ಮೈಸೂರು ಜಿಲ್ಲೆಗೆ ಸಣ್ಣ ಮಟ್ಟದ ಗುಡ್ ನ್ಯೂಸ್- ಕೊಂಚ ಮಟ್ಟದ ಅನ್‌ಲಾಕ್- ಡಿಸಿ ಬಗಾದಿ ಗೌತಮ್-

1 min read

ಮೈಸೂರು ಜಿಲ್ಲೆಗೆ ಸರ್ಕಾರದಿಂದ ಲಾಕ್‌ಡೌನ್ ‌ನಿಂದ ಕೊಂಚ ರಿಲೀಫ್ ನೀಡಿದ್ದು 50 ಪರ್ಸೆಂಟ್ ಕೈಗಾರಿಕೆ ಇಲಾಖೆಗೆ ಅವಕಾಶ ನೀಡಿದ್ದು, ಗಾರ್ಮೆಂಟ್ಸ್ ಗೆ ಬಿಟ್ಟು ಈ ಅನ್‌ಲಾಕ್‌ ಮಾಡಲಾಗಿದೆ. ಇನ್ನು ಈಗಿರುವ ಅಂಗಡಿಗಳಿಗೆ ಅಂದರೆ ಅವಶ್ಯಕತೆ ಇರುವ ದಿನಸಿ- ಕಿರಾಣಿ ಅಂಗಡಿ, ಮಾಂಸದಂಗಡಿ, ಹಾಲಿನ ಕೇಂದ್ರ, ಹಣ್ಣಿನ ಅಂಗಡಿಗೆ ಬೆಳಗ್ಗೆ 6 ರಿಂದ 2ಗಂಟೆ ವರೆಗು ಅವಕಾಶ ಕೊಡಲಾಗಿದೆ. ಚಾಟ್ಸ್- ಅಂಗಡಿಗು ಇದೇ ಅವಕಾಶವನ್ನು ಕಲ್ಪಿಸಲಾಗಿದ್ದು ಜನರು ಅನಗತ್ಯವಾಗಿ ಮುಗಿ ಬೀಳದಂತೆ ಡಿಸಿ ಬಗಾದಿ ಗೌತಮ್ ತಿಳಿಸಿದ್ದಾರೆ.

ಅಲ್ಲದೆ ಲಿಕ್ಕರ್‌ಗೆ ಪಾರ್ಸಲ್‌ಗೆ ಮಾತ್ರ ಈ ಸಮಯದಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ ಹೋಮ್ ಡಿಲಿವರಿ 24 ಗಂಟೆಗಳ ಕಾಲ ಅವಕಾಶ ನೀಡಲಾಗಿದೆ. ಆದರೆ ಎಲ್ಲ ಅಂಗಡಿಗೆ ಅವಕಾಶ ಇಲ್ಲ ಎಂದು ಡಿಸಿ ಮಾಹಿತಿ ನೀಡಿದ್ದಾರೆ. ಆದರೆ ಇಂದಿನಿಂದ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು ಸೋಮವಾರ ಬೆಳಗ್ಗೆ 6 ಗಂಟೆವರೆಗು ಲಾಕ್‌ಡೌನ್ ಇರಲಿದೆ- ಮದುವೆ ಸಮಾರಂಭಕ್ಕೆ ಅಧಿಕಾರಿಗಳ ಬಳಿ ಅನುಮತಿ ಪಡೆಯಬೇಕಿದ್ದು, 40 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

ಸರ್ಕಾರದ ಮಾಹಿತಿ-

ಯಾವುದಕ್ಕೆಲ್ಲ ಅನುಮತಿ ಇಲ್ಲಿದೆ ನೋಡಿ!

ಮೈಸೂರು ಕೊರೊನಾ ಅನ್‌ಲಾಕ್ ಮಹತ್ವದ ಮಾಹಿತಿ

ಮೈಸೂರಿನಲ್ಲಿ ಕಡಿಮೆಯಾದ ಪಾಸಿಟಿವಿಟಿ

  • 25/06/2021ರಿಂದ ಮೈಸೂರು ಜಿಲ್ಲೆ ಕೆಟಗಿರಿ 2ಕ್ಕೆ ಸೇರಿಸಲಾಗಿದೆ
  • ರಾಜ್ಯ ಸರ್ಕಾರದಿಂದ ಆದೇಶ
  • ಎಲ್ಲಾ ಕೈಗಾರಿಕೆಗಳು ಶೇಕಡ 50ರಷ್ಟು ಸಿಬ್ಬಂದಿಗೆ ಅವಕಾಶ
  • ಗಾರ್ಮೆಂಟ್ಸ್‌ಗೆ ಶೇಕಡ 30ರಷ್ಟು ಕಾರ್ಮಿಕರಿಗೆ ಅವಕಾಶ

ಅಗತ್ಯ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ

  • ಹಣ್ಣುಗಳು ದಿನಸಿ ಮಾಂಸ ಅಗತ್ಯ ವಸ್ತುಗಳ
  • ಪಾನಿಪಾರಿ ಬಜ್ಜಿ ತಳ್ಳು ಗಾಡಿಯಲ್ಲಿ ಮಾರುವವರಿಗೂ ಅವಕಾಶ
  • ಕಿರಾಣಿ ಅಂಗಡಿಗಳಿಗೆ ಅವಕಾಶ
  • ಮದ್ಯದ ಅಂಗಡಿಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ
  • ಎಲ್ಲಾ ವಸ್ತುಗಳು ಹೋಂ ಡೆಲಿವರಿಗೆ 24/7 ಅವಕಾಶ
  • ಹೋಟೆಲ್‌ಗಳಲ್ಲಿ 24/7 ಪಾರ್ಸೆಲ್‌ಗೆ ಅವಕಾಶ
  • ಕಟ್ಟಡದ ನಿರ್ಮಾಣ ಕಾಮಗಾರಿಯ ಮಾರಾಟ ಮಳಿಗೆಗೂ ಅವಕಾಶ.
  • ಕಬ್ಬಿಣದ ಅಂಗಡಿ, ಸಿಮೆಂಟ್, ಹಾರ್ಡ್‌ವೇರ್ ಸೇರಿ ಎಲ್ಲಾ ಕಟ್ಟಡ ಸಾಮಾಗ್ರಿಗಳ ಅಂಗಡಿಗಳಿಗೆ ಅವಕಾಶ
  • ಉದ್ಯಾನವನಗಳಲ್ಲಿ 05 ರಿಂದ 10 ರವರೆಗೂ ಅವಕಾಶ
  • ಟ್ಯಾಕ್ಸಿ ಆಟೋಗಳಿಗೆ ಇಬ್ಬರು ಪ್ಯಾಸೆಂಜರ್ ಜೊತೆ ಅವಕಾಶ
  • ಸರ್ಕಾರಿ ಕಚೇರಿಗಳು ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಅವಕಾಶ.
  • ತರಬೇತಿಗೆ ಅವಕಾಶ
  • ಕನ್ನಡಕದ ಅಂಗಡಿಗಳಿಗೂ ಅವಕಾಶ
  • ಮದುವೆಗೆ 40 ಜನಕ್ಕೆ ಅವಕಾಶ ಅನುಮತಿನ ಕಡ್ಡಾಯ
  • ಅಂತ್ಯ ಸಂಸ್ಕಾರಕ್ಕೆ 5 ಜನರಿಗೆ ಭಾಗವಹಿಸಲು ಅವಕಾಶ

ಇವತ್ತು 25/06/2021 ಸಾಯಂಕಾಲದಿಂದ ವೀಕೆಂಡ್ ಕರ್ಪ್ಯೂ

  • ಮೈಸೂರಿನಲ್ಲೂ ವೀಕೆಂಡ್ ಕರ್ಪ್ಯೂ ಅನ್ವಯ
  • ಅಗತ್ಯ ವಸ್ತುಗಳು ಮೆಡಿಕಲ್ ಮಾರಾಟಕ್ಕೆ‌ ಮಾತ್ರ ಅವಕಾಶ.

About Author

Leave a Reply

Your email address will not be published. Required fields are marked *