ಸಾವಿನಲ್ಲು ಯುವಕನ ಸಾರ್ಥಕತೆ- ಅಂಗಾಂಗ ದಾನ ಮಾಡಿ ಔದಾರ್ಯತೆ!!
1 min readಯುವ ದಾನಿಯ ಅಂಗಗಳನ್ನು ದಾನ ಮಾಡಿ ಬಹು ಜೀವಗಳನ್ನು ಉಳಿಸಲಾಗಿದೆ.
~ಹೃದಯ , 2 ಕಿಡ್ನಿಗಳು, 1 ಲಿವರ್, 1 ಮೇದೋಜೀರಕ ಗ್ರಂಥಿ ಹಾಗು ಕಾರ್ನಿಯಾ ದಾನ ಮಾಡಲಾಗಿದೆ
–19 ವರ್ಷ ವಯಸ್ಸಿನ ಶ್ರೀ ಶರತ್ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸೂಚನೆ ಮೇರೆಗೆ ಚಿಕಿತ್ಸಗಾಗಿ ಸ್ಪಂದನಾ ಆಸ್ಪತ್ರೆಗೆ ಕರೆತರಲಾಯಿತು. ಡಿಸೆಂಬರ್ 24, 2021 ರಂದು ಸ್ಪಂದನ ಆಸ್ಪತ್ರೆಯಿಂದ ಮಧ್ಯರಾತ್ರಿ 1.10ಕ್ಕೆ ಗಂಭೀರ ಸ್ಥಿತಿಯಲ್ಲಿ ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರಂಭಿಕ ಸಿಟಿ ಸ್ಕ್ಯಾನಿಂಗ್ ನಲ್ಲಿ ಮೆದುಳಿನ ಕಾಂಡದ ಇನ್ಫಾರ್ಕ್ಟ್ ಗೋಚರಿಸಿತು. ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಮಧ್ಯಾಹ್ನ 1.30ಕ್ಕೆ ಐಸಿಯುಗೆ ಸ್ಥಳಾಂತರಿಸಲಾಯಿತು.
ಆದರೆ ಶರತ್ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಎರಡು ದಿನಗಳ ಕಾಲ ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಡಿಸೆಂಬರ್ 26 ರಂದು, ಮಾನವ ಅಂಗಗಳ ಕಸಿ ಕಾಯಿದೆ 1994 ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳು ಕಾಂಡದ ವೈಫಲ್ಯದಿಂದಾಗಿ ಅವರು ಮೆದುಳು ಸತ್ತಿರುವುದಾಗಿ ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯ ಪ್ಯಾನೆಲ್ ಲಿಸ್ಟ್ ನಲ್ಲಿರುವ ವೈದ್ಯರು ಘೋಷಿಸಿದರು. ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯು, ಈಗ ಮಲ್ಟಿ ಆರ್ಗನ್ ಟ್ರಾನ್ಸ್ ಪ್ಲಾಂಟ್ ಪರವಾನಗಿ ಪಡೆದ ಕೇಂದ್ರವಾಗಿದೆ.
ಈ ಘಟನೆಯ ಮೊದಲು ಶರತ್ ರವರು ಆರೋಗ್ಯವಾಗಿದ್ದರು ಮತ್ತು ಹೆಚ್ಚಿನ ಪರೀಕ್ಷೆಗಳು ಅಂಗಾಂಗ ದಾನಕ್ಕೆ ಅವರ ಅರ್ಹತೆಯನ್ನು ದೃಢಪಡಿಸಿದವು. ನಿಗದಿತ ಪ್ರೋಟೋಕಾಲ್ಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು, ಈ ಸಂದರ್ಭದಲ್ಲಿ ಮೃತ ರೋಗಿಯ ತಂದೆ ತಾಯಿ ರವರು ಅಂಗಗಳನ್ನು ದಾನ ಮಾಡಲು ಮುಂದೆ ಬಂದರು.
ಅಂಗ ದಾನ ಪ್ರೋಟೋಕಾಲ್‌ಗಳ ಪ್ರಕಾರ, ಮೊದಲು ZCCK ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.
ಇಂದು, ಡಿಸೆಂಬರ್ 26 ರಂದು 5.10ಕ್ಕೆ ಶ್ರೀ ಶರತ್ ಅವರ ಅಂಗಗಳನ್ನು (ಹೃದಯ, 2 ಕಿಡ್ನಿಗಳು, 1 ಯಕೃತ್ತು, 1 ಮೇದೋಜೀರಕ ಗ್ರಂಥಿ, ಕಾರ್ನಿಯಾ) ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಹಿಂಪಡೆಯಲಾಯಿತು ಹಾಗು 4.33ಕ್ಕೆ ಕ್ರಾಸ್ ಕ್ಲಾಮ್ಪ್(Cross Clamp). ಮಾಡಲಾಯಿತು. ಇಂದು ಏಕಕಾಲಿಕ ಮೇದೋಜೀರಕ ಗ್ರಂಥಿ – ಕಿಡ್ನಿ ಕಸಿ (ಎಸ್ ಕೆ ಪಿ ಟಿ), ಹಾಗು ಯಕೃತ್ತು ಕಸಿಯನ್ನು ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಯಲ್ಲಿ ಮಾಡಲಾಯಿತು.
ಕ್ರಮ ಸಂಖ್ಯೆ
ದಾನ ಮಾಡಿದ ಅಂಗ
ಅಂಗ ದಾನ ಪಡೆದ ಆಸ್ಪತ್ರೆ
1.
1 ಕಿಡ್ನಿ
ಅಪೋಲೊ ಬಿಜ಼ಿ. ಎಸ್ ಆಸ್ಪತ್ರೆ
2.
1 ಕಿಡ್ನಿ
ಐ ನ್ ಯು, ಬೆಂಗಳೂರು
3.
1 ಯಕೃತ್ತು
ಅಪೋಲೊ ಬಿಜ಼ಿ. ಎಸ್ ಆಸ್ಪತ್ರೆ
4.
ಹೃದಯ
ಕೊಲಂಬಿಯಾ ಏಷ್ಯಾ ಯೇಷ್ವನ್ತಪುರ್, ಬೆಂಗಳೂರು
5
ಮೇದೋಜೀರಕ ಗ್ರಂಥಿ
ಅಪೋಲೊ ಬಿಜ಼ಿ. ಎಸ್ ಆಸ್ಪತ್ರೆ
6
ಕಾರ್ನಿಯಾ
ಮೈಸೂರು ಕಣ್ಣಿನ ಬ್ಯಾಂಕ್.
ಅಪೋಲೋ ಬಿಜಿಎಸ್ ಆಸ್ಪತ್ರೆಯು ಮೈಸೂರಿನಲ್ಲಿ ಈಗ ಬಹು ಅಂಗಾಂಗ ಕಸಿಗಳಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಅಂಗಾಂಗ ದಾನವನ್ನು ಉತ್ತೇಜಿಸುವಲ್ಲಿ ಮತ್ತು ಈ ಉದಾತ್ತ ಉದ್ದೇಶಕ್ಕಾಗಿ ಮುಂದೆ ಬಂದಿದ್ದಕ್ಕಾಗಿ ಅಪೋಲೋ ಬಿಜಿಎಸ್ ಆಸ್ಪತ್ರೆಯು ಮೃತ ಕುಟುಂಬಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಎನ್. ಜಿ. ಭರತೀಶ ರೆಡ್ಡಿ
ಉಪಾಧ್ಯಕ್ಷರು – ಆಡಳಿತ ವಿಭಾಗ
ಮತ್ತು ವಿಭಾಗದ ಮುಖ್ಯಸ್ಥರು