ಕೊರೊನಾ ಆತಂಕ, ಹಣ್ಣುಗಳ ಖರೀದಿಗೆ ಗ್ರಾಹಕರು ಹಿಂದೇಟು
1 min readಮೈಸೂರು: ಕೊರೊನಾ ಆತಂಕ ಕಾರಣ ಮೈಸೂರಿನಲ್ಲಿ ಹಣ್ಣುಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕಿದ್ದಾರೆ. ಇದರಿಂದ ಹಣ್ಣಿನ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಮೈಸೂರಿನ ಹಳೇ ಆರ್ಎಂಸಿಯ ಹಣ್ಣಿನ ಮಾರುಕಟ್ಟೆಯಲ್ಲಿ ಹಣ್ಣುಗಳನ್ನ ಕೇಳೋರೇ ಇಲ್ಲ. ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಸೇಬು, ಮಾವು ಸೇರಿದಂತೆ ಹಣ್ಣುಗಳನ್ನ ಕೇಳೋರೆ ಇಲ್ಲ. ಮಾವು ಬೆಳೆಗಾರರಿಗೆ ಸಂಕಷ್ಟ, ಗ್ರಾಹಕರಿಲ್ಲದೆ ವ್ಯಾಪಾರಸ್ಥರಿಗೆ ಕಷ್ಟವೋ ಕಷ್ಟ. ಕೊರೊನಾದಿಂದ ಖರೀದಿಸುವವರ ಸಂಖ್ಯೆ ಇಳಿಮುಖವಾಗಿದ್ದು ವ್ಯಾಪಾರವಾಗದೇ ಮಾರುಕಟ್ಟೆಯಲ್ಲೇ ಹಣ್ಣುಗಳು ಉಳಿದಿವೆ. ಹೊರ ರಾಜ್ಯಗಳ ಸಾಗಣೆಗೆ ಬೇಡಿಕೆ ಕುಸಿತವಾಗಿದೆ.
ಗ್ರಾಹಕರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರಕುತ್ತಿಲ್ಲ, ಮಾವು ಸಿಜನ್ ಆದರೂ ವ್ಯಾಪಾರವಿಲ್ಲ. ಬಂಡವಾಳ ಹಾಕಿ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿದ್ದೇವೆ. ಲಾಕ್ಡೌನ್ ನಡುವೆ ವ್ಯಾಪಾರಕ್ಕೆ ಕೊಟ್ಟಿರುವ ಸಮಯ ಸಾಲುತ್ತಿಲ್ಲ. ಇದ್ರಿಂದ ರೈತರು, ಹಣ್ಣಿನ ವ್ಯಾಪಾರಿಗಳಿಗೆ ಬಹಳ ನಷ್ಟವಾಗ್ತಿದೆ. ವ್ಯಾಪಾರವಿಲ್ಲದೇ ಹಣ್ಣಗಳೆಲ್ಲಾ ಹಾಳಾಗುತ್ತದೆ, ಕಸಕ್ಕೆ ಸುರಿಯಬೇಕಾದ ಪರಿಸ್ಥಿತಿ ಬಂದಿದೆ ಅಂತ ತಮ್ಮ ವ್ಯಾಪಾರಿಗಳು ಅಳಲನ್ನ ವ್ಯಕ್ತಪಡಿಸುತ್ತಿದ್ದಾರೆ.