ಜನತಾ ಜಲಾಧಾರೆ ಮೂಲಕ ಜೆಡಿಎಸ್ ಪಕ್ಷದ ಅಸ್ತಿತ್ವ ಸಾಬೀತಾಗಿದೆ: ಹೆಚ್.ಡಿ ಕುಮಾರಸ್ವಾಮಿ
1 min readಮೈಸೂರು: ಜನತಾ ಜಲಾಧಾರೆ ಮೂಲಕ ಜೆಡಿಎಸ್ ಪಕ್ಷದ ಅಸ್ತಿತ್ವ ಸಾಬೀತಾಗಿದೆ. ನನ್ನ 123ರ ಗುರಿ ಮುಟ್ಟೇ ಮುಟ್ಟುತ್ತೇನೆ. ಯಾವ ರಾಷ್ಟ್ರೀಯ ಪಕ್ಷಗಳು ಅಷ್ಟು ಜನರನ್ನು ಸೇರಿಸಲು ಸಾಧ್ಯವಿಲ್ಲ. ಜನರಿಂದಲೂ ಜೆಡಿಎಸ್ ಪರವಾಗಿ ಅಲೆ ಏಳುತ್ತಿದೆ ಅಂತ ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಹೆಚ್.ಕೆ.ರಾಮು ಅಭ್ಯರ್ಥಿಯಾಗಿದ್ದಾರೆ. ಮತದಾರರ ಗಮನ ಸೆಳೆಯುವ ಕುರಿತ ಮೈಸೂರು ಭಾಗದ ಶಾಸಕರು, ಮುಖಂಡರ ಸಭೆ ನಡೆಸುತ್ತೇನೆ. ನಾನು ಸಿಎಂ ಆಗಿದ್ದಾಗ ಪದವೀಧರರಿಗೆ ಅನುಕೂಲವಾಗುವಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೆ. 56 ಸಾವಿರ ಪದವೀಧರರಿಗೆ ಉದ್ಯೋಗ, ಪದವಿ ಕಾಲೇಜು ಸ್ಥಾಪನೆ ಮಾಡಿದ್ದೆ. ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ನೀಡುವಂತೆ ಸಮಿತಿ ರಚಿಸಿದ್ದೆ. ಇಲ್ಲಿಯವರೆಗೆ ಆ ಬಗ್ಗೆ ಈಗಿನ ಸರ್ಕಾರ ಕ್ರಮ ಕೈಗೊಂಡಿಲ್ಲ. ಪದವಿ ಮುಗಿಸಿದ ಮೊದಲ ಮೂರು ವರ್ಷ ಉದ್ಯೋಗ ದೊರಕುವವರೆಗೂ ಸ್ಟೇಫಂಡ್ ನೀಡಲು ಚಿಂತನೆ. ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನ ತರಲು ಚಿಂತನೆ ಮಾಡಿದ್ದೇವೆ. ಈ ಎಲ್ಲಾ ವಿಚಾರಗಳನ್ನ ಮುಂದಿಟ್ಟು ಚುನಾವಣಾ ಪ್ರಚಾರ ಮಾಡುತ್ತೇವೆ ಅಂದರು.
ರಾಮುಗೆ ಟಿಕೆಟ್ ನೀಡಿದ್ದು ಕುಮಾರಸ್ವಾಮಿ ಅಲ್ಲ ಕೋರ್ ಕಮಿಟಿ: ಇದು ವೈಯಕ್ತಿಕ ತೀರ್ಮಾನ ಅಲ್ಲ. ಇದು ಆರ್ಥಿಕವಾಗಿಯೂ ನಡೆಯುವ ಚುನಾವಣೆ. ಇದು ಜಗಜ್ಞಾಹೀರವಾಗಿದೆ. ಮರಿತಿಬ್ಬೇಗೌಡರು ಇಲ್ಲದಾಗಲೂ ನಾವು ಚುನಾವಣೆ ಗೆದ್ದಿದ್ದೇವೆ. ಪಕ್ಷಕ್ಕೆ ಬರುವವರಿಗೆ ಹೋಗುವವರ ವಿಚಾರವಾಗಿ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ಮಾಡಲು ತೀರ್ಮಾನ. ತಕ್ಷಣಕ್ಕೆ ಬಂದವರಿಗೆ ಟಿಕೆಟ್ ಕೊಡುವ ಬಗ್ಗೆ ಕಠಿಣ ನಿರ್ಧಾರ. ಚಿಕ್ಕಮಾದು ಅವರಿಗೆ ಶ್ರೀಮಂತರು ಅಂತಾ ಟಿಕೆಟ್ ಕೊಟ್ಟಿದ್ದಾ.? ಎಂಎಲ್ ಸಿ ಸಹಾ ಮಾಡಿದ್ದೇ, ಅವರೊಗೆ ಹಣ ತೆಗೆದುಕೊಂಡು ಮಾಡಿದ್ವಾ.?
ರಾಜ್ಯಸಭಾ ಚುನಾವಣಾ ವಿಚಾರ: ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ ಎಂದರು. ಚುನಾವಣೆ ಸೋಲಿಸಲು ಕುಮಾರಸ್ವಾಮಿ ಯತ್ನ ಮರಿತಿಬ್ಬೇಗೌಡ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಕುಮಾರಸ್ವಾಮಿಯಿಂದ ಗೆಲ್ಲಿಸಲು ಎಷ್ಟು ದೇಣಿಗೆ ಪಡೆದಿದ್ದರು ಹೇಳಲಿ. ಅವರ ಗೆಲುವಿನಲ್ಲಿ ಕುಮಾರಸ್ವಾಮಿ ವರ್ಚಸ್ಸು ಇದೆ ಅಂತ ಹೇಳಿದರು.
ಜೆಡಿಎಸ್ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ನಾಯಕರು ಬರುತ್ತಾರೆ ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಅನ್ನೋದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡು ಪಕ್ಷಕ್ಕೂ ಸಂಪೂರ್ಣ ಬಹುಮತ ಬರುವ ವಿಶ್ವಾಸವಿಲ್ಲ. ಅದಕ್ಕಾಗಿ ಜೆಡಿಎಸ್ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದರು.
ಒಂದು ಕುಟುಂಬಕ್ಕೆ ಒಂದು ಟಿಕಟ್ ವಿಚಾರ. ನಾವು ಯಾವತ್ತು ಒಂದು ಫ್ಯಾಮಿಲಿ ಒಂದು ಟಿಕೆಟ್ ಅಂತಾ ಹೇಳಿಲ್ಲ. ಕುಟುಂಬ ರಾಜಕಾರಣ ಮೋದಿ ಪ್ರಜಾಪ್ರಭುತ್ವಕ್ಕೆ ಮಾರಕ ಅಂದರು. ಬಿಜೆಪಿಯಲ್ಲಿ ನಡೆಯುತ್ತಿರುವುದು ಏನು.? ಅದು ಕುಟುಂಬ ರಾಜಕಾರಣನೇ. ಕಾಂಗ್ರೆಸ್ ಮೈಸೂರು ನಾಯಕರೇ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ತೀರ್ಮಾನವೇ ಜೋಕ್. ಜನರ ಮುಂದೆ ಕಾಂಗ್ರೆಸ್ ನಾಯಕರು ನಗೆ ಪಾಟಲಿಗೀಡಾಗುತ್ತಾರೆ. ಬಿಜೆಪಿ ಪರಿಷತ್ ಗೆ ಯಾವ ಪಟ್ಟಿ ಕಳುಹಿಸಿದ್ದಾರೆ.? ಅವರಿಗೆ ಯಾವ ನೈತಿಕತೆ ಎಲ್ಲಿದೆ ಈ ಬಗ್ಗೆ ಮಾತನಾಡಲು.? ಒಂದು ಕುಟುಂಬಕ್ಕೆ ಒಂದು ಟಿಕೆಟ್ ವಿಚಾರ. ಇದು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಎಂದರು.
ಮತಾಂತರ ನಿಷೇಧ ಮಸೂದೆ ಜಾರಿಗೆ ರಾಜ್ಯಪಾಲರ ಅಂಕಿತ ಹಿನ್ನೆಲೆ: ನಾವು ಈಗಾಗಲೇ ಈ ಮಸೂದೆಯನ್ನ ವಿರೋಧಿಸಿದ್ದೇನೆ. ಈ ಮಸೂದೆ ಜಾರಿಗೆ ನಮ್ಮ ಸಂಪೂರ್ಣ ವಿರೋಧ ಇದೆ. ಇದರ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ ಅಂತ ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.