ಜೀವನದಲ್ಲಿ ಈ ಮೂರು ಅಂಶ ಬಹಳ ಮುಖ್ಯ- ಗಣಪತಿ ಶ್ರೀ!
1 min readಮೈಸೂರು: ಎಲ್ಲರ ಜೀವನದಲ್ಲಿ ಆಹಾರ,ವಿಹಾರ,ವಿಚಾರ ಇವು ಬಹಳ ಮುಖ್ಯ. ಇವು ಮೂರೂ ಉತ್ತಮವಾಗಿರಬೇಕು.ಉತ್ತಮ ಆಹಾರ, ಪ್ರತಿದಿನ ವಾಕಿಂಗ್ ಹಾಗೂ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನುಡಿದರು.
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳನ್ನು ಈ ವೇಳೆ ತಿಳಿಸಿಕೊಟ್ಟರು.
ಮನಸ್ಸು ಮರ್ಕಟವಿದ್ದಂತೆ ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು,ಹೀಗೆ ಮನಸ್ಸನ್ನು ಕಂಟ್ರೋಲ್ ಮಾಡಲು ಸತತ ಯೋಗಭ್ಯಾಸದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ಮನಸ್ಸು ಶುದ್ದಿಯಾಗುತ್ತದೆ ನಿಮ್ಮ ಜೀವನ ನಿಮಗೇ ಅರಿವಿಲ್ಲದಂತೆ ಪರಿವರ್ತನೆ ಯಾಗುತ್ತದೆ ಎಂದು ತಿಳಿಸಿದರು.
ಎಲ್ಪರೂ ಪ್ರತಿದಿನ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಶಾಂತಿ,ನೆಮ್ಮದಿ ಸಿಗುತ್ತದೆ ಇದರಿಂದ ಆರೋಗ್ಯವೂ ಉತ್ತಮವಾಗುತ್ತದೆ ಸಮಾಜವೂ ಅಭಿವೃದ್ಧಿ ಯಾಗುತ್ತದೆ ಎಂದು ತಿಳಿಹೇಳಿದರು.
ಮನಸಿನ ಕೈಗೆ ಬುದ್ದಿ ಕೊಟ್ಟು ಏನೇನೋ ಮಾಡುವ ಬದಲು ಮನಃಶುದ್ದಿ ಅಗತ್ಯ.ಇದಕ್ಕೆ ಯೋಗವೇ ಮದ್ದು ಎಂದು ಶ್ರೀಗಳು ತಿಳಿಸಿದರು.
ನಾಡಿಶುದ್ದಿ,ಪ್ರಾಣಾಯಾಮ, ಮುದ್ರೆಗಳು ಹಾಗೂ ಧ್ಯಾನವನ್ನು ಶ್ರೀಗಳು ಬೋದಿಸಿದರು.
ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ಇಂದಿನ ಯೋಗ ದಿನದಲ್ಲಿ ಪಾಲ್ಗೊಂಡಿದ್ದರು.
ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮಕ್ಕಳಿಗೆ ಹಿತವಚನ ಹೇಳಿದರು.
ನಮ್ಮ ಶ್ರೀಗಳಿಂದ ಯೋಗಾಭ್ಯಾಸ ಕಲಿಯಲು ದೇಶ ವಿದೇಶಗಳಿಂದ ಗಣ್ಯರು ಬರುತ್ತಾರೆ ಅಂತಹುದರಲ್ಲಿ ಇಂದು ಅವರೇ ಮಕ್ಕಳಿಗೆ ಯೋಗ ದಿನಾಚರಣೆ ಪ್ರಯುಕ್ತ ಯೋಗಾಭ್ಯಾಸ ಹೇಳಿಕೊಟ್ಟಿದ್ದು ನಿಜಕ್ಕೂ ನಮ್ಮೆಲ್ಲರ ಯೋಗವೇ ಆಗಿದೆ ಎಂದು ತಿಳಿಸಿದರು.
ಇದೇ ವೇಳೆ ಕಿರಿಯ ಶ್ರೀಗಳು ಮಕ್ಕಳಿಗೆ
ಪ್ರತಿ ದಿನ ಮುದ್ರೆ,ಯೋಗಾಭ್ಯಾಸ, ಪ್ರಾಣಾಯಾಮ ಮಾಡುತ್ತೇವೆ ಎಂದು ಸಂಕಲ್ಪ ಮಾಡಿಸಿದರು.
ಯೋಗ ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ. ಕೆಲವರು ಇದು ಹಿಂದೂ ಧರ್ಮಕ್ಕೆ ಸೇರಿದ್ದೆಂದು ತಿಳಿದು ಕೊಂಡಿದ್ದಾರೆ. ಇದು ತಪ್ಪು ಕಲ್ಪನೆ. ಯೋಗ ಆರೋಗ್ಯಕ್ಕೆ ಅತೀ ಮುಖ್ಯ. ಇದು ಎಲ್ಲಾ ಜರಿಗೂ ಅತ್ಯಗತ್ಯವಾದುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪ್ರತಿದಿನ ಯೋಗಾಸನ ಮಾಡುವುದರಿಂದ ಗ್ರಹಣಶಕ್ತಿ ವೃದ್ಧಿಸುತ್ತದೆ ಜ್ಞಾನ ವೃದ್ಧಿಯಾಗುತ್ತದೆ ನೆನಪಿನ ಶಕ್ತಿ ಹೆಚ್ಚಾಗುತ್ಯದೆ ಇದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಹೇಳಿದರು.
ಮಹರ್ಷಿ ಪಬ್ಲಿಕ್ ಸ್ಕೂಲ್, ನಜರ್ ಬಾದ್ ನಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ಕೂಲ್,ವಾಣಿವಿಲಾಸ ಸ್ಕೂಲ್,ವಿದ್ಯಾರಣ್ಯಪುರಂನಲ್ಲಿರುವ ಭಾರತೀಯ ವಿದ್ಯಾಭವನ ಸ್ಕೂಲ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇಂದಿನ ಯೋಗದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ಯೋಗ ದಿನಾಚರಣೆ ನಡೆಯಿತು.ಸ್ವತಃ ಶ್ರೀ ಸ್ವಾಮೀಜಿಯವರೇ ಹಲವು ಯೋಗಾಸನಗಳನ್ನು ಹೇಳಿಕೊಟ್ಟಿದ್ದು ವಿಶೇಷವಾಗಿತ್ತು.
ಯೋಗ ಶಿಕ್ಷಕರು ಯೋಗಾಭ್ಯಾಸದ ಹಲವು ಪಟ್ಟುಗಳನ್ನು ಹೇಳಿಕೊಟ್ಟರು.
ಕೆಲವು ವಿದ್ಯಾರ್ಥಿಗಳು ಸಹಾ ಯೋಗ ಪ್ರದರ್ಶನ ಮಾಡಿ ತೋರಿಸಿದುದು ಮೆಚ್ಚುಗೆಗೆ ಪಾತ್ರವಾಯಿತು.