ವ್ಯಕ್ತಿಯ ಬಂಧನ

1 min read

ಮೈಸೂರು,ಅ.5-ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಎಂಶ್ರೀ ನಗರದ ರಂಗಸ್ವಾಮಿ (35)ಬಂಧಿತ ಆರೋಪಿ. ಈತ ಖಾಸಗಿ ಕಂಪನಿಯೊಂದರ ಗೋಡಾನ್ ನಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದ.

ಪತ್ನಿ ಮನೆಯಲ್ಲಿ ಇರದ ಸಮಯ ನೋಡಿಕೊಂಡ ರಂಗಸ್ವಾಮಿ ಎದುರು ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ತಿಂಡಿಕೊಡುತ್ತೇನೆ ಮನೆಗೆ ಬಾ ಎಂದು ಕರೆದಿದ್ದು ಬಾಲಕಿ ಮನೆಗೆ ಬಂದ ವೇಳೆ ಈತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ.

ಇದರಿಂದ ಭಯಭೀತಳಾದ ಬಾಲಕಿ ಅಳುತ್ತಾ ಹೊರಗೆ ಓಡಿ ಬಂದಿದ್ದು ಇದನ್ನು ಕಂಡ ಬಾಲಕಿಯ ಪೋಷಕರು ಗಾಬರಿಗೊಂಡು ವಿಚಾರಿಸಿದಾಗ ಬಾಲಕಿ ಆತ ನಡೆಸಿದ ಕೃತ್ಯವನ್ನು ವಿವರಿಸಿದ್ದಾಳೆ.

ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ರಂಗಸ್ವಾಮಿಯನ್ನು ಮೇಟಗಳ್ಳಿ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *