ಪುನೀತ್ ‘ರಾಜ್‌ಕುಮಾರ್’ ಹುಟ್ಟಿ ಬೆಳೆದ ಮನೆ ಈಗ ಮ್ಯೂಸಿಯಂ!
1 min readಚಾಮರಾಜನಗರ ಅಂದ್ರೆ ಮೊದಲಿಗೆ ನೆನಪಿಗೆ ಬರೋದೆ ವರನಟ ಡಾ.ರಾಜಕುಮಾರ್ ಅವರು. ಯಾಕಂದ್ರೆ ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ನಟ ಅಂದ್ರೆ ಅದು ನಮ್ಮ ಅಣ್ಣಾವ್ರು. ಜೊತೆಯಲ್ಲಿ ಅವರ ತಂದೆ ಪುಟ್ಟಸ್ವಾಮಯ್ಯ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರಿನವರು. ಅವರು ಹುಟ್ಟಿ ಬೆಳೆದದ್ದು ಮಾತ್ರ ಗಾಜನೂರಿನಲ್ಲಿ.
ವರನಟ ಡಾ.ರಾಜಕುಮಾರ್ ಅವರು ಸಹ ಹುಟ್ಟಿ ಬೆಳೆದದ್ದು ಇದೇ ಗಾಜನೂರಿನಲ್ಲಿ. ಹಾಗಾಗಿಯೇ ಗಾಜನೂರು ಅಂದ್ರೆ ಸಾಕು ಅವರಿಗೆ ಎಲ್ಲಿಲ್ಲದ ಪ್ರೀತಿ. ಡಾ.ರಾಜಕುಮಾರ್ ಜನಿಸಿದ ಈ ಊರಲ್ಲಿ ಒಂದು ಪುಟ್ಟದಾದ ಮನೆ ಇದೆ. ಈ ಮನೆ ಅಂದ್ರೆ ಸಾಕು ವರನಟ ರಾಜಕುಮಾರರಿಗೆ ಬಹಳ ಅಚ್ಚುಮೆಚ್ಚು.
ಬೆಂಗಳೂರಿನ ಜಂಜಾಟ ಹಾಗೂ ಊರಿನ ಕಡೆ ಹೋಗಬೇಕು ಅಂದ್ರೆ ಸಾಕು ರಾಜಕುಮಾರರು ಏಕಾಏಕಿ ತಮ್ಮ ಸ್ವಗ್ರಾಮಕ್ಕೆ ಬಂದು ಬಿಡ್ತಾರೆ. ಇಲ್ಲಿ ಬಂದರೆ ಸಾಕು ಈ ಹಳೆಯದಾದ ಹೆಂಚಿನ ಮನೆಯಲ್ಲಿ ಇರುತ್ತಾರೆ. ಆದರೆ ಅವರಿಗೆ ಮತ್ತೊಂದು ತೊಟ್ಟಿ ಮನೆ ಸಹ ಇದ್ದರೂ ಕೂಡ ಈ ಪುಟ್ಟ ಮನೆಯಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ರು. ಆದ್ರೆ ಈ ಅಪ್ಪನಿಗೆ ಅಚ್ಚುಮೆಚ್ಚಾದ ಈ ಮನೆಯನ್ನ ಪುನೀತ್ ರಾಜಕುಮಾರ್ ರೆಡಿ ಮಾಡಲು ಸಕಲ ಸಿದ್ದತೆಯನ್ನು ಮಾಡಿಸಿಕೊಂಡಿದ್ರು.
ಸುಮಾರು 200 ವರ್ಷಕ್ಕು ಹೆಚ್ಚಿನ ಹಳೆಯದಾದ ಈ ಮನೆ ಕುಸಿಯುವ ಹಂತಕ್ಕೆ ತಲುಪಿತ್ತು. ಇತ್ತಿಚ್ಚಿಗಂತು ಧಾರಕಾರ ಮಳೆಯ ಆರ್ಭಟ ಕೂಡ ಇತ್ತು. ಮೂರು ತಿಂಗಳ ಹಿಂದಷ್ಟೇ ಇಲ್ಲಿಗೆ ಭೇಟಿ ನೀಡಿದ್ದ ಪುನೀತ್ ಊರೆಲ್ಲ ಸುತ್ತಾಡಿ ಖುಷಿ ಪಟ್ಟಿದ್ರು. ಅಲ್ಲದೆ ಈ ಮನೆಗೆ ಕಾಯಕಲ್ಪ ಕಲ್ಪಿಸಬೇಕೆಂದು ಸಿದ್ದತೆ ನಡೆಸಿದ್ದರು. ಆದರೆ ಆ ವಿಧಿಯಾಟವೇ ಬೇರೆಯಾಗಿತ್ತು. ಪುನೀತ್ ಅವರ ಅಕಾಲಿಕ ಮರಣದಿಂದ ಮನೆಯ ದುರಸ್ಥಿ ಕಾರ್ಯದ ಕನಸ್ಸೇ ನಿಂತು ಹೋಯ್ತು. ಇದರಿಂದ ಅಪ್ಪು ಸೇರಿದಂತೆ ಎಲ್ಲರಿಗು ಬೇಸರವಾಗಿತ್ತು. ಆದರೆ ಇದನ್ನ ಮನಗಂಡ ರಾಜಕುಮಾರ ಅವರ ಕುಟುಂಬ ಇದಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾಗಿದ್ದು ಇಲ್ಲಿ ಒಂದು ವಿಶಿಷ್ಟವಾದ ಮ್ಯೂಸಿಯಂ ಮಾಡುವ ಆಸೆಯಲ್ಲಿದೆ. ಅದಕ್ಕಾಗಿ ಮೂಲ ಮನೆ ಹೇಗಿದೆ? ಅದನ್ನ ಸಂಪೂರ್ಣವಾಗಿ ಹಾಗೆಯೇ ಉಳಿಸಿಕೊಳ್ಳಲು ಪ್ಲಾನ್ ಮಾಡಿದ್ದು, ಕಾಮಗಾರಿ ಸಹ ಶುರುವಾಗಿದೆ.
ಮ್ಯೂಸಿಯಂನಲ್ಲಿ ಇರಲಿದೆ ಅಪ್ಪು- ಡಾ.ರಾಜ್ ಬಾಲ್ಯದ ಫೋಟೋಗಳು!
ಸುಮಾರು ಐದಾರು ತಲೆಮಾರಿನ ಕುಟುಂಬವಾದ ರಾಜಕುಮಾರ್ ಅವರ ಈ ಮನೆ ಹಾಗೂ ಅವರ ಬಾಲ್ಯದ ನೆನಪನ್ನ ಜನರಿಗೆ ಅಭಿಮಾನಿಗಳಿಗೆ ಉಣಬಡಿಸಲು ರಾಜ್ ಕುಟುಂಬ ಮುಂದಾಗಿದೆ. ಅಪ್ಪು ಕನಸ್ಸು ಕೂಡ ಇದೆ ಆಗಿರುವ ಕಾರಣ ಮನೆಯನ್ನ ಯಾವುದೇ ಕಾರಣಕ್ಕು ಕೆಡವದೆ ಇರುವಾಗೆಯೇ ಹೊಸ ಹೆಂಚುಗಳನ್ನ ಹಾಕಿಸಿ, ಬಿದಿರಿನ ಬಂಬೂಗಳನ್ನ ಬಳಸಿ ಮನೆಯನ್ನ ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳಲು ಸಕಲ ಸಿದ್ದತೆ ಆಗಿದೆ. ಈಗಾಗಲೇ ಮನೆಯ ಹೆಂಚು ತೆಗೆದು ಹೊಸ ಹೆಂಚು ಹಾಕಲು ಕೆಲಸ ಆರಂಭವಾಗಿದೆ. ಇದರಿಂದ ಆದಷ್ಟು ಬೇಗನೇ ಅಪ್ಪು ಕನಸು ನನಸ್ಸಾಗಲಿದೆ ಅಂತಾರೆ ರಾಜಕುಮಾರ ಅವರ ಕುಟುಂಬಸ್ಥರು.
ಸಾರ್ವಜನಿಕರಿಗೆ ಮ್ಯೂಸಿಯಂ ನೋಡಲು ಅವಕಾಶ!
ಇನ್ನು ಅಪ್ಪು ಬಾಲ್ಯದ ದಿನಗಳು, ಗಾಜನೂರಿನಲ್ಲಿ ಕಳೆದ ಕ್ಷಣ, ವರನಡ ಡಾ.ರಾಜಕುಮಾರ್ ಅವರ ಫೋಟೋ ಹಾಗೂ ಅವರ ತಂದೆಯ ನಾಟಕದ ಫೋಟೋ ಸೇರಿ ಎಲ್ಲವನ್ನು ಈ ಮ್ಯೂಸಿಯಂನಲ್ಲಿ ಇರಿಸಲು ಸಿದ್ದತೆ ಆಗಿದೆ. ವಿಶೇಷ ಅಂದ್ರೆ ಇದನ್ನ ಮುಂದಿನ ವರ್ಷಕ್ಕೆ ಲೋಕಾರ್ಪಣೆಗೊಳಿಸಿ ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಗಿಫ್ಟ್ ಕೊಡಲು ಸಿದ್ದತೆ ಸಹ ಆಗಿದೆ.
ಅಪ್ಪು ಕಳೆದುಕೊಂಡ ಸ್ಯಾಂಡಲ್‌ವುಡ್ ಇದೀಗಾ ಅಕ್ಷರ ಸಹ ಕತ್ತಲಾಗಿದೆ. ಅಪ್ಪು ನಮ್ಮ ಜೊತೆ ಇದ್ದಾರೆಂದು ಭಾವಿಸಲು ಈ ರೀತಿಯ ಕೆಲಸಗಳು ಆಗುತ್ತಿದ್ದರೆ ಅಪ್ಪುರನ್ನ ಆ ವಿಶೇಷ ಕೆಲಸಗಳ ಮೂಲಕ ಹಾಗೂ ಪುನೀತ್ ಅವರ ಸರಳತೆಯ ಜೀವನದಲ್ಲೇ ಅವರನ್ನ ಕಾಣುತ್ತೇವೆ.
ಧನ್ಯವಾದಗಳು..
ನನ್ನೂರು ಮೈಸೂರು ಟೀಂ…