ಟೈಟ್ ಟ್ರಯಲ್ ಲಾಕ್‌ಡೌನ್‌ನಲ್ಲಿ 3 ಸಾವಿರ ವಾಹನ ಸೀಜ್!
1 min readಮೈಸೂರು: ನಿನ್ನೆ ಬೆಂಗಳೂರು ನಗರದಲ್ಲಿ ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 10-00 ರಿಂದ ರಾತ್ರಿ 08-00 ಗಂಟೆಯವರೆಗೆ 2723 ದ್ವಿಚಕ್ರ, 171 ತ್ರಿಚಕ್ರ & 106 ನಾಲ್ಕು ಚಕ್ರದ ವಾಹನಗಳು ಸೇರಿ ಒಟ್ಟು 3000 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೀಗೆ ವಶಪಡಿಸಿಕೊಂಡ ಬಳಿಕ 24 ಎನ್.ಡಿ.ಎಂ.ಎ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರು ಪಣ ತೊಟ್ಟಿದ್ದಾರೆ. ಅಲ್ಲದೆ ಅನಗತ್ಯ ಸಂಚಾರ ಮಾಡದಂತೆ ಸಿಎಂ ಸಹ ಮನವಿ ಮಾಡಿದ್ದು, ಪೊಲೀಸರಿಗೆ ಫುಲ್ ಪವರ್ ನೀಡಲಾಗಿದೆ. ಹಾಗಾಗಿಯೇ ನಿನ್ನೆಯಿಂದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟೈಟ್ ಲಾಕ್‌ಡೌನ್ ಸಿದ್ದತೆ ಶುರುವಾಗಿದೆ.
ಈ ನಡುವೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಅವರು ನಗರ ಪ್ರದಕ್ಷಿಣೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ರು. ಜೊತೆಯಲ್ಲಿ ಸೋಮವಾರ ಆಗಲಿರುವ ಟೈಟ್ ಲಾಕ್‌ಡೌನ್‌ಗೆ ಫುಲ್ ಸ್ಟ್ರಿಟ್ ಆಗಿ ಜನರಿಗೆ ಟ್ರಯಲ್ ಪಾಠ ಶುರು ಮಾಡಿದ್ದಾರೆ ಬೆಂಗಳೂರು ಪೊಲೀಸರು.