Photos: ಕೋವಿಡ್ ಹಿನ್ನೆಲೆ: ಮನೆಯಲ್ಲೆ ಯೋಗದಿನ ಆಚರಣೆ
1 min readಮೈಸೂರು: ಕೋವಿಡ್ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ನಗರ ಪಾಲಿಕೆ, ನೆಹರು ಯುವಕೇಂದ್ರ, ಯೋಗ ಫೆಡರೇಷನ್ ಆಫ್ ಮೈಸೂರು ಹಾಗೂ ಆಯುಷ್ ಇಲಾಖೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮನೆಯಲ್ಲೆ ಆನ್ ಲೈನ್ ಮೂಲಕ ಯೋಗಭ್ಯಾಸ ಮಾಡುವ ಮೂಲಕ ಯೋಗದ ಬಗ್ಗೆ ಅರಿವು ಮೂಡಿಸಲಾಯಿತು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮಿ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಮನೆಯಲ್ಲೇ ಯೋಗದಿನ ಆಚರಿಸುವ ಮೂಲಕ ಜಾಗೃತಿ ಮೂಡಿಸಿದರು.
ಜಿಲ್ಲೆಯ ಮಂಡಕಳ್ಳಿ,ವರಕೂಡು, ಯಲಚಗಳ್ಳಿ, ಹಾಗೂ ತಿ.ನರಸೀಪುರ ತಾಲ್ಲೂಕಿನ ಮಲೆಯೂರು, ನಂಜನಗೂಡು ತಾಲ್ಲೂಕಿನ ಮಹದೇವ ನಗರ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕೋವಿಡ್ ಸೋಂಕಿತರು ಒಂದೆ ಸ್ಥಳದಲ್ಲಿ ಇರುವ ಕಾರಣ ಅವರಿಗೆ ಸಿಸಿಸಿ ಗಳಲ್ಲಿ ಯೋಗ ಮಾಡಿಸುವ ಮೂಲಕ ಯೋಗಾಭ್ಯಾಸ ಮಾಡಿಸುವ ಮೂಲಕ ಯೋಗದ ಮಹತ್ವ ತಿಳಿಸಿಕೊಡಲಾಯಿತು.
ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನ ಹುಂಡಿಯ 60 ಜನರಿಗೆ ತರಬೇತಿ ನೀಡಿ, ಇಂದು ಯೋಗಾಭ್ಯಾಸ ಮೂಡಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಯೋಗವನ್ನು ಕಲಿಸುತ್ತಿರುವುದನ್ನು ಗಮನಿಸಿದ ಆಯುಷ್ ಇಲಾಖೆಯು ಮೆಚ್ಚುಗೆಯನ್ನು ವ್ಯಕ್ತಪಡಿಸಿತು.