September 9, 2024

ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡ್‌ಗೆ ಇಳಿದ ಪೊಲೀಸರು: ಕಡ್ಲೆಪುರಿ ನೆಪ ಹೇಳಿ ಬಂದವನ ವೆಹಿಕಲ್ ಸೀಜ್

1 min read

ಮೈಸೂರು: ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡ್‌ಗೆ ಇಳಿದಿದ್ದು, ಅನಗತ್ಯವಾಗಿ ಹೊರಗೆ ಬಂದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೈಸೂರಿನ ದೇವರಾಜ ಮಾರುಕಟ್ಟೆ ಬಳಿ ದೇವರಾಜ ಟ್ರಾಫಿಕ್ ಪೊಲೀಸರು ಕಾರ್ಯಚರಣೆ ನಡೆಸಿದ್ದು ಅನಗತ್ಯವಾಗಿ ಹೊರಗೆ ಬಂದವರಿಗೆ ಫೈನ್ ಹಾಕಿ, ವೆಹಿಕಲ್ ಸೀಜ್ ಮಾಡಿದ್ದಾರೆ.

ಇನ್ನು ಅನಗತ್ಯವಾಗಿ ಹೊರಗೆ ಬಂದ ಜನ ಪೊಲೀಸರ ಬಳಿ ಕುಂಟು ನೆಪ ಹೇಳ್ತಿದ್ದಾರೆ. ವ್ಯಕ್ತಿಯೊಬ್ಬ ತರಕಾರಿಗೆ 10 ಕಿ.ಮೀ ದೂರದಿಂದ ಬಂದಿದ್ದು ಆತನನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇನ್ನೋರ್ವ ಕಡ್ಲೆಪುರಿ ನೆಪ ಹೇಳಿ ಬಂದವನ ವೆಹಿಕಲ್ ಸೀಜ್ ಮಾಡಿದ್ದಾರೆ.

ಅಲ್ಲದೆ ಆಯುರ್ವೇದಿಕೆ ಮೆಡಿಸನ್ ತರಲು ಬಂದೆ ಎಂದು ಗೋಡಂಬಿ ದ್ರಾಕ್ಷಿ ತಂದು ಆಯುರ್ವೇದಿಕ್ ಎಂದಿದ್ದಾನೆ. ಈ ವೇಳೆ ಪೊಲೀಸರು ವ್ಯಕ್ತಿಯನ್ನ ತರಾಟೆ ತೆಗೆದುಕೊಂಡಿದ್ದಾರೆ. ಇದು ಆಯುರ್ವೇದಿಕ್ ಏನ್ರಿ ಎಂದ‌ರೆ ಹೂಂ‌ ಸರ್ ಇದು ಆಯುರ್ವೇದಿಕ್, ಇದ್ರಿಂದ ಆರೋಗ್ಯಕ್ಕೆ ಒಳ್ಳೆಯದ್ದು ವ್ಯಕ್ತಿ ಹೇಳಿದ್ದಾನೆ. ಮಾಸ್ಕ್ ಹಾಕದೆ ಬೈಕ್ ಸವಾರನೊಬ್ಬ ರಸ್ತೆಗೆ ಬಂದಿದ್ದು ಈ ವೇಳೆ ಹೆಲ್ಮೆಟ್ ತೆಗೆದು ಮಾಸ್ಕ್ ಹಾಕಿದ್ರೆ ಹೆಲ್ಮೆಟ್ ಆಗಲ್ಲ ಎಂದಿದ್ದಾನೆ. ಪೊಲೀಸರ ಮುಂದೆ ಇದನ್ನ ಡೆಮೋ ತೋರಿಸಿ ಫೈನ್ ಕಟ್ಟಿದ್ದಾನೆ.

ಇದೇ ಕಾರಣಕ್ಕೆ ಪೊಲೀಸರು ಹೆಲ್ಮೆಟ್ ಫೈನ್ ಹಾಕಲು ಮುಂದಾಗಿದ್ದಾರೆ. ಪೊಲೀಸರ ಜೊತೆಗೆ ಹಲವರು ವಾದ ಮಾಡುತ್ತಿದ್ದು, ಅನಗತ್ಯವಾಗಿ ವಾದ ಮಾಡಿದ್ರೆ ವಾಹನ ಸೀಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ ಪೊಲೀಸರು.

About Author

Leave a Reply

Your email address will not be published. Required fields are marked *