SSLC, PUC ಪರೀಕ್ಷೆ ರದ್ದುಮಾಡಿ ಎಂದು ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ

1 min read

ಮೈಸೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ರವರು ನಗರದ ಆರ್ ಗೇಟ್ ಬಳಿ ಕೊರೋನ ಸೋಂಕು ಇರುವುದರಿಂದ SSLC & PUC ಪರೀಕ್ಷೆಗಳು ರದ್ದಾಗಬೇಕು, ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಏಕಾಂಗಿಯಾಗಿ ಕಪ್ಪು ಬಟ್ಟೆಯ ಮಲಗಿ ಪ್ರತಿಭಟನೆ ನಡೆಸಿದರು.

ಬಳಿಕ ಮಾಧ್ಯಮದ ಮೂಲಕ ಮಾತನಾಡಿದ ಅವರು ಕೊರೋನ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರೇ ಸ್ವಯಂ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ 25 ಸಾವಿರ ಜನರು ಸತ್ತಿದ್ದಾರೆ ಹಾಗೂ ಸಾವಿರಾರು ಜನರು ಆಮ್ಲಜನಕ ಇಲ್ಲದೆ ಸತ್ತಿದ್ದಾರೆ. ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಅನೇಕ ಜನರು ಸತ್ತಿದ್ದಾರೆ.

ಸಚಿವರಾದ ಅರ್.ಅಶೋಕ ರವರು ಅನಾಥ ಶವಗಳ ಬೂದಿ ಬಿಡಲು‌ ಬಂದಿದ್ದಾರೆ. ಪ್ರಾಮಾಣಿಕ ವಾಗಿ ಹೆಳಿ ಸೋಂಕು ತಗುಲಿದ ಜನರಿಗೆ ಏನು ವ್ಯವಸ್ಥೆ ಮಾಡಿದ್ದೀರಿ. ಸಾವಿನ ಹೊಣೆ ಸಿಎಂ ಹೊರಬೇಕು ಹಾಗೂ ಅಧಿಕಾರ‌ ಬಿಡಬೇಕು. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಅಮಾಯಕ ಜನರು ಸತ್ತರು. ಯಾರಿಗೆ ಶಿಕ್ಷೆ ಕೊಟ್ಟಿದ್ದೀರಿ. ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋಗೇ ಇಲ್ಲ. ಚಾಮರಾಜನಗರವನ್ನು ಕಡೆಗಣಿಸಿದ್ದೀರಿ.‌ ನಿಮ್ಮ‌ ಮೌಡ್ಯಕ್ಕೆ ಏನು ಹೇಳಲಿ.

24 ಜನರ ಸಾವಿಗೆ ಸರ್ಕಾರವೇ‌ ನೇರ ಕಾರಣ, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಸ್ತುವಾರಿ ಸಚಿವ ಹಾಗೂ ‌‌ಸಿಎಂ ರಾಜೀನಾಮೆ ನೀಡಬೇಕು. ಶೀಘ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ನೇರವಾಗಿ ಜೈಲಿಗೆ ಕಳಿಸಿ.

SSLC & PUC ಪರೀಕ್ಷೆ ಬಗ್ಗೆ ನಿಮ್ಮ ನಿರ್ಧಾರ ಏನು?. ಆನ್ಲೈನ್ ಗ್ರಾಮೀಣ ‌ವಿದ್ಯಾರ್ಥಿಗಳಿಗೆ ನರಕ. ಕೇಂದ್ರ ಸರ್ಕಾರ CBSC ಸಂಪೂರ್ಣ ರದ್ದು ಮಾಡಿದ್ದಾರೆ. ಮಕ್ಕಳ ಆರೋಗ್ಯ ಪ್ರಾಣ ಮುಖ್ಯ ಮಕ್ಕಳ ವಿಚಾರದಲ್ಲಿ ಚೆಲ್ಲಾಟ ಆಡಬೇಡಿ.

ಮೈಸೂರಿನ ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ‌ ಸಿಂಧೂರಿ ರವರು ದಕ್ಷ ಆಡಳಿತಗಾರರು. ಇಂತಹ ದಕ್ಷ ಅಧಿಕಾರಿಗಳಿಗೆ ನಾವು ಗೌರವ ನೀಡಬೇಕು ಹಾಗೂ ಅವರ‌ ಕೆಲಸಕ್ಕೆ ಗೌರವ ನೀಡಬೇಕು. ಇವತ್ತು ಅವರನ್ನು ಟೀಕೆ ಮಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ. ಇಂತಹವರು ಮೈಸೂರಿಗೆ ಬೇಕು.

ಮೈಸೂರಿನ 25 ವರ್ಷದ ಭೂ ಮಾಫಿಯಾ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಇದರಿಂದ ಎಷ್ಟು ಲಕ್ಷ ಕೋಟಿ ಸರ್ಕಾರಕ್ಕೆ ಬರಬೇಕು?. ಸಮಗ್ರವಾಗಿ ತನಿಖೆ‌ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮೈಸೂರಿಗೆ ಬಂದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

About Author

Leave a Reply

Your email address will not be published. Required fields are marked *