ನಂಜನಗೂಡಿಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಭೇಟಿ

1 min read

ನಂಜನಗೂಡು: ನಂಜನಗೂಡಿಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಭೇಟಿ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವೀಕ್ಷಣೆಗಾಗಿ ಬಂದ ಐ ಜಿ ಪಿ. ಠಾಣೆಗೆ ಬಂದ ಅವರನ್ನು ನಂಜನಗೂಡಿನ ಪೊಲೀಸರು ಗೌರವ ವಂದನೆ ನೀಡುವುದರ ಮೂಲಕ ಸ್ವಾಗತಿಸಿದರು.

ಇದೆ ಸಂದರ್ಭ ಠಾಣೆಗೆ ಭೇಟಿ ನೀಡಿದ ನೆನಪಿಗಾಗಿಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಗಿಡ ನೆಟ್ಟು ನೀರಿರದರು. ಬಳಿಕ ಮಾತನಾಡಿದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವುದು ಜನಪರ ಕೆಲಸ ಮಾಡುವುದು ನಮ್ಮ ಉದ್ದೇಶವಾಗಿದೆ. ಬೇರೆ ಜಿಲ್ಲೆಗಳಿಗೆ ಹೊಲಿಸಿಕೊಂಡರೆ ನಂಜನಗೂಡಿನಲ್ಲಿ ಕ್ರೈಂ ಪ್ರಕರಣಗಳು ಕಡಿಮೆಯಿದೆ. ಜನರು ಪೊಲೀಸ್ ಠಾಣೆಗೆ ಬರುವುದನ್ನು ತಪ್ಪಿಸಲು 112 ತುರ್ತು ಸಹಾಯವಾಣಿಯನ್ನು ತೆರೆದಿದ್ದೇವೆ ಎಂದರು.

112 ವಾಹನವು ಕರೆ ಮಾಡಿದ ತಕ್ಷಣ ಮನೆಯ ಬಾಗಿಲ ಮುಂದೆ ಬಂದು ನಿಲ್ಲುತ್ತದೆ ಇದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ. ಶಾಲಾ-ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಬಡವರು ಮತ್ತು ಅಮಾಯಕರಿಗೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ದೂರು ಕೇಳಿಬಂದಿವೆ ಪೊಲೀಸರು ಬಡವರ ಪರ ನಿಲ್ಲಬೇಕು. ನಂಜನಗೂಡು ಶಾಲಾ ಶಿಕ್ಷಕಿ ಕೊಲೆ ಸುಲೋಚನ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಸರಗಳ್ಳತನ ನಡೆಯುತ್ತಿರುವುದು ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ಬೇಧಿಸಿ ಸರಗಳ್ಳರನ್ನು ಹಿಡಿದರೆ ಬೇಲ್ ಪಡೆದು ಮತ್ತೆ ವಾಪಸ್ ಬರ್ತಾರೆ ಅದೇ ಕೆಲಸವನ್ನು ಮುಂದುವರಿಸುತ್ತಾರೆ. ಅಂಗಡಿ ಮಾಲೀಕರು ಕಡ್ಡಾಯವಾಗಿ ಅಂಗಡಿಯ ಮುಂಭಾಗದಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಬೇಕು ಇದರಿಂದ ನಮಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಹಾಯಕ ವರಿಷ್ಠಾಧಿಕಾರಿ ಡಾ ಶೀಲ, ಡಿವೈಎಸ್ಪಿ ಗೋವಿಂದರಾಜು, ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್, ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ, ಸೇರಿದಂತೆ ಪೊಲೀಸ್ ಠಾಣೆಯ ಪಿಎಸ್ಐ ಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *