KRS ಡ್ಯಾಂ ಬಿರುಕು ವಿವಾದ: ಸುಮಲತಾ ಅವರನ್ನೇ ಡ್ಯಾಮ್ ಬಾಗಿಲಿಗೆ ಮಲಗಿಸಿಬಿಟ್ರೆ ಬಿಗಿಯಾಗಿಬಿಡುತ್ತೆ;- ಹೆಚ್.ಡಿ ಕುಮಾರಸ್ವಾಮಿ

1 min read

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಮಂಡ್ಯ ಜಿಲ್ಲೆಗೆ ಅಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರೋದಿಲ್ಲ. ಕೆಆರ್ ಎಸ್ ನ ಏನೋ ಇವ್ರೆ ರಕ್ಷಣೆ ಮಾಡ್ತಾರಂತಲ್ಲ. ಬಹುಶಃ ಇವರನ್ನೇ ಕೆಆರ್ಎಸ್ ಡ್ಯಾಮ್ ಬಾಗಿಲಿಗೆ ಮಲಗಿಸಿಬಿಟ್ರೆ ಬಿಗಿ ಯಾಗಿಬಿಡುತ್ತೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೀರು ಹೋಗದ ರೀತಿ ಬಾಗಿಲಿಗೆ ಇವರನ್ನೇ ಮಲಗಿಸಿಬಿಟ್ರೆ ಬಿಗಿಯಾಗಿಬಿಡುತ್ತೆ. ಕೆಲಸ ಮಾಡೋಕೆ ಮಾಹಿತಿ ಇಟ್ಟುಕೊಳ್ಳದೇ ಕೇವಲ ಯಾರದ್ದೋ ವ್ಯಯಕ್ತಿಕ ದ್ವೇಷಕ್ಕ ಹೇಳಿಕೆ ಕೊಡೋದು ಬಹಳ ದಿನ ನಡೆಯುವುದಿಲ್ಲ. ಯಾವುದೋ ಅನುಕಂಪದ ಮೇಲೆ ಬಂದಿದ್ದಾರೆ. ಅದರಂತೆ ಜನರ ಋಣ ತೀರಿಸುವ ಕೆಲಸ ಮಾಡಬೇಕು. ಪದೇ ಪದೇ ಇಂತಹ ಅವಕಾಶ ಗಳು ಸಿಗೋದಿಲ್ಲ. ಇವಾಗ ಅವಕಾಶ ಸಿಕ್ಕಿದೆ, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಕೆಲಸ ಮಾಡಲಿ. ಇಲ್ಲ ವಾದಲ್ಲಿ ಮುಂದೆ ಜನರು ಅವರಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದರು.

ಸ್ಟಾಲಿನ್ ಪತ್ರದ ವಿಚಾರಕ್ಕೆ ಎಚ್ಡಿಕೆ ಹೇಳಿಕೆ: ಸ್ಟಾಲಿನರ ಪತ್ರಿಕಾ ಹೇಳಿಕೆ ಗಮನಿಸಿದ್ದೇನೆ. ಸ್ಟಾಲಿನ್ ಅನುಮಾನ ಮೇಕೆದಾಟುವಿನಲ್ಲಿ ಸಂಗ್ರಹ ಮಾಡೋ ನೀರಿನ ಪ್ರಮಾಣ ಕಮ್ಮಿ ಆಗುತ್ತೆ ಅನ್ನೋದು. ಮೇಕೆದಾಟುವಿನಲ್ಲಿ ಜಲಾಶಯ ಕಟ್ಡಿದರೆ ನೀರಿನ ಪ್ರಮಾಣ ಕಮ್ಮಿಯಾಗಲ್ಲ. ತಮಿಳುನಾಡಿಗೆ ಕೊಡೋ ನೀರು ಪ್ರತೀ ವರ್ಷ ಕೊಡೋ ಹೊಣೆ ನಮ್ದು. ನಾವು ತಮಿಳುನಾಡಿನವರು ಅಣ್ಣತಮ್ಮಂದಿರಂತೆ ಇರಬೇಕು. ಎರಡೂ ರಾಜ್ಯಗಳ ರೈತರು ಅಣ್ಣತಮ್ಮಂದಿರು. ಜಲಾಶಯ‌ ನಿರ್ಮಾಣ ನಮ್ಮ ಜನರ ಬೇಡಿಕೆ. ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥ ಆಗೋ‌ ನೀರನ್ನು ಸಂಗ್ರಹ ಮಾಡಲು ಜಲಾಶಯ ಕಟ್ತಿದೀವಿ ಅಷ್ಟೇ. ನಮ್ಮದು ನ್ಯಾಯಯುತ ಬೇಡಿಕೆ. ತಮಿಳುನಾಡಿಗೆ ಅನ್ಯಾಯ ಮಾಡೋ ಉದ್ದೇಶ ಇಲ್ಲ. ನ್ಯಾಯಾಧೀಕರಣದ ಆದೇಶದಂತೆ 193 ಟಿಎಂಸಿ‌ಅಡಿ ನೀರು ಕೊಡ್ತೀವಿ, ನಿಲ್ಸಕ್ಕೆ ಆಗಲ್ಲ. ಹೊಗೇನಕಲ್ ನಲ್ಲಿ ತಮಿಳುನಾಡು ಜಲಾಶಯ ಕಟ್ಟಿದೆಯಲ್ಲ ಯಾರಪ್ಪಣೆ ಪಡೆದಿದ್ರು? ನಾವು ನ್ಯಾಯಾಧೀಕರಣದ ತೀರ್ಪು ಉಲ್ಲಂಘನೆ ಮಾಡಲ್ಲ. ಕನ್ನಡಿಗರು ಸಹೋದರರು ಅನ್ನೋ ಮನೋಭಾವ ಸ್ಟಾಲಿನ್ ಗೆ ಇರಲಿ ಎಂದು ಹೇಳಿದರು.

About Author

Leave a Reply

Your email address will not be published. Required fields are marked *