ಮೈಸೂರಿಗೆ ಆಗಮಿಸಿದ ಜರ್ಮನಿ, ಸಿಂಗಪೂರ್, ಮಲೇಶಿಯಾ ಅತಿಥಿಗಳು..!
1 min readಮೈಸೂರು: ಮೈಸೂರು ಮೃಗಾಲಯಕ್ಕೆ ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾ ಅತಿಥಿಗಳು ಆಗಮಿಸಿವೆ. ಮೈಸೂರಿಗೆ ಬಂದಿಳಿದ ಅತಿಥಿಗಳು ಸದ್ಯ ಕ್ವಾರೈಂಟೈನ್ ಆಗಿವೆ.
ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಎರಡು ಗಂಡು ಗೋರಿಲ್ಲಾಗಳು ಟಬ್ಬೊ (14 ವರ್ಷ), ಡಂಬೋ (8 ವರ್ಷ) ಜರ್ಮನಿಯಿಂದ ಕೊಡುಗೆಯಾಗಿ ಬಂದಿವೆ. ಮೃಗಾಲಯದಲ್ಲಿ ಇನ್ಫೋಸಿಸ್ ನಿರ್ಮಿಸಿರುವ ಆವರಣದಲ್ಲಿ ಅತಿಥಿಗಳಿಗೆ ಆರೈಕೆ ಮಾಡಲಾಗುತ್ತಿದೆ.
ಮಲೇಶಿಯಾ, ಸಿಂಗಪೂರ್‌ನಿಂದ ತಲಾ 2 ಗೋರಿಲ್ಲಾಗಳು ಆಗಮಿಸಿವೆ. ಮಲೇಶಿಯಾದ ಮಾರ್ಲಿನ್ (ಗಂಡು- 16 ವರ್ಷ), ಅಟೀನಾ (ಹೆಣ್ಣು- 12 ವರ್ಷ), ಸಿಂಗಪೂರ್‌ನ ಆಫಾ (ಗಂಡು- 7 ವರ್ಷ), ಮಿನಿ (ಹೆಣ್ಣು- 5 ವರ್ಷ) ಮೈಸೂರು ಮೃಗಾಲಯದಲ್ಲಿ ಆಶ್ರಯ ಪಡೆದುಕೊಂಡಿವೆ.
15 ದಿನಗಳ ಹಿಂದೆಯೇ ಈ ವಿದೇಶಿ ಅತಿಥಿಗಳ ಆಗಮನವಾಗಿದೆ. ಕೋವಿಡ್ ಹಿನ್ನಲೆ ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿವೆ.