2022ನೇ ಸಾಲಿನ ಕೇಂದ್ರ ಬಜೆಟ್ ನ ಮುಖ್ಯಾಂಶಗಳು

1 min read

ನವದೆಹಲಿ,ಫೆ.1-ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ. ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ಗೆ ಏರಿಸುವ ಪ್ರಧಾನಿ ಮೋದಿ ಕನಸಿಗೆ ಪೂರಕವಾದ ಹಲವು ನಿರ್ಣಯಗಳಿದ್ದು, ಬಜೆಟ್ ನ ಮುಖ್ಯಾಂಶಗಳು ಇಂತಿವೆ.
ನಿರ್ಮಲಾ ಸೀತಾರಾಮನ್ ಅವರು 6 ಆಧಾರ ಸ್ಥಂಭಗಳ ಅಡಿ ಬಜೆಟ್ ಮಂಡಿಸಿದ್ದಾರೆ. ಒನ್ ನೇಷನ್.. ಒನ್ ರೇಷನ್ ಕಾರ್ಡ್ ಯೋಜನೆ ದೇಶಾದ್ಯಂತ ಜಾರಿ, ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲು, ದೇಶಾದ್ಯಂತ ಸ್ವಚ್ಛ ಕುಡಿಯುವ ನೀರಿಗಾಗಿ ಜಲಜೀವನ ಅರ್ಬನ್ ವಾಟರ್ ಮಿಷನ್, ಶುದ್ಧಗಾಳಿ ಯೋಜನೆಗಾಗಿ 2 ಸಾವಿರ ಕೋಟಿ, ರಾಜ್ಯಗಳಿಗೆ ತಲಾ 2 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಹಣ, ದೇಶಾದ್ಯಂತ 11 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ, ಹೆದ್ದಾರಿ ನಿರ್ಮಾಣದಲ್ಲಿ ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳಕ್ಕೆ ಆದ್ಯತೆ, ಬೆಂಗಳೂರು ಮೆಟ್ರೋ – 2ಎ 2ಬಿ ಹಂತಕ್ಕೆ 14,788 ಕೋಟಿ ರೂ. ಅನುದಾನ, 1 ಸಾವಿರ ಹೊಸ ಗ್ಯಾಸ್ ಏಜೆನ್ಸಿಗಳಿಗೆ ಲೈಸೆನ್ಸ್, 1 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆ ವಿಸ್ತರಣೆ, ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸಿಗುವಂತಾಗಲು ಯೋಜನೆ, ಭಾರತೀಯ ರೈಲ್ವೆಗೆ 1.10 ಲಕ್ಷ ಕೋಟಿ ರೂ. ಮೀಸಲು, ಅತ್ಯಂತ ಪ್ರಮುಖ ಕೈಗಾರಿಕಾ ವಲಯಗಳನ್ನು ಖಾಸಗೀಕರ ಮಾಡದಿರಲು ನಿರ್ಧಾರ, ಷೇರು ಮಾರುಕಟ್ಟೆಗೆ ಎಲ್ಐಸಿ ಷೇರುಗಳ ಬಿಡುಗಡೆಗೆ ನಿರ್ಧಾರ, 1.75 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿ, ಕೃಷಿಕರ ಆದಾಯ ದ್ವಿಗುಣಕ್ಕೆ ಸರ್ಕಾರದ ಸರ್ವ ಕ್ರಮದ ಭರವಸೆ, ಗೋಧಿ ಬೆಳೆಗಾರರಿಗೆ 75,000 ಕೋಟಿ, ಭತ್ತ ಬೆಳೆಗಾರರಿಗೆ 1.72 ಲಕ್ಷ ಕೋಟಿ ರೂ., ಎನ್ಜಿಒ ಸಹಭಾಗಿತ್ವದಲ್ಲಿ ದೇಶಾದ್ಯಂತ 100 ಸೈನಿಕ ಶಾಲೆ ಆರಂಭ, 10ನೇ ತರಗತಿ ಪಾಸ್ ಆದ ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಭವಿಷ್ಯದಲ್ಲಿ ಡಿಜಿಟಲ್ ಜನಗಣತಿ ನಡೆಸಲು ಕೇಂದ್ರದ ನಿರ್ಧಾರ, ಕೊರೊನಾದಿಂದ ಆದಾಯ ಸಂಗ್ರಹದಲ್ಲಿ ಭಾರೀ ಕುಸಿತ 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

About Author

Leave a Reply

Your email address will not be published. Required fields are marked *