ಮೋದಿ ಯುಗ್ ಉತ್ಸವ, ಗಾಂಧಿ ಜಯಂತಿ ಪ್ರಯುಕ್ತ. ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಸ್ವಚ್ಛತಾ ಕಾರ್ಯ

1 min read

ಮೈಸೂರು: ಮೋದಿ ಯುಗ್ ಉತ್ಸವದ ಅಂಗವಾಗಿ ಮತ್ತು ಗಾಂಧಿ ಜಯಂತಿ ಪ್ರಯುಕ್ತ. ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಸ್ವಚ್ಛಭಾರತದ ಅಡಿಯಲ್ಲಿ ಬೆಳಗ್ಗೆ 8 ಗಂಟೆಗೆ ಭೂತಾಳ್ ಪಿಚ್ ಬಳಿ ಇರುವ ವೀರಶೈವ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯವನ್ನು  ಹಮ್ಮಿಕೊಳ್ಳಲಾಗಿತ್ತು.

ಮಹಾತ್ಮ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು
ಇಂದು ಗಾಂಧೀಜಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸುತ್ತ ಸ್ವಚ್ಛವಾದಂತಹ ರಾಷ್ಟ್ರವನ್ನು ಕಟ್ಟಬೇಕು ಸ್ವಚ್ಚವಾದಂತಹ ಮನಸ್ಸಿನ ಮೂಲಕ ರಾಷ್ಟ್ರವನ್ನು ಕಟ್ಟಬೇಕು ಎಂಬಂತಹ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲ ಹೆಜ್ಜೆ ಇಡಬೇಕಿದೆ. ಇಂದು ನಾವು ವೀರಶೈವ ರುದ್ರ ಭೂಮಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದೇವೆ , ಸ್ವಚ್ಛತೆ ಮಾಡುವಾಗ ಯಾವ ಯಾವ ಗಣ್ಯರು ಈ ಸಮಾಜವನ್ನು ಬಿಟ್ಟು ತಮ್ಮ ಸೇವೆಯ ನಂತರದಲ್ಲಿ ಹೋಗಿದ್ದಾರೆ ಎಂಬುವಂತಹ ಆ ಸಮಾಧಿಯನ್ನು ನೋಡುವಂತಹ ಸಂದರ್ಭದಲ್ಲಿ ಜೀವನದ ನೆನಪುಗಳು ಸಹಜವಾಗಿ ಬಂದೇ ಬರುತ್ತದೆ. ಮನುಷ್ಯ ತನ್ನ ಜೀವನವನ್ನು ಸಾರ್ಥಕತೆಗೊಳಿಸಿಕೊಳ್ಳಬೇಕು, ಸಮಜಕ್ಕೋಸ್ಕರ ಬದುಕಬೇಕು ಎಂಬುದು ಸ್ಮಶಾನಕ್ಕೆ ಬಂದಾಗ ನೆನಪು ಮಾಡಿಕೊಳ್ಳಬೇಕು. ಶಿವನ ಸಾನಿಧ್ಯ ಸ್ಮಶಾನದಲ್ಲಿರುತ್ತದೆ ಎಂಬುದು ನಮಗೆ ತಿಳಿದ ವಿಷಯ. ಮುಖ್ಯವಾಗಿ 2021,2022 ನೆ ಸಾಲಿನಲ್ಲಿ ನಮ್ಮ ಕ್ಷೇತ್ರದಲ್ಲಿರುವ 13 ಸ್ಮಶಾನಗಳ ಅಭಿವೃದ್ಧಿ ಕಾರ್ಯಗಳಿಗೆ ನಾವು ಚಾಲನೆಯನ್ನು ನೀಡಲಿದ್ದೇವೆ. ಬರೀ ಸ್ಮಶಾನದ ಸ್ವಚ್ಛತೆ ಮಾತ್ರ ಅಲ್ಲ ಅಲ್ಲಿಗೆ ಬೇಕಾದಂತಹ ಮೂಲಭೂತ ವ್ಯವಸ್ಥೆಗಳನ್ನು ಜೋಡಿಸಬೇಕು ಎಂದು ಅಂದುಕೊಂಡಿದ್ದೇವೆ. ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಮುಖ್ಯಮಂತ್ರಿಗಳು ಬಂದಾಗ ಚಾಲನೆ ನೀಡುತ್ತೇವೆ. ಸರಿಯಾದಂಥ ಜಾಗದಲ್ಲಿ ಒಂದು ಎಲ್.ಇ. ಡಿ ಪರದೆಯನ್ನು ಹಾಕಿ ನಮ್ಮ ಪುರಾಣ ದ ವಿಷಯಗಳನ್ನು ಇಟ್ಟುಕೊಂಡು ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಎನ್ನುವ ವಿಷಯವನ್ನು ಕೊಡುವ ವಿಡಿಯೋ ವನ್ನು ನಾವು ಆ ಪರದೆಯಲ್ಲಿ ಪ್ರದರ್ಶನ ಮಾಡಲಿದ್ದೇವೆ. ಸ್ಮಶಾನ ಎಂದ ತಕ್ಷಣದಲ್ಲೇ ಮಡಿವಂತಿಗೆಯ ವ್ಯವಸ್ಥೆಯನ್ನು ಕಾಣುತ್ತೇವೆ ಆದರೆ ಇದು ನಿಜವಾದ ಶಿವನ ಕ್ಷೇತ್ರ, ವಿಷ್ಣುವಿನ ಕ್ಷೇತ್ರ ಎಂಬ ಚಿಂತನೆಯನ್ನು ಇಟ್ಟುಕೊಂಡು ಸಮಾಜಕ್ಕೆ ನೀಡಬೇಕೆಂದು ನಮ್ಮ ಯೋಜನೆ ಇದೆ ಎಂದರು.

ಹಲವಾರು ವರ್ಷಗಳಿಂದ ವೀರಶೈವ ರುದ್ರಭೂಮಿಯಲ್ಲಿ ಶವ ಹೂಳಲು ಗುಂಡಿ ತೆಗೆಯುವ ಕೆಲಸವನ್ನು ಮಾಡುತ್ತಿರುವ ನೀಲಮ್ಮ ಅವರಿಗೆ ಕೆ.ಆರ್ ಕ್ಷೇತ್ರದ ಭಾಜಪಾದ ವತಿಯಿಂದ ಮಾನ್ಯ ಶಾಸಕರು ಸನ್ಮಾನಿಸಿದರು.

ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರುಗಳಾದ ಶ್ರೀಮತಿ ಗೀತಾಶ್ರೀ ಯೋಗಾನಂದ್, ಶ್ರೀಮತಿ ರೂಪ, ಶ್ರೀಮತಿ ಶಾರದಮ್ಮ ಈಶ್ವರ್, ಶ್ರೀಮತಿ ಸೌಮ್ಯ ಉಮೇಶ್,ಬಿ.ವಿ ಮಂಜುನಾಥ್ , ಮಾ.ವಿ.ರಾಮಪ್ರಸಾದ್,
ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಉಪಾಧ್ಯಕ್ಷರಾದ ಸಂತೋಷ್ ಶಂಭು , ಪ್ರಧಾನಕಾರ್ಯದರ್ಶಿಗಳಾದ ನಾಗೇಂದ್ರ ಕುಮಾರ್, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್ , ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ(ಅಪ್ಪಿ), ಪ್ರಮುಖರಾದ ಅನ್ನಪೂರ್ಣ, ಪ್ರಸಾದ್ ಬಾಬು, ಭಾಗ್ಯ, ಶಾಂತ, ರೇಣುಕಾ, ರವಿ, ಉಮೇಶ್, ಮುರುಳಿ, ಶಿವಪ್ಪ, ಶಿವಪ್ರಸಾದ್, ದೇವರಾಜೇಗೌಡ ಇನ್ನಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *