ಕೇವಲ 28 ದಿನಕ್ಕೆ ವರ್ಗಾವಣೆ ಆದ ಶರತ್ ಮತ್ತೇ ಮೈಸೂರು ಡಿಸಿ ಆಗ್ತಾರಾ..?
1 min readಮೈಸೂರು: ಕೇವಲ 28 ದಿನಕ್ಕೆ ವರ್ಗಾವಣೆ ಆದ ಶರತ್ ಅವರೇ ಮತ್ತೇ ಮೈಸೂರು ಡಿಸಿ ಆಗ್ತಾರಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ನಾಳೆಯ ಕೋರ್ಟ್ನಲ್ಲಿರುವ ಪ್ರಕರಣ.
ಹೌದು, ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿ IAS ಅಧಿಕಾರಿ ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆ ಹೈಕೋರ್ಟ್ ನಲ್ಲಿ ನಡೆಯಲಿದೆ. ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ, ಹಾಗೂ ತಮ್ಮನ್ನ ವರ್ಗಾವಣೆ ಮಾಡಿದ್ದ ವಿಚಾರವಾಗಿ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಶರತ್ ಅವರ ವಿಚಾರಣೆ ನಾಳೆ ಹೈಕೋರ್ಟ್ನಲ್ಲಿ ನಡೆಯಲಿದೆ.
ಆದರೆ ಇದೀಗಾ ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯವರನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮೈಸೂರಿಗೆ ನೂತನ ಡಿಸಿಯಾಗಿ ಡಾ.ಗೌತಮ್ ಬಗಾದಿ ನೇಮಕವಾಗಿದ್ದು, ಆಗೊಮ್ಮೆ ನಾಳೆಯ ತೀರ್ಪು ಶರತ್ ಅವರ ಪರವಾಗಿ ಬಂದರೆ ನೂತನ ಡಿಸಿಯು ಸಹ ವರ್ಗಾವಣೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಮತ್ತೇ ಮೈಸೂರಿಗೆ ಶರತ್ ಬರಲಿದ್ದಾರಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ