ಇವರೇ ನಮ್ಮ ರಾಜ್ಯದ ನೂತನ ರಾಜ್ಯಪಾಲರು!
1 min readಬೆಂಗಳೂರು: ಕರ್ನಾಟಕ ಸೇರಿ ೮ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕದ ರಾಜ್ಯಪಾಲರಾಗಿ ಹಾಲಿ ಕೇಂದ್ರ ಸಚಿವ ಥಾವರ್‌ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ. ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಇಲ್ಲಿದೆ ನೂತನ ರಾಜ್ಯಪಾಲರ ಪಟ್ಟಿ:
1. ಕರ್ನಾಟಕದ- ತವಾರ್ಚಂದ್ ಗೆಹ್ಲೋಟ್
2. ಮಿಜೋರಾಂ- ಹರಿ ಬಾಬು ಕಂಭಂಪತಿ
3. ಮಧ್ಯಪ್ರದೇಶದ- ಮಂಗುಭಾಯ್ ಚಗನ್ಭಾಯ್ ಪಟೇಲ್
4. ಹಿಮಾಚಲ ಪ್ರದೇಶ- ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್
5. ಗೋವಾ- ಪಿ.ಎಸ್.ಶ್ರೀಧರನ್ ಪಿಳ್ಳೈ
6. ತ್ರಿಪುರ- ಸತ್ಯದೇವ್ ನಾರಾಯಣ್ ಆರ್ಯ
7. ಜಾರ್ಖಂಡ್- ರಮೇಶ್ ಬೈಸ್
8. ಹರ್ಯಾಣ- ಬಂದಾರು ದತ್ತಾತ್ರೇಯ