ಮೈಸೂರಿನಲ್ಲೊಂದು ಮಾನವೀಯ ಕಾರ್ಯ: ಅನಾಥ ಶವಗಳಿಗೆ ಪಾಲಿಕೆಯಿಂದ ಪೂಜೆ
1 min readಮೈಸೂರು: ಮೈಸೂರಿನಲ್ಲೊಂದು ಮಾನವೀಯ ಕಾರ್ಯ ನಡೆಯುತ್ತಿದ್ದು ಅನಾಥ ಶವಗಳಿಗೆ ಮುಕ್ತಿ ನೀಡಲಾಗುತ್ತಿದೆ. ಮೈಸೂರು ಮಹಾನಗರಪಾಲಿಕೆ ವತಿಯಿಂದಲೇ ಅನಾಥ ಶವಗಳಿಗೆ ಪೂಜೆ ಸಲ್ಲಿಸೆ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.
ಪಾಲಿಕೆ ಸಿಬ್ಬಂದಿಗಳು ಸಂಸ್ಕಾರ ಮುಗಿಸಿ ಬಳಿಕ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರಿಗು ಸಮಸ್ಯೆ ಆಗದಂತೆ ಪೂಜೆಗೆ ಕ್ರಮ. ಶವದ ವಾರಸುದಾರರಿದ್ದರೆ ದೂರದಿಂದಲೇ, ಬ್ಯಾರಿಕೇಡ್ ಹಿಂದೆ ನಿಂತು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಆದರೆ ಅನಾಥ ಶವಗಳಿಗೆ ಸಿಬ್ಬಂದಿಗಳು ಪೂಜೆ ಸಲ್ಲಿಸಿ ಹೂ ಹಾಕಿ ಸಂಸ್ಕಾರ ನಡೆಸುತ್ತಿದ್ದಾರೆ.
ಶವ ಸಂಸ್ಕಾರ ನಡೆಸೋ ಸಿಬ್ಬಂದಿಗಳಿಗೆ ಇದೀಗಾ ಇನ್ಶುರೆನ್ಸ್ ಮಾಡಿಸಲು ನಿರ್ಧಾರ ಮಾಡಲಾಗಿದೆ. ಕುಟುಂಬದವರಿಗೆ ಹಾಗೂ ಶವಸಂಸ್ಕಾರ ಮಾಡೋ ಸಿಬ್ಬಂದಿಗಳಿಗೆ ವಾಕ್ಸಿನ್ ನೀಡಲಾಗುತ್ತಿದೆ. ವಾಕ್ಸಿನ್ ಬಳಿಕವೇ ಪಾಲಿಕೆ ಈ ಕೆಲಸಕ್ಕೆ ನಿಯೋಜನೆ ಮಾಡಿದೆ. ಪಾಲಿಕೆಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಅವರ ಧಾರ್ಮಿಕ ಭಾವನೆಯನ್ನ ನಾವು ಸಹ ಗೌರವಿಸುತ್ತೇವೆ. ಆದ ಕಾರಣ ನಾವೇ ಸಿಬ್ಬಂದಿಗಳಿಂದ ಪೂಜೆ ಮಾಡಿಸುವ ಕಾರ್ಯ ಮಾಡಿದ್ದೇವೆ. ಈ ಸಾವುಗಳು ನಮಗೆ ದುಖ ತರಿಸಿದೆ. ನಿತ್ಯವೂ ಸಾವಿನ ಪ್ರಮಾಣ ಕಡಿಮೆಯಾಗಲೆಂದು ಪ್ರಾರ್ಥಿಸುತ್ತೇನೆ. ಮನೆಯಿಂದ ಹೊರಗೆ ಬರುವ ವೇಳೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮೈಸೂರಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಹಿತಿ ನೀಡಿದ್ದಾರೆ.