ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದಿದ್ದರೂ ವಿಚಲಿತನಾಗಲ್ಲ: ಶಾಸಕ ಎಸ್.ಎ.ರಾಮದಾಸ್
1 min readಮೈಸೂರು,ಅ.3-ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದಿದ್ದರೂ ವಿಚಲಿತನಾಗಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,1994 ರಲ್ಲಿ ಶ್ರೀಕಂಠದತ್ತ ಒಡೆಯರ್‌ಗೆ ಟಿಕೆಟ್ ಕೊಟ್ಟಾಗ ವಿಚಲಿತನಾಗಲಿಲ್ಲ. ರಾತ್ರಿ ಟಿಕೆಟ್ ಪಡೆದು ಬೆಳಿಗ್ಗೆ ವೇಳೆಗೆ ಅವರು ರಾಜೀನಾಮೆ ಕೊಟ್ಟರು. ಮಧ್ಯಾಹ್ನದ ವೇಳೆ ಈ ರಾಮದಾಸ್‌ಗೆ ಟಿಕೆಟ್ ಸಿಕ್ತು. 11 ಸಾವಿರ ಪೇಜ್ ಪ್ರಮುಖರನ್ನ ಸಂಘಟಿಸಿದ್ದೇನೆ ಎಂದರು.
ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕೆಂಬುದು ನನ್ನ ಧ್ಯೇಯ. ಆಗಂತ ನನ್ನ ಕುಟುಂಬದವರಾರು ಚುನಾವಣೆಗೆ ನಿಲ್ಲಲ್ಲ. ನನ್ನ ಬಳಿಕ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ಸಿಗಬೇಕು ಎಂದರು.
ನನಗೆ ಮಂತ್ರಿ ಸ್ಥಾನ ತಪ್ಪಿಸಲು ದೂರವಾಣಿ ಕರೆ ಮಾಡಿದವರಿಗೆ ಬಿಎಸ್‌ವೈ ಸೇರಿದಂತೆ ಮಂತ್ರಿಗಳು ಉತ್ತರ ಕೊಟ್ಟಿದ್ದಾರೆ.
ಮಂತ್ರಿ ಆಗದಿದ್ದರೂ ರಾಮದಾಸ್ ಸಮಾಜಕ್ಕೆ ಮಾದರಿ ಅಂತ ಬಿಎಸ್‌ವೈ ಸೇರಿದಂತೆ ಮಂತ್ರಿಗಳಲ್ಲೆರೂ ಹೇಳಿದ್ದಾರೆ. ನನಗೆ ಅಷ್ಟೇ ಸಾಕು, ಮಂತ್ರಿ ಸ್ಥಾನಕ್ಕಿಂತ ಮಿಗಿಲಾದದ್ದು. ನನ್ನ ತಂದೆ ಮಿಲಿಟರಿ ಅಧಿಕಾರಿ, ನನ್ನ ಮೈಯಲ್ಲಿ ಹರಿಯುತ್ತಿರುವುದು ಶುದ್ದ ರಕ್ತ. ನಮ್ಮ ತಂದೆ ತಾಯಿ ಕೈ ಕೆಸರು ಮಾಡಿಕೊಳ್ಳಬೇಡ ಅಂತ ಹೇಳಿದ್ದಾರೆ. ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ಓಡಿ ಹೋಗುವವನಲ್ಲ ನಾನು ಎಂದರು.
ಸಂದೇಶ್ ನಾಗರಾಜ್ ಬಿಜೆಪಿ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧ:
ಸಂದೇಶ್ ನಾಗರಾಜ್ ಬಿಜೆಪಿ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡ್ತಾರೆ. ಸಾಧಕ ಬಾಧಕಗಳ ಇನ್ನು ಪೂರ್ಣ ಪ್ರಮಾಣದಲ್ಲಿ ಚರ್ಚೆಯಾಗಿಲ್ಲ.ನಮ್ಮಗಳ ಜೊತೆ ಇನ್ನೂ ಚರ್ಚೆ ಮಾಡಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಆದ್ಯತೆ ನೀಡಬೇಕೆಂಬ ಚಿಂತನೆ ಸಹ ಇದೆ. ನಿಜವಾದ ಕಾರ್ಯಕರ್ತರನ್ನ ಗುರುತಿಸುವ ಕೆಲಸ ಆಗಲಿದೆ ಎಂದು ಹೇಳಿದರು.