ಅಸಂಘಟಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೆ ಕಾರ್ಡ್ ವಿತರಿಸಲು ಅರ್ಜಿ ಸ್ವೀಕಾರ
1 min readಮೈಸೂರು, ಸೆ.21-ಕೆ.ಆರ್.ಕ್ಷೇತ್ರದಲ್ಲಿ ನಡೆಯುತ್ತಿರುವ ಮೋದಿ ಯುಗ್ ಉತ್ಸವ್ ದ ಅಂಗವಾಗಿ ಇಂದು ಬೀದಿ ಬದಿಯ ವ್ಯಾಪಾರಿಗಳಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಲು ಅರ್ಜಿಗಳನ್ನು ಪಡೆಯಲಾಯಿತು.
ನಗರದ ವಿದ್ಯಾರಣ್ಯಪುರಂ ನ ಪಾರ್ಕ್ ನಲ್ಲಿ ಕಾರ್ಡ್ ವಿತರಣೆ ಮಾಡಲು ಸ್ಥಳದದಲ್ಲೇ ಸುಮಾರು 150 ಅರ್ಜಿಗಳನ್ನು ಪಡೆಯಲಾಯಿತು.
ನಂತರದಲ್ಲಿ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟು ಅದರ ಫಲಾನುಭವಿಗಳಾಗಬೇಕು ಎಂದು ತಿಳಿಸಲಾಯಿತು. ಈ ಕಾರ್ಯ ಕೆ.ಆರ್ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿಯೂ ನಡೆಯಲಿದೆ.
ವಾರ್ಡ್ ನಂ.49 ರಲ್ಲಿ ಜನ ಸಾಮಾನ್ಯರ ಮನೆ ಬಾಗಿಲಿಗೆ ತೆರಳಿ ಸಾಮಾಜಿಕ ಭದ್ರತಾ ಅಡಿಯಲ್ಲಿ ಪೆನ್ಶನ್ ಗೆ ಅರ್ಹರಾಗಿರುವವರಿಗೆ ದಾಖಲಾತಿಯನ್ನು ಪಡೆದು ವರದಿಯನ್ನು ಸ್ಥಳದಲ್ಲಿಯೇ ತಯಾರಿಸಿ ಆದೇಶ ಪ್ರತಿ ನೀಡಲು ಕ್ರಮ ಕೈಗೊಳ್ಳಲಾಯಿತು. ಅಲ್ಲದೆ ಪೆನ್ಶನ್ ನಿಂತು ಹೋಗಿದ್ದವರಿಗೂ ಸಹ ಪೆನ್ಶನ್ ಕೊಡಿಸುವ ಕಾರ್ಯಕ್ಕೆ ಕ್ಷೇತ್ರಾದ್ಯಂತ ಎಲ್ಲಾ ವಾರ್ಡ್ ಗಳಲ್ಲಿಯೂ ಚಾಲನೆ ನೀಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಸೌಮ್ಯ ಉಮೇಶ್, ಕೆ.ಆರ್.ಕ್ಷೇತ್ರದ ಭಾಜಪಾ ಅಧ್ಯಕ್ಷ ಎಂ.ವಡಿವೇಲು, ಕೆ.ಆರ್.ಕ್ಷೇತ್ರದ ಭಾಜಪಾ ಉಪಾಧ್ಯಕ್ಷ ರವಿ,ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ಮೈ.ಪು.ರಾಜೇಶ್, ಒಬಿಸಿ ಮೋರ್ಚಾ ಅಧ್ಯಕ್ಷ ಶಿವಪ್ಪಾಜಿ, ಆಶ್ರಯ ಸಮಿತಿ ಉಪಾಧ್ಯಕ್ಷೆ ವಿದ್ಯಾ ಅರಸ್, ಶಾಸಕರ ಕಚೇರಿಯಿಂದ ಶಾಸಕರ ಆಪ್ತ ಸಹಾಯಕರಾದ ಮುದ್ದು ಕೃಷ್ಣ, ಕಚೇರಿ ಸಿಬ್ಬಂದಿ ಸುನಿಲ್, ಪ್ರಮುಖರಾದ ಉಮೇಶ್, ಪ್ರದೀಪ್ ಪ್ರಸಾದ್, ಕೃಷ್ಣ, ಚಿನ್ಮಯ, ಮಹಾನಗರ ಪಾಲಿಕೆ ಕಂದಾಯ ನಿರೀಕ್ಷಿಕರಾದ ಪ್ರತಾಪ್ ಎಸ್., ದ್ವೀತಿಯ ದರ್ಜೆ ಸಹಾಯಕರಾದ ವಿನೋದ್ ವಿವಿಧ ನಗರಪಾಲಿಕಾ ಅಧಿಕಾರಿಗಳು ಹಾಜರಿದ್ದರು.