ಹೋಟೆಲ್ ಉದ್ಯಮಕ್ಕೆ ಸರ್ಕಾರದಿಂದ ಗುಡ್ ನ್ಯೂಸ್- ಸ್ಪೆಷಲ್ ಪ್ಯಾಕೇಜ್ ಹೀಗಿದೆ!
1 min readಹೋಟೆಲ್ ಉದ್ಯಮಕ್ಕೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 50 ರಷ್ಟು ತೆರಿಗೆ ಕಡಿತಗೊಳಿಸಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಮಾಹಿತಿ ನೀಡಿದ್ದು, ಕರೋನಾ 2ನೇ ಅಲೆಯಿಂದಾಗಿ ಪ್ರವಾಸೋದ್ಯಮ ವಲಯಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಇದರಿಂದ ಹೋಟೆಲ್ ರೆಸಾರ್ಟ್, ರೆಸ್ಟೋರೆಂಟ್ ಮತ್ತು ಇತರೆ ಭಾಗಗಳಿಗೆ ಸಂಕಷ್ಟಕ್ಕೆ ಒಳಗಾಗಿವೆ. ಇದರಿಂದ ರಾಜ್ಯ ಸರ್ಕಾರವು ಈ ಸಂಕಷ್ಟದ ಸಂದರ್ಭದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳನ್ನು ತೆರೆಯಲು ಮತ್ತು ನಿರ್ವಹಣೆ ಮಾಡಲು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದ್ದು, ಈ ಪುನಶ್ಚೇತನ ಕ್ರಮಗಳಿಂದ ಪ್ರವಾಸಿ ವಲಯವು ಚಟುವಟಿಕೆಗಳನ್ನು, ವ್ಯಾಪಾರ ವಹಿವಾಟನ್ನು ಮರು ಆರಂಭಿಸಲು ಮತ್ತು ಭಾಗಿದಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಈ ಮೂಲಕ ಅವರಿಗೆ ಕೆಲವೊಂದು ಅನುಕೂಲ ಮಾಡಿಕೊಟ್ಟಿದೆ.
- ಈ ಹಣಕಾಸಿನ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಪ್ರವಾಸೋದ್ಯಮ ಸ್ಥಳಗಳಿಗೆ ಶೇ.50 ರಷ್ಟು ಆಸ್ತಿ ತೆರಿಗೆಯನ್ನು ಕಡಿತಗೊಳಿಸಿದೆ. ಅಲ್ಲದೆ ಕೇವಲ 50ರಷ್ಟು ಪಾವತಿ ಮಾಡಬೇಕಾಗಿದೆ.
- ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಪ್ರವಾಸೋದ್ಯಮ ಸ್ಥಳಗಳಿಗೆ ಏಪ್ರಿಲ್, ಮೇ, ಜೂನ್-2021 ತಿಂಗಳಲ್ಲಿ ವಿದ್ಯುತ್ ಡಿಮ್ಯಾಂಡ್, ಫಿಕ್ಸಿಡ್ ಶುಲ್ಕವನ್ನು ಪಾವತಿ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ.
- ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾವಣೆ ಮಾಡಿಕೊಂಡ ಪ್ರತಿ ಪ್ರವಾಸಿ ಸದಸ್ಯರಿಗೆ 5 ಸಾವಿರದ ಹಣಕಾಸು ನೆರವನ್ನು ನೀಡಲಾಗುವುದು. ಇದನ್ನ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡುವುದು.
- ಅಬಕಾರಿ ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳಲ್ಲಿ ಶೇ.50ರಷ್ಟು ಮೊತ್ತವನ್ನು ಪಾವತಿಸುವುದು.
- ಉಳಿದ ಶೇ.50ರಷ್ಟು ಶುಲ್ಕ ಮೊತ್ತವನ್ನು ಈ ವರ್ಷದ ಅಂತ್ಯದೊಳಗೆ ಪಾವತಿಸುವುದು.
ಹೀಗೆ ಅನೇಕ ಉಪಯುಕ್ತವಾದ ಅನುಕೂಲವನ್ನ ಪ್ರವಾಸೋದ್ಯಮ ಇಲಾಖೆಯಿಂದ ಹೋಟೆಲ್ ಉದ್ಯಮಕ್ಕೆ ನೀಡಲಾಗಿದೆ.