ಮಲೆ ಮಾದಪ್ಪನ ಸನ್ನಿಧಿಗೆ ಹೋಗಲು ಗುಂಡಿಗಳದ್ದೆ ಕಾಟ!
1 min readಚಾಮರಾಜನಗರ : ಮಲೈ ಮಹದೇಶ್ವರ ಬೆಟ್ಟ ಎಂದರೆ ಸುಪ್ರಸಿದ್ದವಾದ ತಿರ್ಥಸ್ಥಳ ಅಂತಾನೆ ಫೇಮಸ್. ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ತಮಿಳುನಾಡು, ಹನ್ನೂರು ಹಾಗೂ ಕೊಳ್ಳೇಗಾಲ ಮಾರ್ಗ ಕಲ್ಪಿಸುತ್ತದೆ. ಇನ್ನು ಮೈಸೂರಿನಿಂದ ಹಾಗೂ ಬೆಂಗಳೂರಿನಿಂದ ಬರುವ ಭಕ್ತಾದಿಗಳು ಕೊಳ್ಳೇಗಾಲ ಮೂಲಕ ಬರಬಹುದು. ಹೀಗೆ ಬರುವ ಭಕ್ತರು ಇದೀಗಾ ಪರಿಪಾಟಲು ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ ಗುಂಡಿ ಬಿದ್ದ ರಸ್ತೆಗಳ ಮೇಲಿನ ಸಂಚಾರ.
ಹೌದು, ಮಾದಪ್ಪನ ದರ್ಶನ ಪಡೆಯಲು ಬರುವ ಭಕ್ತಾದಿಗಳಿಗೆ ಅಲ್ಲಿನ ರಸ್ತೆ ಹಳ್ಳ ಕೊಳ್ಳಗಳಿಂದ ಕೂಡಿದೆ. ನೂರಾರು ಕಿ.ಲೋ ಸಂಚರಿಸಿ ಬರುವ ಭಕ್ತಾದಿಗಳು ರಸ್ತೆಯ ದುಸ್ಥಿತಿ ನೋಡಿ ತುಂಬಾ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. 77 ಮಲೆ ಸುತ್ತುವರೆದಿರುವ ಈ ಬೆಟ್ಟದ ರಸ್ತೆಗಳು ಇದೀಗಾ ಪ್ರವಾಸಿಗರ ಕಿರಿಕಿರಿ ಉಂಟು ಮಾಡಿದೆ.
ಅನೇಕ ಹರಿಕೆ ಹೊತ್ತು ಬರುವ ಭಕ್ತಾದಿಗಳು ಕಾಲ್ನಡಿಗೆಯಲ್ಲು ಬರುತ್ತಾರೆ. ಇನ್ನು ವಾಹನಗಳು ಸಂಚರಿಸುವ ಈ ಮಾರ್ಗ ಹದಗೆಟ್ಟಿದ್ದು ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ವಾಹನ ಸವಾರರು ಈ ಮಾರ್ಗದಲ್ಲಿ ಜೀವದ ಹಂಗು ತೊರೆದು ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಈ ರಸ್ತೆಯಲ್ಲಿ ಸುಮಾರು ಅಪಘಾತಗಳಾಗಿದ್ದು ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಹತ್ತಾರು ತಿರುವುಗಳಿದ್ದು ರಸ್ತೆಯಲ್ಲಿ ಯಾವಾಗ ಏನಾಗುವುದು ಎಂದು ಪ್ರವಾಸಿಗರಿಗೆ ಭಯ ಶುರುವಾಗಿದೆ. ಅಲ್ಲದೆ ಕೊಳ್ಳೇಗಾಲ ಮಾರ್ಗವಾಗಿ ಸಂಚರಿಸುವ ದಾರಿಯಲ್ಲಿ ಅಭಿವೃದ್ಧಿ ಕಾಮಗಾರಿ ಅಪೂರ್ಣವಾಗಿರೋದು ಈ ಸಮಸ್ಯೆಗೆ ಕಾರಣ. ಅಧಿಕಾರಿಗಳು ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯ ಇಲ್ಲಿ ಸ್ಪಷ್ಟವಾಗಿ ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಪ್ರವಾಸಿಗರು ಓಡಾಡುವ ಈ ದಾರಿಯಲ್ಲಿ ಹಲವಾರು ದಿನಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ.
ಇನ್ನು ಅಭಿವೃದ್ಧಿ ಅರ್ಧಕ್ಕೆ ನಿಂತಿರುವ ಕಾರಣ ಮಳೆ ನೀರು ಹಾಗೂ ಚರಂಡಿ ನೀರಿನಿಂದ ಇನ್ನು ಹದಗೆಟ್ಟಿದೆ. ಇತ್ತೀಚಿಗೆ ಸುರಿದ ಮಳೆಯಿಂದ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ದಿನ ನಿತ್ಯ ಸಂಚರಿಸುವ ಸವಾರರು ಈ ಮಾರ್ಗದಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಆದರೆ ಮಾದಪ್ಪನ ದರ್ಶನಕ್ಕಾಗಿ ಬರುವ ಭಕ್ತರು ಈ ರಸ್ತೆಗೆ ಆದಷ್ಟು ಬೇಗ ಕಾಯಕಲ್ಪ ಕಲ್ಪಿಸಿ ಅಭಿವೃದ್ದಿಗೆ ದಾರಿ ತೋರಿಸಿ ಎನ್ನುತ್ತಿದ್ದಾರೆ. ಇಲ್ಲವಾದರೆ ಮಾಸಿಕ ಲಕ್ಷ ಲಕ್ಷ ಆದಾಯಗಳಿಸುವ ಮಾದಪ್ಪನ ಸನ್ನಿಧಿ ತೀವ್ರ ಕುಸಿತ ಕಂಡರು ಅಚ್ಚರಿ ಇಲ್ಲ.
ನನ್ನೂರು ಮೈಸೂರು ಟೀಂ…