ಹಿರಿಯ ರೈತಪರ ಹೋರಾಟಗಾರ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಸಂಸದೆ!
1 min readಹಿರಿಯ ರೈತ ಹೋರಾಟಗಾರರಾದ ಜಿ.ಮಾದೇಗೌಡರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ವಿಚಾರಿಸಲು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಸ್ಪತ್ರೆಗೆ ಭೇಟಿ ಕೊಟ್ಟು ಅವರ ಆರೋಗ್ಯ ವಿಚಾರಿಸಿದ್ದಾರೆ.
- ಈ ವೇಳೆ ಮಾದೇಗೌಡರ ಪುತ್ರನಾದ ಮಧು ಮಾದೇಗೌಡ ಹಾಗೂ ಡಾಕ್ಟರ್ ಸತೀಶ್ ರವರೊಂದಿಗೆ ಸಮಾಲೋಚನೆ ನಡೆಸಿದ ಸುಮಲತಾ ಜಿ.ಮಾದೇಗೌಡ ರವರು ಶೀಘ್ರ ಗುಣಮುಖರಾಗಲಿ ಎಂದು ಶುಭಹಾರೈಸಿದ್ರು.
ಮಾದೇಗೌಡರು ಮಂಡ್ಯದಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದ್ದು ರೈತ ಹೋರಾಟದ ಮುಂಚೂಣಿಯಲ್ಲಿದ್ದರು. ಅದರಲ್ಲು ಕಾವೇರಿ ಹೋರಾಟದ ನಾಯಕ ಎಂದೇ ಮಾದೇಗೌಡರನ್ನ ಇಂದಿಗು ಮಂಡ್ಯದಲ್ಲಿ ಹೆಸರುವಾಸಿ.