ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ: ಓರ್ವ ಸಾವು, 80 ಮಂದಿಗೆ ಗಂಭೀರ ಗಾಯ
1 min readಮಧುರೈ,ಜ.15-ತಮಿಳುನಾಡಿನ ಮಧುರೈನ ಅವನಿಯಪುರಂ ಪ್ರದೇಶದಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಒಬ್ಬರು ಸಾವನ್ನಪ್ಪಿ, 80 ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಅಧಿಕಾರಿಗಳು ಗಾಯಗೊಂಡವರಲ್ಲಿ 38 ಗೂಳಿ ಪಳಗಿಸುವವರು, 24 ಗೂಳಿ ಮಾಲೀಕರು ಮತ್ತು 18 ಪ್ರೇಕ್ಷಕರು ಸೇರಿದ್ದಾರೆ.
ಮಧುರೈ ಜಿಲ್ಲೆಯ ಅವನಿಯಪುರಂ ಗ್ರಾಮದಲ್ಲಿ ಜೋರಾದ ಸಿಳ್ಳೆ, ಚಪ್ಪಾಳೆ, ಹರ್ಷೋದ್ಗಾರಗಳ ನಡುವೆ ಸುಮಾರು 300 ಹೋರಿಗಳನ್ನು ಗೂಳಿ ಪಳಗಿಸುವವರ ಅಖಾಡಕ್ಕೆ ಬಿಡಲಾಯಿತು. ತಮಿಳುನಾಡು ಸರ್ಕಾರ 300 ಗೂಳಿಗಳು ಮತ್ತು 150 ಪ್ರೇಕ್ಷಕರೊಂದಿಗೆ ಜಲ್ಲಿಕಟ್ಟುಗೆ ಅವಕಾಶ ನೀಡಿತ್ತು.ಆದಾಗ್ಯೂ, ನೂರಾರು ಗ್ರಾಮಸ್ಥರು ಘಟನೆಗಳನ್ನು ವೀಕ್ಷಿಸಲು ಅವನಿಯಪುರಂನಲ್ಲಿ ಛಾವಣಿಗಳು ಮತ್ತು ಬ್ಯಾರಿಕೇಡ್‌ಗಳ ಹೊರಗೆ ಜಮಾಯಿಸಿದರು. ಪ್ರತಿ ವರ್ಷ ಪೊಂಗಲ್ ಸಮಯದಲ್ಲಿ ತಮಿಳುನಾಡಿನ ಹಳ್ಳಿಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ನಡೆಸಲಾಗುತ್ತದೆ.