ಮೈಸೂರಿನಲ್ಲಿ ಲಸಿಕೆ ಅಭಿಯಾನಕ್ಕೆ ಯದುವೀರ್ ಹಾಗೂ ಶಾಸಕ ರಾಮದಾಸ್‌ರಿಂದ ಚಾಲನೆ!
1 min readಇಂದು ಮೈಸೂರಿನ 53ನೇ ವಾರ್ಡಿನ ಸಿದ್ದಾರ್ಥನಗರದ ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ ಶಾಸಕ ಎಸ್.ಎ ರಾಮದಾಸ್ ನೇತೃತ್ವದಲ್ಲಿ ಯದುವೀರ್ ಒಡೆಯರ್ ಸಮ್ಮುಖದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕುಮಾರಿ ಎನ್ ಹರ್ಷಿತ ಹಾಗೂ ಕುಮಾರಿ ಪೂಜಾ ಸಿಂಗ್ ಗೆ ಲಸಿಕೆ ಕೊಡುವ ಮುಖಾಂತರ ಉಚಿತ ವಾಕ್ಸಿನ್ ಡ್ರೈವ್‌ಗೆ ಚಾಲನೆ ನೀಡಲಾಯಿತು. ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ರಾಮದಾಸ್, ಈಗಾಗಲೇ 2 ನೇಯ ಕೋವಿಡ್ ಅಲೆಯ ಸಂದರ್ಭದಲ್ಲಿ ನಮ್ಮಲ್ಲಿರುವ 7 PHC ಗಳಲ್ಲಿ 62 ಸಾವಿರ ಕೋವಿಡ್ ಟೆಸ್ಟ್ ಅನ್ನು ಮಾಡಿದ್ದೇವೆ ಅಲ್ಲದೇ ಸುಮಾರು 47 ಸಾವಿರ ಜನಕ್ಕೆ ಲಸಿಕೆಯನ್ನು ನೀಡಲಾಗಿದೆ. 16 ಮತ್ತು 17ನೇ ತಾರೀಖಿನಂದು ಕೋವಿಡ್ ಪರೀಕ್ಷಾ ಅಭಿಯಾನ ಹಾಗೂ ಕೋವಿಡ್ ಲಸಿಕೆಗೆ ರಿಜಿಸ್ಟ್ರೇಷನ್ ಮಾಡುವ ಕೆಲಸವನ್ನು ಮಾಡಿದ್ದೆವು. ಲಸಿಕಾ ಅಭಿಯಾನಕ್ಕೆ ಇಂದು ಚಾಲನೆಯನ್ನು 53ನೇ ವಾರ್ಡಿನಿಂದ ಪ್ರಾರಂಭಿಸಿದ್ದೇವೆ. ಈ ವಾರ್ಡ್ ನಲ್ಲಿ ಅತೀ ಹೆಚ್ಚು ರಿಜಿಸ್ಟ್ರೇಷನ್ ಆಗಿದ್ದರಿಂದ ಈ ವಾರ್ಡಿನಿಂದ ಪ್ರಾರಂಭ ಮಾಡಿದ್ದೇವೆ. ಲಸಿಕೆ ಲಭ್ಯತೆಯ ಮೇರೆಗೆ ಕ್ಷೇತ್ರದ ಬೇರೆ ವಾರ್ಡ್ ಗಳಲ್ಲಿ ಮುಂದಿನ ದಿನಗಕಲ್ಲಿ ಲಸಿಕೆ ನೀಡಲಾಗುವುದು. ಮುಂದಿನ ಜೂನ್ 30ರ ಒಳಗೆ 18 ವರ್ಷ ಮೇಲ್ಪಟ್ಟವರಿಗೆ ಕೆ.ಆರ್ ಕ್ಷೇತ್ರದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಯೋಜನೆ ರೂಪಿಸಿದ್ದೇವೆ.
-ಯದುವೀರ್ ಒಡೆಯರ್ ಅವರನ್ನು ನಾವು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಬೇಕು ಎಂದು ಕೇಳಿಕೊಂಡಾಗ ಅವರು ಒಪ್ಪಿ ಬಂದು ಕಾರ್ಯಕ್ರಮದ ಉದ್ಘಾಟನೆ ನಡೆಸಿದ್ದು ಸಂತೋಷ ತಂದಿದೆ. ಯಾರು ಯೋಚಿಸಬೇಕಾಗಿಲ್ಲ ಎಲ್ಲರಿಗೂ ಲಸಿಕೆ ದೊರೆಯುತ್ತದೆ, ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ಹೇಳುತ್ತಿದ್ದಾರೆ ಅದನ್ನ ತಡೆಯುವುದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದರು.
ಯದುವೀರ್ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಕೋವಿಡ್ ನ ಪರಿಸ್ಥಿತಿ ನಮ್ಮೆದುರಿಗೆ ಇದೆ, ಕೋವಿಡ್ ನ ವಿರುದ್ಧ ಹೋರಾಡಲು ನಮ್ಮ ಬಳಿ ಇರುವ ಉತ್ತಮ ಮಾರ್ಗ ಎಂದರೆ ಲಸಿಕೆ ತೆಗೆದುಕೊಳ್ಳುವುದು. ನಾವೆಲ್ಲರೂ ಲಸಿಕೆಯನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದರು. ಇಂದು ಅಂತಾರಾಷ್ಟ್ರೀಯ ಯೋಗ ದಿನ, ಯೋಗ ಹಾಗೂ ಮೈಸೂರಿಗಿರುವ ಸಂಬಂಧ ನಮಗೆ ತಿಳಿದಿದೆ. ಮಾಡರ್ನ್ ಆಗಿ ನೋಡುತ್ತಿರುವ ಯೋಗವನ್ನು ಸಮಾಜಕ್ಕೆ ನೀಡಿದ ಕೊಡುಗೆ ಮೈಸೂರಿಗೆ ಸಲ್ಲುತ್ತದೆ. ಇಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಮಾನಸಿಕ ಸ್ಥಿರತೆ ಹಾಗೂ ಶಾರೀರಿಕ ಆರೋಗ್ಯಕ್ಕೆ ಯೋಗ ಅತಿ ಮುಖ್ಯವಾಗಿದೆ. ಲಸಿಕಾ ಅಭಿಯಾನ ಯಶಸ್ವಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾತು
ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ಮಾತನಾಡಿ
ಇಂದು ಕೆ.ಆರ್ ಕ್ಷೇತ್ರದಲ್ಲಿ ಲಸಿಕಾ ಅಭಿಯಾನದ ಉದ್ಘಾಟನೆ ನಡೆದಿದೆ. ನಾವು ಕೋವಿಡ್ ಎದುರಿಸಲು 2 ದಾರಿ ಇದೆ ಒಂದು RTPCR ಟೆಸ್ಟ್ ಗಳನ್ನ ಹೆಚ್ಚು ಮಾಡುವುದು ಎರಡನೆಯದು ಲಸಿಕೆ. ನಾನು ಶಾಸಕರಿಗೆ ಲಸಿಕಾ ಅಭಿಯಾನ ಹಮ್ಮಿಕೊಂಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದಷ್ಟು ಶೀಘ್ರ ಎಲ್ಲರಿಗೂ ಲಸಿಕೆ ಸಿಗುವತ್ತ ಕ್ರಮವನ್ನು ಕೈಗೊಳ್ಳುತ್ತೇನೆ ಎಂದರು.
HV ರಾಜೀವ್ ಮಾತು
ಹೆಚ್.ವಿ ರಾಜೀವ್ ಅವರು ಮಾತನಾಡಿ ಕೊರೊನಾ 2ನೇ ಅಲೆಯಲ್ಲಿ ಜನರು ಹೆಚ್ಚಿನ ಆತಂಕದಲ್ಲಿ ದಿನ ದೂಡುವಂತಾಗಿದೆ. ಕೆ.ಆರ್ ಕ್ಷೇತ್ರದಲ್ಲಿ ಈ ಹಿಂದೆ ಮಾಸಿವ್ ಟೆಸ್ಟ್ ಡ್ರೈವ್ ಅನ್ನು ಮಾಡಿದ್ದರು ಇದೀಗ ಆಂದೋಲನದ
ರೀತಿಯಲ್ಲಿ ಲಸಿಕಾ ಅಭಿಯಾನವನ್ನ ಹಮ್ಮಿಕೊಂಡಿದ್ದಕ್ಕಾಗಿ ಶಾಸಕರಿಗೆ ಧನ್ಯವಾದಗಳು. ಕೋವಿಡ್ ನಿಂದ ದೂರ ಇರುವ ಕೆಲಸ ನಾವು ದಿನನಿತ್ಯ ಮಾಡುತ್ತಿದ್ದೇವೆ. 2 ನೆ ಅಲೆ ಮನೆಗೆ ಆಧಾರಸ್ತಂಭ ವಾಗಿದ್ದವರನ್ನು ಕಳೆದುಕೊಂಡಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಇಷ್ಟು ದೊಡ್ಡ ಮಟ್ಟದಲ್ಲಿ ಲಸಿಕಾ ಅಭಿಯಾನವನ್ನು ದೇಶಾದ್ಯಂತ ನಡೆಸುತ್ತಿರುವ ಮೋದಿಜಿ ಸರ್ಕಾರಕ್ಕೆ ಧನ್ಯವಾದಗಳು. ಸರ್ವರಿಗೂ ಲಸಿಕೆ ನೀಡುವ ಈ ಕಾರ್ಯ ಕೆ.ಆರ್ ಕ್ಷೇತ್ರದಲ್ಲಿ ಆಗುತ್ತಿರುವುದು ಹೆಮ್ಮೆಯ ಸಂಗತಿ, ನಾವೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳೋಣ ಎಂದರು.
ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಮಾತು
ನಗರಪಾಲಿಕಾ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಇಡೀ ಕ್ಷೇತ್ರದಲ್ಲಿ ಪ್ರತಿಯೊಂದು ಬೂತ್ ಮಟ್ಟದಲ್ಲೂ ಸಹ ಟೆಸ್ಟಿಂಗ್ ಡ್ರೈವ್ ಅನ್ನು ಯಶಸ್ವಿಯಾಗಿ ಮಾನ್ಯ ಶಾಸಕರು ಮಾಡಿದ್ದಾರೆ. ಇದೀಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಲಸಿಕಾ ಲಭ್ಯತೆಯ ಮೇರೆಗೆ ಎಲ್ಲಾ ವಾರ್ಡ್ ಗಳಲ್ಲೂ ಹಾಗೂ ಇಡೀ ಮೈಸೂರಿಗೆ ವಿಸ್ತರಣೆ ಮಾಡುವ ಕೆಲಸ ವನ್ನು ಮುಂದಿನ ದಿನಗಳಲ್ಲಿ ಮಾಡುವವರಿದ್ದೇವೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಸ್ಥಳೀಯ ನಿವಾಸಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗಂಜಿಫಾ ಕಲಾವಿದರಾದ ರಘುಪತಿ ಭಟ್, ನಗರಪಾಲಿಕಾ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಮೂಡಾ ಅಧ್ಯಕ್ಷರಾದ ಹೆಚ್. ವಿ ರಾಜೀವ್ , ಸ್ಥಳೀಯ ನಗರಪಾಲಿಕಾ ಸದಸ್ಯರಾದ ಶ್ರೀಮತಿ ರೂಪ, ಬಿ.ವಿ ಮಂಜುನಾಥ್, ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿಗಳಾದ ಜೆ ನಾಗೇಂದ್ರಕುಮಾರ್, ಓಂ ಶ್ರೀನಿವಾಸ್,ಪ್ರಮುಖರಾದ ಮೈ.ಪು ರಾಜೇಶ್, ನೂರ್ ಫಾತಿಮಾ, ಸ್ಥಳೀಯ ವಾರ್ಡ್ ನಿವಾಸಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.