ರೈತರ ಕಷ್ಟಕ್ಕೊಂದು ಪತ್ರ ಬರೆದ ಕುಮಾರಸ್ವಾಮಿ!

1 min read

ಕೊರೋನಾ ಸಮಯದಲ್ಲಿ ಹಾಗೂ ಕೊರೋನಾ ನಿಯಂತ್ರಣದ ನಂತರದ ದಿನಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಹಲವಾರು ಅಹವಾಲುಗಳನ್ನು ಪ್ರಮುಖ ಸ್ಥರದಲ್ಲಿ ನಿಂತು ಎದುರಿಸಿದವನು ಈ ದೇಶದ ಕಾಯಕಯೋಗಿ ರೈತ ಮಾತ್ರ.

ರೈತರು ಪ್ರಸ್ತುತವಾಗಿ ಎದುರಿಸುತ್ತಿರುವ ಸಮಸ್ಯೆ, ಸಂಕಷ್ಟ, ಕಟ್ಟಲೆಗಳನ್ನು ಹೇಳತೀರದು. ಒಂದೆಡೆ ತಾನು ಬೆಳೆದ ಬೆಳೆಗೆ ಒಂದಿಲ್ಲೊಂದು ರೋಗ ಆವರಿಸುತ್ತಿದ್ದರೆ ಇನ್ನೊಂದೆಡೆ ಫಸಲಿಗೆ ನೈತಿಕವಾಗಿ ಸಿಗಬೇಕಾದ ಬೆಂಬಲ ಬೆಲೆ ದೊರೆಯುತ್ತಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ರೈತ ಕಂಗಾಲಾಗಿದ್ದಾನೆ. ರೈತ ನೊಂದರೆ ಇಡೀ ಮನುಕುಲಕ್ಕೆ ಅವನ ಮನಸ್ಸಿನ ನೋವು ಶಾಪವಾಗಿ ಪರಿಣಮಿಸುತ್ತದೆ, ಮಳೆ ಬಿಸಿಲು ಚಳಿಯನ್ನು ಲೆಕ್ಕಿಸದೆ ಅವನು ಹಾಕುವ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗದೇ ಹೋದಾಗ ರೈತನು ಕಂಗಾಲಾಗಿ, ಆತ್ಮಹತ್ಯೆಗೆ ಶರಣಾಗುತ್ತಾನೆ.

ರೈತನ ಕಷ್ಟವನ್ನು ನೀಗಿಸುವುದು ಬಹಳ ಸುಲಭ, ಆತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸರ್ಕಾರ ನಿಗದಿ ಪಡಿಸಿದರೆ ಯಾವುದೇ ಬೇರೆ ರೀತಿಯ ಯೋಚನೆಗಳನ್ನು ಅವನು ಮಾಡದೆ ಇನ್ನಷ್ಟು ಹೊಸ ಯೋಜನೆಗಳೊಂದಿಗೆ ಹೊಲದಲ್ಲಿ ಬೆಳೆ ಬೆಳೆಯಲು ಮುಂದಾಗುತ್ತಾನೆ.

ಪ್ರಸ್ತುತ ಅವನು ಎದುರಿಸುತ್ತಿರುವ ಸಮಸ್ಯೆಯನ್ನು ನಾವುಗಳು ಅರಿತು ಅದಕ್ಕೊಂದು ಪರಿಹಾರ ನೀಡಿ ಸದಾಕಾಲ ರೈತರೊಂದಿಗೆ ನಿಲ್ಲಬೇಕಿದೆ. ದೇಶದ ಸೈನಿಕರ ಹಾಗೂ ರೈತರ ಮನ ನೊಂದರೆ ದೇಶದ ಒಳಗೆ ಯಾರು ನಿಶ್ಚಿಂತೆಯಿಂದ ಇರಲಾರರು, ಹಲವಾರು ಆಯಾಮಗಳಲ್ಲಿ ಸರ್ಕಾರದ ಹಣವು ಪ್ರತ್ಯೇಕವಾಗಿ ಮೀಸಲಿರುತ್ತದೆ ಅಂತೆಯೇ ದೇಶದ ರೈತರಿಗಾಗಿ ಸರ್ಕಾರವು ಹಣವನ್ನು ಮೀಸಲಿರಿಸಿದರೆ ರೈತರ ಬಾಳಿಗೂ ಒಂದು ಆಶಾಭಾವ ಮೂಡುತ್ತದೆ.

ರೈತರ ನೋವನ್ನು ನಮ್ಮ ನೋವಿನಂತೆ ಭಾವಿಸಿ ಅವನ ಬಾಳಿಗೆ ಬೆಳಕಾಗುವುದು ನಮ್ಮ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಗಮನ ಹರಿಸಿ ಎಲ್ಲಾ ಆಯಾಮಗಳಲ್ಲೂ ರೈತರ ಸಂಕಷ್ಟಗಳಿಗೆ, ಅವರ ನೋವಿಗೆ ಸ್ಪಂದಿಸಬೇಕಿದೆ.

ಹೆಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ..

About Author

Leave a Reply

Your email address will not be published. Required fields are marked *