ಸಿಎಂ ಹುದ್ದೆ ಎಂದರೆ ಎಲ್ಲರಿಗು ಅಷ್ಟು ಹಗುರವಾಗಿ ಹೋಯ್ತ. ಆ ಹುದ್ದೆಯ ಗೌರವ ಬೇರೆಯೇ ಇದೆ- HC ಮಹದೇವಪ್ಪ!

1 min read

ನಾವು ಸಿದ್ದರಾಮೋತ್ಸವ ಅಂತ ಎಂದು ಕರೆದಿಲ್ಲ. ಮಾಧ್ಯಮದವರು, ಯಾರೋ ಅಭಿಮಾನಿಗಳು ಅದು ಕರೆದಿದ್ದಾರೆ. ನಾವು ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡುತ್ತಿದ್ದೇವೆ‌. ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ. ದೊರೆ, ರಾಜ, ಈ ಪದಗಳು ಪ್ರಜಾಪ್ರಭುತ್ವದಲ್ಲಿ ಬಳಸಬಾರದು. ಅವನ್ನು ಬಳಸಬೇಡಿ ಎಂದು ಹೇಳಬೇಕಾದವರೇ ಅದನ್ನ ಬಳಸಿದರೆ.
ನಾವೇನು ಮಾಡೋದಕ್ಕೆ ಆಗುತ್ತದೆ‌. ಅಮೃತ ಮಹೋತ್ಸವ ಸಿಎಂ ಹುದ್ದೆಯನ್ನು ಕೇಳುವುದಕ್ಕೆ ಮಾಡುತ್ತಿಲ್ಲ.
ಯಾವ ಜಯಂತಿ ಸಮಾರಂಭಗಳ ಮೂಲಕ ಸಿಎಂ ಹುದ್ದೆಯನ್ನ ಕೇಳುವುದಕ್ಕೆ ಆಗುವುದಿಲ್ಲ. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ತಮ್ಮ ದುರಾಡಳಿತವನ್ನ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಜನ್ಮ ದಿನದ ಬಗ್ಗೆ ಸುಮ್ಮನ್ನೆ ಟೀಕೆ ಮಾಡುತ್ತಿದ್ದಾರೆ. ಸಿಎಂಗೆ ಕನಸ್ಸುಲ್ಲು ಕಾಂಗ್ರೆಸ್‌ದೆ ಚಿಂತೆ. 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಚಿಂತೆಯಲ್ಲಿ ಬೊಮ್ಮಾಯಿ ಏನೇನೋ ಮಾತಾಡುತ್ತಿದ್ದಾರೆ. ಮೈಸೂರಿನಲ್ಲಿ ಹೆಚ್‌ಸಿ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

ಸಿಎಂ ಹುದ್ದೆ ಎಂದರೆ ಎಲ್ಲರಿಗು ಅಷ್ಟು ಹಗುರವಾಗಿ ಹೋಯ್ತ. ಆ ಹುದ್ದೆಯ ಗೌರವ ಬೇರೆಯೇ ಇದೆ. ಹೋರಾಟ, ಸಾಮಾಜಿಕ ಬದ್ಧತೆ, ರಾಜಕೀಯ ಜೀವನದ ಅನುಭವ ಎಲ್ಲವು ಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಯ ಚರ್ಚೆಗಳಿದ್ದರು ಅದನ್ನ ಹಗುರವಾಗಿ ಆ ಹುದ್ದೆಯ ಬಗ್ಗೆ ಕಾಣುತ್ತಿಲ್ಲ. ಬೇರೆ ಪಕ್ಷಗಳಲ್ಲಿ ಆ ಹುದ್ದೆಯ ಬಗ್ಗೆ ಬಹಳ ಹಗುರವಾಗಿ ಯಾರ್ಯೋರು ನಾನು ಸಿಎಂ, ನಾನು ಸಿಎಂ ಎನ್ನುತ್ತಿದ್ದಾರೆ. ಮೊದಲು ನಮಗೆ 130 ಸೀಟು ಬರಬೇಕು. ನಂತರ ಶಾಸಕರು ಹೈಕಮಾಂಡ್ ಆ ಬಗ್ಗೆ ತೀರ್ಮಾನ ಮಾಡುತ್ತದೆ. ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ.

About Author

Leave a Reply

Your email address will not be published. Required fields are marked *