ಅಚನಕ್ಕಾಗಿ ಆಗುವ ಘಟನೆ ತಡೆಯಲು ಹೆಣ್ಣು ಸಬಲೆಯಾಗಬೇಕು: ಗೃಹ ಸಚಿವ ಅರಗ ಜ್ಞಾನೇಂದ್ರ
1 min readಮೈಸೂರು: ಕೆ ಎಸ್ ಆರ್ ಪಿ 5ನೇ ಪಡೆಯ ಮೈಸೂರು ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿರುವ ಸ್ವಯಂ ರಕ್ಷಣೆ ಕೌಶಲ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ಕ್ಯಾನ್ಸರ್ ವಿರುದ್ಧ ಗೆಲ್ಲಲು ಜಾಗ್ರತೆ ವಹಿಸುವ ಕುರಿತು ಆಯೋಜಿಸಿದ್ದ ಪ್ರದರ್ಶನವನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ವೀಕ್ಷಿಸಿದರು.
ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿರುವ ಕೆ ಎಸ್ ಆರ್ ಪಿ ಪೊಲೀಸ್ ಕವಾಯತು ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು ಮೈಸೂರು: ರಾಕ್ಷಸಿ ಮನಸ್ಥಿತಿ ಇರುವ ವ್ಯಕ್ತಿಗಳು ಇರುವವರೆಗು ಅಪರಾಧ ಪ್ರಕರಣ ನಡೆಯುತ್ತಿರುತ್ತವೆ. ಅಚನಕ್ಕಾಗಿ ಆಗುವ ಘಟನೆ ತಡೆಯಲು ಹೆಣ್ಣು ಸಬಲೆಯಾಗಬೇಕು. ಮೈಸೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಘಟನೆಯಿಂದ ಪಾಠ ಕಲಿಯಬೇಕಿದೆ. ಮಹಿಳೆಯರು ಗಂಡಿನಷ್ಟು ಶಕ್ತಿವಂತರಲ್ಲ ಅದು ಪ್ರಕೃತಿ ನಿಯಮ. ಆದರು ಮಹಿಳೆಯರು ರಕ್ಷಣೆಗಾಗಿ ಕೌಶಲ್ಯ ತರಬೇತಿ ಪಡೆಯಬೇಕು. ಚಾಕಚಕ್ಯತೆ ಅಪಾಯಗಳಿಂದ ರಕ್ಷಿಸಿಕೊಳ್ಳಬೇಕು ಎಂದರು.
700 ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಇದನ್ನು ರಾಜ್ಯದ ಬೇರೆ ಜಿಲ್ಲೆಗಳಲ್ಲು ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರದ ಬಳಿ ಹಣ ಕೊರತೆ ಇಲ್ಲ ಹಣವನ್ನು ಸರ್ಕಾರವೆ ನೀಡುತ್ತದೆ. ಇದನ್ನು ವಿದ್ಯಾರ್ಥಿನಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.