ತಾತ್ಕಾಲಿಕವಾಗಿ ಆಟ ನಿಲ್ಲಿಸಿದ ಗಾಯತ್ರಿ ಚಿತ್ರಮಂದಿರ!
1 min readಮೈಸೂರು : ಕೊರೋನಾ ಕಂಟ್ರೋಲ್‌ಗೆ ಸರ್ಕಾರ ಸಾಕಷ್ಟು ನಿಯಮಗಳನ್ನ ಮಾಡಿದ್ದು, ಈ ನಿಯಮ ಮೈಸೂರಿನ ಚಿತ್ರಮಂದಿರಕ್ಕೆ ಎಫೆಕ್ಟ್ ಆಗಿದೆ. ಇದರಿಂದ ತಾತ್ಕಾಲಿಕವಾಗಿ ಆ ಚಿತ್ರಮಂದಿರ ಕದಮುಚ್ಚಿದೆ. ಹೌದು, ಲಾಕ್ ಡೌನ್, ಕರ್ಫ್ಯೂ ನಿಯಮಗಳಿಂದ ಮೈಸೂರಿನ ಮತ್ತೊಂದು ಹೆಸರಾಂತ ಚಿತ್ರಮಂದಿರ ಆಟ ನಿಲ್ಲಿಸಿದೆ. ತಾತ್ಕಾಲಿಕವಾಗಿ ಮೈಸೂರು ನಗರದ ಗಾಯತ್ರಿ ಚಿತ್ರಮಂದಿರ ಕದಮುಚ್ಚಿದ್ದು ಚಿತ್ರಮಂದಿರದ ಮಾಲೀಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದಿದೆ. ಸರ್ಕಾರದ ನಿಯಮಗಳಿಗೆ ಕಂಗೆಟ್ಟ ಚಿತ್ರಮಂದಿರದ ಮಾಲೀಕರು, ಶೇ.50ರಷ್ಟು ಆಸನ ನಿಯಮ ಮತ್ತು ಕರ್ಫ್ಯೂ ಅದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಮಾಲೀಕರು. ಬಹಳಷ್ಟು ಹಳೆಯದಾದ ಮೈಸೂರಿನ ಗಾಯತ್ರಿ ಚಿತ್ರಮಂದಿರ ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿದೆ.
ಕಳೆದ ವರ್ಷ ಕೊರೊನ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರಮಂದಿರ ಸಾಕಷ್ಟು ನಷ್ಟ ಅನುಭವಿಸಿತು. ಇದೀಗಾ ಮತ್ತದೆ ಸಮಸ್ಯೆ ಎದುರಾಗಿದೆ.
ಎರಡು ವರ್ಷದಲ್ಲಿ ಮೂರು ಚಿತ್ರಮಂದಿರ ಬಾಗಿಲು!
ಇದೇ ಕರೋನಾಗೆ ಮೈಸೂರಿನ ಮೂರು ಚಿತ್ರಮಂದಿರಗಳಾದ ಶಾಂತಲಾ, ಲಕ್ಷ್ಮಿ ಹಾಗೂ ಸರಸ್ವತಿ ಚಿತ್ರಮಂದಿರಗಳು ಕ್ಲೋಸ್ ಆಗಿದ್ದವು. ಅದೇ ಹಾದಿಯಲ್ಲಿ ಈ ಗಾಯತ್ರಿ ಚಿತ್ರಮಂದಿರ ತಾತ್ಕಾಲಿಕ ಸ್ಥಗಿತಗೊಂಡಿದೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರುವ ಚಿತ್ರಮಂದಿರದ ಮಾಲೀಕ ರಾಜರಾಮ್ ಅವರು ಹೊಸ ಚಿತ್ರ ಬಂದು, ಶೇ. ನೂರರಷ್ಟು ಭರ್ತಿಗೆ ಅವಕಾಶ ಸಿಗೋವರೆಗು ಚಿತ್ರಮಂದಿರ ತೆರೆಯೋಲ್ಲ ಎಂದಿದ್ದಾರೆ.