ಒಂದು ವರ್ಷದಿಂದ ಸಿಕ್ಕಿಲ್ಲ ಗೌರವಧನ, ಅತಂತ್ರರಾದ ಶಿಕ್ಷಕರು
1 min read
ಮೈಸೂರು: ಒಂದು ವರ್ಷದಿಂದ ಗೌರವಧನ ಸಿಗದೆ ಶಿಕ್ಷಕರು ಅತಂತ್ರರಾಗಿದ್ದು HD ಕೋಟೆ ಗಿರಿಜನ ಆಶ್ರಮ ಶಾಲೆಗಳ ಗುತ್ತಿಗೆ ಶಿಕ್ಷಕರ ಗೋಳು ಕೇಳುವವರಿಲ್ಲ.
ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರು ವರ್ಷದಿಂದ ಸಂಬಳ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ 116 ಆಶ್ರಮ ಶಾಲೆಯಲ್ಲಿ ಸುಮಾರು 350 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಮಾಸಿಕ 8500 ರೂ.ಗಳನ್ನು ನೀಡುತ್ತಿದೆ. ಆದರೆ ಕಳೆದ ಒಂದು ವರ್ಷದಿಂದ ಯಾವುದೇ ವೇತನವಾಗಲಿ, ಪ್ಯಾಕೇಜ್ ಸಿಕ್ಕಿಲ್ಲ. ಅಲ್ಲದೆ ಈ ಬಗ್ಗೆ ಶಿಕ್ಷಣ ಇಲಾಖೆಯು ನಿರ್ಲಕ್ಷ್ಯಕ್ಕೆ ಗುತ್ತಿಗೆ ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಖಾಯಂ ಶಿಕ್ಷಕರಂತೆ ಇತರೆ ಸೌಲಭ್ಯ ನೀಡುವಂತೆ ಆದೇಶಿಸಿದ್ದ ಸರ್ಕಾರ. ಆದರೆ ಶಿಕ್ಷಣ ಇಲಾಖೆ ಆದೇಶವನ್ನು ಜಾರಿ ಮಾಡದಿರುವುದು ಶೋಚನೀಯ. ವೀಡಿಯೋ ಮಾಡಿ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.