ರಾಗಿ ಮುದ್ದೆಗೆ ರಾಷ್ಟ್ರೀಯ ಮನ್ನಣೆ ತಂದ ಮಣ್ಣಿನ ಮಗ ದೇವೇಗೌಡರು
1 min readಮೈಸೂರು: ನಿನ್ನೆಯ ದಿನಕ್ಕೆ ಕನ್ನಡದ ಮಣ್ಣಿನ ರೈತನೋರ್ವ ರಾಷ್ಟ್ರದ ಉನ್ನತ ಹುದ್ದೆ ಪ್ರದಾನಿಗಾದಿಗೆ (1-06-1996) ಏರಿ 25 ವರ್ಷಗಳು ಕಳೆದ ಸಂಭ್ರಮವನ್ನು ಇಂದು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ನಗರದ ಕೆ ಆರ್ ಆಸ್ಪತ್ರೆಯ ಸಮೀಪ ಕೋವಿಡ್ ರೋಗಿಗಳು ಹಾಗು ಅವರ ಸಂಬಂಧಿಕರಿಗೆ ದೇವೇಗೌಡರ ನೆಚ್ಚಿನ ಆಹಾರ ರಾಗಿ ಮುದ್ದೆ ಹಾಗು ಉಪ್ಪುಸಾರನ್ನು ಸಾಂಕೇತಿಕವಾಗಿ ಹಂಚುವ ಮೂಲಕ ಮಣ್ಣಿನ ಮಗನ ಸಾಧನೆಯನ್ನು ಸಾರಿದರು. ದೇವೇಗೌಡರು ದೇಶಧ ಉನ್ನತ ಹುದ್ದೆ ಏರಿದಾಗಲೂ ವಿದೇಶಗಳಿಗೆ ಹೋದಾಗಲು ಸಹ ಆಹಾರ ಪದ್ದತಿಯಲ್ಲಿ ಬದಲು ಮಾಡಿಕೊಳ್ಳಲಿಲ್ಲ ಇದುವೆ ಈಗಷ್ಟೇ ಕೋವಿಡ್ ಗೆದ್ದು ಬಂದ ಅವರ ಆರೋಗ್ಯದ ಗುಟ್ಟು.
ಈ ವೇಳೆ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ ಕನ್ನಡಿಗರ ಸ್ವಾಭಿಮಾನ ನೂರ್ಮಡಿಯಾದ ದಿನಕ್ಕೆ 25 ವರ್ಷಗಳು ಇದನ್ನು ಕನ್ನಡಿಗರಾದ ನಾವೆಲ್ಲಾ ಸಂಭ್ರಮಿಸಬೇಕಿತ್ತು ಆದರೆ ಕೊರೋನಾದ ಕರಾಳ ಸಮಯದವೇಳೆ ಮನದಲ್ಲಿ ಸಂಭ್ರಮಿಸಿದರು ಸಹ ಮಣ್ಣಿನಮಗನ ಮಹಾಯಾನ ಸಾರ್ಥಕವೆನಿಸುತ್ತದೆ ಎಂದರು ಮುಂದುವರೆದು
ದಿನಾಂಕ 1-06-1996 ರಂದು ಭಾರತದ 12ನೆಯ ಪ್ರಧಾನಮಂತ್ರಿಗಳಾಗಿ ಅಧಿಕಾರ ಮತ್ತು ಗೊಪ್ಯತೆಯ ಪ್ರಮಾಣವಚನ ಸ್ವೀಕರಿಸುವ ಮೂಲಕ ಕರ್ನಾಟಕದ ಮಣ್ಣಿನ ಮಗ ಸಾಧಾರಣ ರೈತ ಕುಟುಂಬದಿಂದ ಬಂದು ರಾಜಕೀಯ ಚಾಣಾಕ್ಷರೆನಿಸಿದ ಶ್ರೀ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಕನ್ನಡ ಮಣ್ಣಿನ ಸ್ವಾಭಿಮಾನದ ಸಂಕೇತವೆನಿಸಿದರು.
1994 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರು ಎಲ್ಲರ ದೃಷ್ಟಿ ದೇವೇಗೌಡರು ಮುಖ್ಯಮಂತ್ರಿ ಆಗಬೇಕು ಅಂತ ಹಾಗೇ ನೋಡಿದರೆ ಅದಕ್ಕೆ ಎರಡು ಅವಧಿಯ ಮುಂಚೆಯೇ ದೇವೇಗೌಡರು ಅರ್ಹರಾಗಿದ್ದರು ಆದರೆ ಹೆಗ್ಗಡೆಯವರ ಕುಟಿಲ ರಾಜಕೀಯ ತಂತ್ರ ಚುನಾವಣೆಗೆ ದುಡಿಯದೆ ಅನಾಯಾಸವಾಗಿ ಬಂದು ರಾಜ್ಯದ ಗದ್ದುಗೆ ಏರಿದ್ದರು, ಇಷ್ಟಾಗಿಯೂ ಸುಮ್ಮನಿರದ ಹೆಗ್ಗಡೆ ರಾಜ್ಯ ವೀಕ್ಷಕರಾಗಿ ಬಂದಿದ್ದ ಪ್ರತಿನಿಧಿಗಳ ಮುಂದೆ ಹೊಸ ವರಸೆಯನ್ನೇ ತೆಗೆದರು ದೇವೇಗೌಡರು ಮೌನದಿಂದಲೆ ಇದ್ದರು ಎರಡು ಅವಧಿಗೆ ಮುಖ್ಯಮಂತ್ರಿಗಾದಿಯಿಂದ ವಂಚಿತವಾಗಿದ್ದ ದೇವೇಗೌಡರ ಪರವಾಗಿ ಜನಾಕ್ರೋಶ ವ್ಯಕ್ತವಾಗಿತ್ತು ಪರಿಸ್ಥಿತಿ ಏನು ಬೇಕಾದರು ಆಗಬಹುದು ಎಂದರಿತ ಲಕ್ಷಾಂತರ ಜನ ವಿಧಾನಸೌಧದ ಬಳಿ ಜಮಾಯಿಸಿದರು ಎರಡು ದಿನಗಳ ಹಿಂದಷ್ಟೇ ಹೆಗ್ಗಡೆ ಈ ನಾಡು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಒಂದು ತಾಲ್ಲೂಕಿಗೂ ನಾಯಕರಾಗಲೂ ನಾಲಾಯಕ್ಕಾಗಿರುವ ದೇವೇಗೌಡರು ರಾಜ್ಯಕ್ಕೆ ನಾಯಕರಾಗಲು ಸಾಧ್ಯವೇ,,? ಎಂದು ನೀಡಿದ ಹೇಳಿಕೆ ಜನರ ಆಕ್ರೋಶಕ್ಕೆ ತುಪ್ಪ ಸುರಿದಂತಿತ್ತು ದೇಶಪಾಂಡೆ ಹೆಗ್ಗಡೆ ಅವರ ಮೇಲೆ ಮುಗಿಬಿದ್ದರು ಆಕ್ರೋಶಗೊಂಡ ಜನ ಹೆಗ್ಗಡೆ ಮೇಲೆ ಚಪ್ಪಲಿ ಸಹ ತೂರಿದರು,
11-12-1994 ರ ಸಂಜೆ ರಾಜ್ಯಪಾಲರಾದ ಶ್ರೀ ಖುರ್ಷಿದ್ ಆಲಂಖಾನ್ ಅವರಿಂದ ಪ್ರತಿಜ್ಣಾವಿಧಿ ಸ್ವೀಕರಿಸುವ ಮೂಲಕ ಕರ್ನಾಟಕದ 14 ನೇ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವಿಕರಿಸಿದ್ದರು ಮುಖ್ಯಮಂತ್ರಿಗಳಾಗಿ ಜನಾನುರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ದೇವೇಗೌಡರಿಗೆ 1996 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಅತಂತ್ರ ಪಲಿತಾಂಶ ಮತ್ತೊಂದು ಮಜಲಿಗೆ ಕೊಂಡೋಯಿತು ಭಾರತದ 12 ನೆಯ ಪ್ರಧಾನಮಂತ್ರಿಗಳಾಗಿ ಅಧಿಕಾರ ಸ್ವಿಕರಿಸಿದರು.
ಹೆಗ್ಗಡೆಯವರ ಹುಂಬುತನದ ಮಾತಿಗೆ ಎರಡು ವರ್ಷ ತುಂಬುವ ಮೊದಲೆ ದೇವೇಗೌಡರು ರಾಜ್ಯದ ಮತ್ತು ರಾಷ್ಟ್ರದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು ಇತಿಹಾಸದ ಪುಟಗಳಲ್ಲಿ ಶಾಸ್ವಥವಾಗಿದ್ದರು.
ಅಖಂಡ ಭಾರತದ ಇತಿಹಾಸದಲ್ಲಿ ಉತ್ತರ ಭಾರತೀಯರೆ ಇದುವರೆಗೂ ಭಾರತದ ಉನ್ನತ ಹುದ್ದೆಗೆ ಏರಿದವರು. ಇಂತಹ ರಾಜಕೀಯ ಸಂಕೀರ್ಣತೆಯನ್ನು ಹೊಂದಿರುವ ದೇಶದಲ್ಲಿ ಸ್ವಾತಂತ್ರ್ಯ ಬಂದ 44 ವರ್ಷಗಳ ನಂತರ ದಕ್ಷಿಣದ ಆಂಧ್ರಪ್ರದೇಶದ ಪಿ ವಿ ನರಸಿಂಹರಾವ್ ರವರು ಪ್ರಧಾನಿ ಆಗುತ್ತಾರೆ. 49 ವರ್ಷಗಳ ನಂತರ ಕರ್ನಾಟಕದ ದೇವೇಗೌಡರು ಪ್ರಧಾನಿ ಆಗುತ್ತಾರೆ. ದಕ್ಷಿಣ ರಾಜ್ಯದಿಂದ ಭಾರತಕ್ಕೆ ಒಬ್ಬ ಪ್ರಧಾನಿ ಮಂತ್ರಿ ಆಯ್ಕೆ ಆಗಲು ದಕ್ಷಿಣದ ವರು 44 ವರ್ಷ ಕಾಯಬೇಕಾಯಿತು. 25 ವರ್ಷಗಳ ನಂತರ ಕರ್ನಾಟಕದ ಮಾತು ಒತ್ತಟ್ಟಿಗಿರಲಿ ದಕ್ಷಿಣ ಭಾರತದಿಂದ ಆ ಹುದ್ದೆಯನ್ನು ಪ್ರತಿನಿಧಿಸುವ ಯಾವೊಬ್ಬ ನಾಯಕನು ಹೊಲಹೊಮ್ಮಿದ ಅಥವಾ ಹೊರಹೊಮ್ಮುವ ಯಾವ ಲಕ್ಷಣಗಳು ಕಾಣಸಿಗುತ್ತಿಲ್ಲ.
ದೇವೇಗೌಡರು ಪ್ರಧಾನಿ ಆಗಿ ಇಪ್ಪತ್ತೈದು ವರ್ಷಗಳು ಆಯಿತು ಅನ್ನುವ ನೆಪದಲ್ಲಿ ನಾವೆಲ್ಲರೂ ಭಾರತ ನಿಜವಾಗಿಯೂ ಒಕ್ಕೂಟ ವ್ಯವಸ್ಥೆಯಾಗಿ ಉಳಿದಿದಿಯೇ, ದಕ್ಷಿಣ ರಾಜ್ಯಗಳಿಗೆ ದೆಹಲಿ ಅಧಿಕಾರದಲ್ಲಿ ಸಮಪಾಲು ಇದೆಯೇ, ದಕ್ಷಿಣ ರಾಜ್ಯಗಳನ್ನು ಉತ್ತರದ ರಾಜ್ಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆ ಮಾಡುತ್ತಿಲ್ಲವೇ ಅನ್ನುವ ಪ್ರಮುಖ ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಚರ್ಚೆ ನಡೆಸಿ ಒಂದು ರಾಜಕೀಯ ಪರಿಹಾರವನ್ನು ನಾವುಗಳು ಕಂಡುಕೊಳ್ಳಬೇಕು.
ಕೊರೋನಾದ ಸಂಕಷ್ಟ ಬೇಗ ಕಳೆದು ನಾಡು ಸಹಜಸ್ಥಿತಿಗೆ ಮರಳಲಿ ಎಂದು ಪ್ರಾರ್ಥಿಸಲಾಯಿತು ಸಂಕಷ್ಟದ ಈ ಸಮಯದ ಕಾರ್ಯಕ್ರಮ ದೇವೇಗೌಡರ ಬದ್ದತೆ ಹಾಗು ಸರಳತೆಯನ್ನು ಸಾರುವುದೇ ಹೊರತು ಪ್ರಚಾರಕ್ಕಾಗಿಯಲ್ಲ..
ಈ ವೇಳೆ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ, ಕಾರ್ಯದರ್ಶಿ ರವಿ ಎ, ಮಾಜಿ ಮಹಾನಗರಪಾಲಿಕೆ ಸದಸ್ಯರು ಪಿಜಿ ಫೌಂಡೇಶನ್ ಅಧ್ಯಕ್ಷರಾದ ಪಿ ಪ್ರಶಾಂತ್ ಗೌಡ, ದಂತ ವೈದ್ಯ ಲೋಕೇಶ್, ಇತರರು ಹಾಜರಿದ್ದರು