ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗ್ತಿದೆ: ಕುಮಾರಸ್ವಾಮಿ ವಿರುದ್ಧ ಸುಮಲತಾ ಆಕ್ರೋಶ
1 min readಬೆಂಗಳೂರು: KRS ಡ್ಯಾಂ ಬಿರುಕು ವಿವಾದ: ಸುಮಲತಾ ಅವರನ್ನೇ ಡ್ಯಾಮ್ ಬಾಗಿಲಿಗೆ ಮಲಗಿಸಿಬಿಟ್ರೆ ಬಿಗಿಯಾಗಿಬಿಡುತ್ತೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಮಂಡ್ಯ ಸಂಸದೆ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದು ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗ್ತಿದೆ ಅಂತ ಹೇಳಿದ್ದಾರೆ.
ಅವರ ವ್ಯಕ್ತಿತ್ವ ಎಂತದ್ದು ಅನ್ನುವುದನ್ನ ಬಿಚ್ಚಿಟ್ಟುಕೊಳ್ತಿದ್ದಾರೆ. ದೊಡ್ಡ ಹಗರಣ ನಡೆಯುತ್ತಿದೆ. ಇದು ಗೊತ್ತಿದ್ದು ಯಾಕೆ ಸುಮ್ಮನಿದ್ರು ಗೊತ್ತಾಗ್ತಿದೆ. ಎಲ್ಲಾ ಕಡೆ ಜನರಿಗೆ ಗೊತ್ತಾಗ್ತಿದೆ. ಎಲ್ಲಾ ಕಡೆ ಸ್ಕ್ಯಾಂ ಹೊರಬರ್ತಿವೆ. ಕೆಆರ್ ಎಸ್ ಬಗ್ಗೆ ನಾನು ಕಾಳಜಿ ವಹಿಸ್ತಿದ್ದೇನೆ. ಇವರಿಗೆ ಯಾಕೆ ಪ್ರಾಬ್ಲಂ ಆಗ್ತಿದೆ. ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲ ಗೊತ್ತು ಅಂತ ಕುಮಾರಸ್ವಾಮಿ ವಿರುದ್ಧ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ