ಸರಕಾರಿ ಭೂಮಿ ಒತ್ತುವರಿ ತನಿಖೆ ವಿಚಾರ: 4 ವಾರ ಹೆಚ್ಚುವರಿ ಕಾಲಾವಕಾಶ ಕೇಳಿದ ಮೈಸೂರು ಡಿಸಿ

1 min read

ಮೈಸೂರು: ಮೈಸೂರಿನಲ್ಲಿ ನಡೆದಿದ್ದೆ ಎನ್ನಲಾದ ಸರಕಾರಿ ಭೂಮಿ ಒತ್ತುವರಿ ತನಿಖೆ ವಿಚಾರ ತನಿಖೆಗೆ 4 ವಾರ ಹೆಚ್ಚುವರಿ ಕಾಲಾವಕಾಶ ಕೇಳಿದ್ದಾರೆ ಮೈಸೂರು ಡಿಸಿ.

ಈ ಬಗ್ಗೆ ಭೂ ಮಾಪನ‌ ಕಾರ್ಯದರ್ಶಿಗೆ ಮೈಸೂರು ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ದಸರಾ ಹಾಗೂ ಕೋವಿಡ್ ನಿರ್ವಹಣೆ ಕಡೆ ತುರ್ತು ಗಮನಹರಿಸಬೇಕಿದೆ. ಹೀಗಾಗಿ, ಒತ್ತುವರಿ ತನಿಖೆಗೆ ಕಾಲಾವಕಾಶ ಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

3 ವಾರದಲ್ಲಿ ವರದಿ ನೀಡುವಂತೆ ಕಳೆದ ತಿಂಗಳ ಮೊದಲ‌ ವಾರದಲ್ಲಿ ಸರಕಾರ ಆದೇಶಿಸಿತ್ತು. ಮೈಸೂರಿನ ಜಯಪುರ ಹೋಬಳಿಯ ಕೇರ್ಗಳಿ ಗ್ರಾಮ, ಯಡಹಳ್ಳಿ, ಲಿಂಗಾಂಬುಧಿ, ದಟ್ಟಗಳ್ಳಿ ಗ್ರಾಮದ ಸರಕಾರಿ ಜಮೀನು ಸರ್ವೆಗೆ ಆದೇಶವಾಗಿತ್ತು. ಈ ವ್ಯಾಪ್ತಿಯಲ್ಲಿ ಶಾಸಕ ಸಾರಾ ಮಹೇಶ್ ಅವರ ಕಲ್ಯಾಣ ಮಂಟಪ, ತೋಟ ಇದೆ. ಹೀಗಾಗಿ, ಸರ್ವೆ ವಿಚಾರ ಭಾರೀ ಸದ್ದು ಮಾಡಿತ್ತು.

About Author

Leave a Reply

Your email address will not be published. Required fields are marked *