ಉದ್ಯಮಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಪ್ರಣಾಪಾಯದಿಂದ ಪಾರು
1 min readಕೊಚ್ಚಿ: ಕೇರಳ ಅಂತರಾಷ್ಟ್ರೀಯ ಕಂಪೆನಿ ಲುಲು ಗ್ರೂಪ್ ನ ಚೆರ್ಮನ್ ಎಂಎ ಯೂಸುಫ್ ಅಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷಗಳಿಂದ ತುರ್ತು ಭೂ ಸ್ಪರ್ಷ ಮಾಡಿಕೊಂಡಿದೆ.
ಎಂ.ಎ ಯೂಸುಫ್ ಅಲಿ ಹಾಗೂ ಅವರ ಪತ್ನಿ ಸಮೇತ ಏಳು ಜನ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಿಢೀರ್ ಭೂ ಸ್ಪರ್ಶ ಮಾಡಿದ್ದು ಎಂ.ಎ ಯೂಸುಫ್ ಅಲಿ ಸೇರಿದಂತೆ ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಅವರನ್ನು ಕೊಚ್ಚಿಯ ಖಾಸಗೀ ಆಸ್ಪತ್ರೆಗೆ ರವಾನಿಸಲಾಗಿದೆ.
ಕೇರಳದಲ್ಲಿ ಆರಂಭಗೊಂಡು ಭಾರತ ಹಾಗೂ ದುಬೈ ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವ್ಯವಹಾರ ಹೊಂದಿರುವ ಲುಲು ಗ್ರೂಪ್ ನ ಚೇರ್ಮನ್ ಖಾಸಗಿ ಹೆಲಿಕಾಪ್ಟರ್ ನಲ್ಲಿ ಚಲಿಸುತ್ತಿದ್ದರು. ಈ ಸಂಧರ್ಭ ತಾಂತ್ರಿಕ ದೋಷ ಕಂಡುಬಂದಿದ್ದು ತಕ್ಷಣ ಕೊಚ್ಚಿ ಸಮೀಪದ ಪಾನಂಗಾಡ್ ಎಂಬಲ್ಲಿನ ಫಿಶರೀಸ್ ವಿಶ್ವವಿದ್ಯಾಲಯಕ್ಕೆ ಸೇರಿದ ಖಾಲಿ ಜಾಗದಲ್ಲಿ ಹೆಲಿಕಾಪ್ಟರ್ ಬೂ ಸ್ಪರ್ಶ ಮಾಡಿದೆ.