ಗ್ಯಾಸ್ ಪೈಪ್ ಲೈನ್ ವಿಚಾರ: ಮೈಸೂರು ರಕ್ಷಣಾ ವೇದಿಕೆಯಿಂದ ಜನಾಭಿಪ್ರಾಯ ಸಂಗ್ರಹ; ಮೈ.ಕಾ.ಪ್ರೇಮ್ ಕುಮಾರ್
1 min readಮೈಸೂರು,ಫೆ.1-ಗ್ಯಾಸ್ ಪೈಪ್ ಲೈನ್ ಅಳವಡಿಸುವ ಅವಶ್ಯಕತೆ ಸಂಬಂಧಿಸಿದಂತೆ ಮೈಸೂರು ರಕ್ಷಣಾ ವೇದಿಕೆ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಲಿದೆ ಎಂದು ವೇದಿಕೆಯ ಅಧ್ಯಕ್ಷರಾದ ಮೈ.ಕಾ. ಪ್ರೇಮ್ ಕುಮಾರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರವಾಗಿ ಮೈಸೂರಿನ ಜನಪತ್ರಿನಿಧಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇದನ್ನು ನಾವು ಗಮನಿಸಿದ್ದೇವೆ. ನಗರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅದನ್ನು ಗಮನಹರಿಸದೆ ಗ್ಯಾಸ್ ಪೈಪ್ ಲೈನ್ ವಿಚಾರವಾಗಿ ವಾಕ್ಸಮರಕ್ಕೆ ಇಳಿದಿದ್ದಾರೆ. ಹೀಗಾಗಿ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಅವಶ್ಯಕತೆ ಸಂಬಂಧಿಸಿದಂತೆ ಮೈಸೂರು ರಕ್ಷಣಾ ವೇದಿಕೆ ಜನಾಭಿಪ್ರಾಯ ಸಂಗ್ರಹಿಸಲಿದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಈ ಯೋಜನೆಯನ್ನು ಮೈಸೂರಿಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಜನೆಯನ್ನು ನಗರಕ್ಕೆ ತಂದು, ತ್ವರಿತವಾಗಿ ಜಾರಿಗೆ ತರಲು ಶ್ರಮಿಸುತ್ತಿರುವ ಸಂಸದ ಪ್ರತಾಪ್ ಸಿಂಹರವರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಯುವ ಘಟಕದ ಅಧ್ಯಕ್ಷರಾದ ಗುರುರಾಜ್ ಶೆಟ್ಟಿ, ಮುಖಂಡರಾದ ಸಂತೋಷ್ ಇದ್ದರು.