ಕಬಿನಿ ಡ್ಯಾಂ ಭರ್ತಿಗೆ 3 ಅಡಿ ಬಾಕಿ’ ಡ್ಯಾಂಗೆ ಹರಿದು ಬಂತು 30 ಸಾವಿರ ಕ್ಯೂಸೆಕ್ಸ್ ನೀರು!
1 min readಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗುವತ್ತ ಸಾಗಿದ್ದು ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯದ ಒಳ ಹಾಗೂ ಹೊರ ಹರವಿನ ಪ್ರಮಾಣ ದಿಢೀರ್ ಹೆಚ್ಚಳವಾಗಿದೆ. ಇದರಿಂದ ಜಲಾಶಯದ ಒಳ ಹಾಗೂ ಹೊರಹರಿವು ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕಪಿಲಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದು, ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಹಾಗೂ ಜನರು ಕಪಿಲಾ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಸದ್ಯ ಕಬಿನಿ ಜಲಾಶಯದ ಇಂದಿನ ಸದ್ಯ ಕಬಿನಿ ಜಲಾಶಯದ ಒಳಹರಿವು 22,000 ಸಾವಿರ ಕ್ಯೂಸೆಕ್ ಗೆ ಹೆಚ್ಚಳವಾಗಿದ್ದು, ಕಬಿನಿ ಜಲಾಶಯದ ಸದ್ಯದ ಹೊರಹರಿವು 30,000 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. ಜಲಾಶಯದ ಒಳ ಹಾಗೂ ಹೊರಹರಿವು ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸಮುದ್ರ ಮಟ್ಟದಿಂದ 2284 ಅಡಿ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯ, ಇಂದು 2281.25 ಅಡಿಗಳಿಗೆ ಏರಿಕೆ ಕಂಡಿದೆ.