ಭಗವದ್ಗೀತೆ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ!

1 min read

Mysuru :- ಭಗವದ್ಗೀತೆ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ ಮನುಷ್ಯರಾದ ನಾವೆಲ್ಲರೂ ಗೀತೆಯ ಸಾರವನ್ನು ತಿಳಿದು ಅನುಸರಿಸಬೇಕು ಎಂದು ಹರಿಯಾಣ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಕರೆ ನೀಡಿದರು. ಇಂದಿನ ಚೈತನ್ಯಾರ್ಚನೆ ‌ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಗಳಿಗೆ ಶುಭಕಾಮನೆ‌ ಸಲ್ಲಿಸಿ ಅವರು ಮಾತನಾಡಿದರು.

ಇಡೀ ವಿಶ್ವದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಭಾರತೀಯ ಸಂಸ್ಕೃತಿ ಹಾಗೂ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. ವಿಶ್ವದ ವಿವಿಧ‌ ದೇಶಗಳಲ್ಲಿ ಶ್ರೀಗಳು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆಧ್ಯಾತ್ಮಿಕ ಪರಂಪರೆಯನ್ನು ಬಿಂಬಿಸುತ್ತಿದ್ದಾರೆ. ಭಗವದ್ಗೀತೆಯ ಸಂದೇಶಗಳನ್ನು ‌ಪ್ರಚಾರ ಮಾಡುತ್ತಿದ್ದಾರೆ‌‌ ಇದು‌ ಶ್ಲಾಘನೀಯ ಎಂದು ಹೇಳಿದರು.

ಶ್ರೀಗಳು ಅದ್ಭುತವಾದ ಸೇವಾ ಕಾರ್ಯಗಳನ್ನು ಮಾಡಿತ್ತಿದ್ದಾರೆ. ಆರೋಗ್ಯ ಶಿಬಿರ ಏರ್ಪಡಿಸಿ ಸಾವಿರಾರು ಮಂದಿಗೆ ನೆರವಾಗಿದ್ದಾರೆ. ನಾದಮಂಟಪದಲ್ಲಿ ಕಲಾವಿದರು, ವಿದ್ವಾಂಸರು, ಸಂಗೀತಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಿದ್ದಾರೆ ಇ. ಇದು ಅತ್ಯಂತ ಒಳ್ಳೆಯ ಕಾರ್ಯ ಎಂದು ಬಂಡಾರು ದತ್ತಾತ್ರೇಯ ತಿಳಿಸಿದರು.

ಶ್ರೀಗಳು ಧರ್ಮಪ್ರಚಾರಕರಷ್ಟೇ ಅಲ್ಲ ಅವರು ಸಮಾಜ ಸೇವೆ ಮಾಡುವ ಮೂಲಕ ಸಮಾಜೋದ್ದಾರಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಗಣಪತಿ ಆಶ್ರಮದಲ್ಲಿ ಶುಖವನ, ಬೋನ್ಸಾಯ್ ಗಾರ್ಡನ್, ಅಶ್ವಶಾಲ,‌ವೇದಪಾಠಶಾಲ,‌ ದೇವಾಲಯಗಳಿವೆ. ಇದನ್ನೆಲ್ಲ‌ ನೋಡಿದರೆ ಈ ಆಶ್ರಮ ಭಾರತೀಯ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ ಎಂದು ಹರಿಯಾಣ ರಾಜ್ಯಪಾಲರು ಬಣ್ಣಿಸಿದರು. ಇಂದಿನ ಚೈತನ್ಮಾರ್ಚನೆ ಕಾರ್ಯಕ್ರಮದಲ್ಲಿ ವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಸನ್ಮಾನ ಮಾಡಲಾಯಿತು.

ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಹಿಮಾಚಲ ಪ್ರದೇಶದ ಜ್ವಾಲಾಮುಖಿ ದೇವಸ್ಥಾನದ ಶ್ರೀ ಹಿಮಾಂಶು ಭೂಷಣ್‌ ದತ್, ವಿಜಯವಾಡದ ಚಿಂತಪಲ್ಲಿ ಆಂಜನೇಯ ಘನಪಾಠಿ,
ಮೈಸೂರಿನ ಚಾಮುಂಡಿ ಬೆಟ್ಟದ ಮುಖ್ಯ ಪುರೋಹಿತರಾದ ಶೈವಾಗಮ ಪಂಡಿತರಾದ ಶ್ರೀ ಎನ್.ಶಶಿಶೇಖರ ದೀಕ್ಷಿತ್‌ ಅವರಿಗೆ ನೀಡಿ ಗೌರವಿಸಲಾಯಿತು.

ಇದೇ ವೇಳೆ ಆಸ್ಥಾನ ವಿದುಷಿ ಪ್ರಶಸ್ತಿಯನ್ನು ವೀಣಾವಾದನದಲ್ಲಿ ಪ್ರಾವೀಣ್ಯತೆ ಪಡೆದ ಚೆನ್ನೈನ ಪುಣ್ಯಾ‌ ಶ್ರೀನಿವಾಸ್ ಅವರಿಗೆ ನೀಡಿ ‌ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಧರ್ಮ ಪ್ರಚಾರಕರಾದ ತಿರುಪತಿಯ ಆಖಂಡ ವಿಭೂಷಣ ಶರ್ಮ ಅವರಿಗೆ ಪ್ರವಚನ ನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶುಕವನ ಪ್ರಶಸ್ತಿಯನ್ನು ಚೆನ್ನೈ ನ ಶರವಣನ್ ಕೃಷ್ಣ ಸ್ವಾಮಿ ಅವರಿಗೆ ನೀಡಿ ಸನ್ಮಾನಿಸಲಾಯಿತು. ಇದಲ್ಲದೆ ಕೇರಳದ ಪತ್ರಕರ್ತ ಹಾಗೂ ಬಿಜೆಪಿ ಮುಖಂಡ ರಾದ ಕುಂಬಳಂ ರಾಜಶೇಖರನ್, ಆಂದ್ರಪ್ರದೇಶದ ಐಎಎಸ್ ಆಫೀಸರ್ ವೀರಬ್ರಹ್ಮ, ತಿರುಪತಿ-ತಿರುಮಲ ದೇವಾಲಯದ ಸ್ವರ್ಣಾಂಬ ಅವರುಗಳನ್ನು ಸನ್ಮಾನಿಸಲಾಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೆ ಜನ್ಮದಿನೋತ್ಸವಗಳ ಸಮಾರೋಪ ಸಮಾರಂಭ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀಚಕ್ರ ಪೂಜೆ, ಶಾಂತಿ ಪೌಷ್ಠಿಕ ಹೋಮ ನೆರವೇರಿಸಲಾಯಿತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಅನುಗ್ರಹ ಆಶೀರ್ವಚನ ನೀಡಿದರು. ಕಿರಿಯ ಶ್ರೀಗಳಾದ‌ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆಲ್ಲ ಧನ್ಯವಾದ ಸಲ್ಲಿಸಿದರು.

About Author

Leave a Reply

Your email address will not be published. Required fields are marked *