ಸಚಿವರ ಮಗನ ಕಾರು ಅಪಘಾತ ಪ್ರಕರಣ: ಕಾರಿನಲ್ಲಿ ನನ್ನ ಮಗ ಇರಲಿಲ್ಲ ಎಂದ್ರು ಸಚಿವ ಲಕ್ಷ್ಮಣ ಸವದಿ!
1 min readಮೈಸೂರು: ಲಕ್ಷ್ಮಣ ಸವದಿ ಮಗನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಕ್ರಿಯೆ ನೀಡಿದ್ದು ಅಪಘಾತದ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಅದಕ್ಕೆ ಎಫ್ ಐ ಆರ್ನಲ್ಲಿ ಆತನ ಹೆಸರು ಇಲ್ಲ ಅಂತ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಅಪಘಾತ ಅಪಘಾತವೇ ಅದಕ್ಕೆ ಇಲ್ಲದ ಗೊಂದಲ ಬೇಡ. ನನ್ನ ಮಗ ಅಪಘಾತವಾದ ಕಾರಿನಲ್ಲಿ ಇದ್ದರು ಅಪಘಾತ ಮಾಡು ಅಂತಾ ಹೇಳುತ್ತಿರಲಿಲ್ಲ. ನನ್ನ ಮಗ ತುರ್ತಾಗಿ ಗಾಯಗೊಂಡವರ ನೆರವಿಗೆ ಧಾವಿಸಿದ್ದಾನೆ. ಆದರೆ ಅವರು ಬದುಕಿ ಉಳಿದಿಲ್ಲ. ಎರಡು ದಿನದ ನಂತರ ಮೃತರ ಮನೆಗೆ ಭೇಟಿ ನೀಡುತ್ತೇನೆ. ಅವರಿಗೆ ಸಾಂತ್ವನ ಹೇಳಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದು ನನ್ನ ಕರ್ತವ್ಯ ಅಂತ ಹೇಳಿದರು.